Thursday 18th, April 2019
canara news

ಕೊಂಕಣಿ ಅಕಾಡೆಮಿ: ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನಕ್ಕೆ ಅರ್ಜಿ ಆಹ್ವಾನ

Published On : 06 Dec 2018   |  Reported By : Rons Bantwal


ಮುಂಬಯಿ,ಡಿ.05: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2018ನೇ ಸಾಲಿನಲ್ಲಿ ಕೊಂಕಣಿ ಸಾಹಿತ್ಯ, ಕೊಂಕಣಿ ಕಲೆ, ಕೊಂಕಣಿ ಜಾನಪದ ಈ ಮೂರು ವಿಭಾಗಗಳಲ್ಲಿ ಜೀವಮಾನದ ಸಾಧನೆಗಾಗಿ ಅರ್ಹರಿಂದ ಗೌರವ ಪ್ರಶಸ್ತಿಗಳಿಗಾಗಿ ಅರ್ಜಿ ಕರೆಯಲಾಗಿದೆ. ಈ ಪ್ರಶಸ್ತಿಯು ರೂ.50,000/- ಗೌರವಧನ, ಶಾಲು, ಸ್ಮರಣಿಕೆ, ಹಾರ, ಪ್ರಮಾಣಪತ್ರ ಫಲತಾಂಬೂಲವನ್ನು ಒಳಗೊಂಡಿದೆ. ಸಾಧಕರು ನೇರವಾಗಿ ಅರ್ಜಿ ಸಲ್ಲಿಸ ಬಹುದಾಗಿದೆ. ಸಂಘ ಸಂಸ್ಥೆಗಳು, ಸಾರ್ವಜನಿಕರೂ ಸಹ ಸಾಧಕರ ಹೆಸರು ಸೂಚಿಸಿ ಅರ್ಜಿ ಸಲ್ಲಿಸಬಹುದು.

ಗೌರವ ಪ್ರಶಸ್ತಿ 2018 ಮತ್ತು ಪುಸ್ತಕ ಬಹುಮಾನ 2018:
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2018 ರ ಕ್ಯಾಲೆಂಡರ್ ವರ್ಷದಲ್ಲಿ (ಜನವರಿ 1 ರಿಂದ ಡಿಸೆಂಬರ್ 31) ಪ್ರಕಟಿತವಾದ (1) ಕೊಂಕಣಿ ಕವನ ಅಥವಾ ಲೇಖನ ಅಥವಾ ವಿಮರ್ಶೆ (2) ಕೊಂಕಣಿ ಸಣ್ಣಕತೆ ಅಥವಾ ಕಾದಂಬರಿ ಅಥವಾ ಅಧ್ಯಯನ ಕೃತಿ.(3) ಕೊಂಕಣಿಗೆ ಭಾಷಾಂತರಿಸಿದ ಕೃತಿ ಬಗ್ಗೆ ಲೇಖಕರಿಂದ, ಪ್ರಕಾಶಕರಿಂದ ಪುಸ್ತಕ ಬಹುಮಾನಕ್ಕಾಗಿ ಪುಸ್ತಕದ 4 ಪ್ರತಿಗಳ ಜೊತೆಗೆ ಅರ್ಜಿಯನ್ನು ಅಹ್ವಾನಿಸಲಾಗಿದೆ. ಪುಸ್ತಕ ಬಹುಮಾನವು ರೂ.25,000/-ಗೌರವಧನ, ಶಾಲು, ಸ್ಮರಣಿಕೆ, ಹಾರ, ಪ್ರಮಾಣಪತ್ರ, ಫಲತಾಂಬೂಲವನ್ನು ಒಳಗೊಂಡಿದೆ.

ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿ-2018 ಹಾಗೂ ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವವರು ಕೊಂಕಣಿ ಅಕಾಡೆಮಿ ಪುಸ್ತಕ ಬಹುಮಾನ ಯೋಜನೆ-2018 ಎಂದು ಕಡ್ಡಾಯವಾಗಿ ಬರೆದು, ರಿಜಿಸ್ಟ್ರಾರ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಮಹಾನಗರ ಪಾಲಿಕೆ ಕಟ್ಟಡ, ಲಾಲ್‍ಭಾಗ್ ಮಂಗಳೂರು-3 ಇವರಿಗೆ ದಿನಾಂಕ 15-01-2019 ರೊಳಗಾಗಿ ಕಳುಹಿಸಿಕೊಡುವಂತೆ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಪತ್ರಿಕಾ ಪ್ರಕಣೆಯಲ್ಲಿ ವಿನಂತಿಸಿದ್ದಾರೆ.

 
More News

ಬಿಲ್ಲವ ಭವನದಲ್ಲಿ ಗುರುವಾರದ ಶ್ರೀ ಗುರು ಅನ್ನ ಪ್ರಸಾದ ಅನ್ನದಾನಕ್ಕೆ ಚಾಲನೆ  ಬಿಲ್ಲವರು ಸರ್ವರನ್ನು ಗೌರವಿಸುವ ಸಂಸ್ಕಾರವುಳ್ಳವರು-ಯೋಗಿಶ್ ಶೆಟ್ಟಿ ಜೆಪ್ಪು
ಬಿಲ್ಲವ ಭವನದಲ್ಲಿ ಗುರುವಾರದ ಶ್ರೀ ಗುರು ಅನ್ನ ಪ್ರಸಾದ ಅನ್ನದಾನಕ್ಕೆ ಚಾಲನೆ ಬಿಲ್ಲವರು ಸರ್ವರನ್ನು ಗೌರವಿಸುವ ಸಂಸ್ಕಾರವುಳ್ಳವರು-ಯೋಗಿಶ್ ಶೆಟ್ಟಿ ಜೆಪ್ಪು
ಬಂಟರ ಸಂಘ ಬೆಂಗಳೂರು ಸಂಭ್ರಮಿಸಿದ `ಬಿಸು ಪರ್ಬ-2019'
ಬಂಟರ ಸಂಘ ಬೆಂಗಳೂರು ಸಂಭ್ರಮಿಸಿದ `ಬಿಸು ಪರ್ಬ-2019'
ಬಂಟರ ಸಂಘ ಮುಂಬಯಿ ಸಂಭ್ರಮಿಸಿದ ವಿಶ್ವ ಬಂಟರ ದಿನಾಚರಣೆ  ಬಿಸು ಪರ್ಬ-ವಾರ್ಷಿಕ ಸ್ನೇಹ ಸಮ್ಮೀಲನ-ಸರ್ವೋತ್ಕೃಷ್ಟ ಬಂಟ ಸಾಧಕ ಪುರಸ್ಕಾರ ಪ್ರದಾನ
ಬಂಟರ ಸಂಘ ಮುಂಬಯಿ ಸಂಭ್ರಮಿಸಿದ ವಿಶ್ವ ಬಂಟರ ದಿನಾಚರಣೆ ಬಿಸು ಪರ್ಬ-ವಾರ್ಷಿಕ ಸ್ನೇಹ ಸಮ್ಮೀಲನ-ಸರ್ವೋತ್ಕೃಷ್ಟ ಬಂಟ ಸಾಧಕ ಪುರಸ್ಕಾರ ಪ್ರದಾನ

Comment Here