Monday 7th, July 2025
canara news

ಗುರುಪುರ ಬಂಟರ ಮಾತೃ ಸಂಘದ ಕ್ರೀಡಾಕೂಟದ ಸಮಾರೋಪ

Published On : 06 Dec 2018   |  Reported By : Rons Bantwal


ಸಮಾಜದ ಕೆಳಸ್ತರದವರ ಗುರುತಿಸುವಿಕೆ ಅಭಿನಂದನೀಯ-ಶಾಸಕ ಭರತ್ ಶೆಟ್ಟಿ

ಮುಂಬಯಿ (ಗುರುಪುರ), ಡಿ.05: ಬಂಟ ಸಮಾಜದ ಅತಿ ಕೆಳಸ್ತರದವರನ್ನು ಗುರುತಿಸಿ ಪೆÇ್ರ್ರೀತ್ಸಾಹಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸ. ಈ ಸಂಘವು ಬಂಟ ಸಮಾಜದ ಶ್ರೇಷ್ಠ ಸಂಘಟನೆಯಾಗಿ ಉನ್ನತಿಯಾಗಲಿ ಎಂದು ಗಂಜಿಮಠದ ರಾಜ್ ಅಕಾಡೆಮಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಆಯೋಜಿಸಲಾದ ಗುರುಪುರ ಬಂಟರ ಮಾತೃ ಸಂಘದ ಸಮಾರೋಪ ಸಮಾರಂಭದಲ್ಲಿ ಶಾಸಕ ಡಾ. ವೈ.ಭರತ್ ಶೆಟ್ಟಿ ಹೇಳಿದರು.

ಬಹುಮಾನ ವಿತರಿಸಿ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಿಜಯಪ್ರಸಾದ್ ಆಳ್ವ, ಸಂಘವು ನಡೆಸುತ್ತಿರುವ ಬಂಟ ಸಮಾಜದ ಕಳಕಳಿಯ ಕೆಲಸಗಳ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತ, ಸಂಘದಿಂದ ಇನ್ನೂ ಹೆಚ್ಚಿನ ಸಮಾಜಮುಖಿ ಕೆಲಸಗಳು ನಡೆಯಲಿ ಮತ್ತು ಅವುಗಳಿಗೆ ನನ್ನ ಸಹಕಾರವಿದೆ ಎಂದರು.

ವೇದಿಕೆಯಲ್ಲಿ ಎಡಪದವು ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮುರಳೀಧರ ಶೆಟ್ಟಿ, ಶಿಕ್ಷಕ ದಯಾನಂದ ಮಾಡ, ಪ್ರೇಮನಾಥ ಶೆಟ್ಟಿ, ಶಶಿಧರ ಶೆಟ್ಟಿ, ಚಂದ್ರಹಾಸ ಶೆಟ್ಟಿ ನಾರಳ, ಸುಹಾಸ್ ಅಧಿಕಾರಿ, ಭೋಜ ಮೇಂಡ, ರವಿರಾಜ ಶೆಟ್ಟಿ ಕಾರಮೊಗರುಗುತ್ತು, ಸಂಘದ ಮಹಿಳಾ ಘಟಕಾಧ್ಯಕ್ಷೆ ಸುನಿತಾ ಶೆಟ್ಟಿ ವಾಮಂಜೂರು, ಜಯಲಕ್ಷ್ಮೀ ಶೆಟ್ಟಿ, ವಿಜಯಲಕ್ಷ್ಮೀ ಶೆಟ್ಟಿ, ಇಂದ್ರಾಕ್ಷಿ ಶೆಟ್ಟಿ ಮೊದಲಾದವರು ಇದ್ದರು. ನಿವೃತ್ತ ಅಧ್ಯಾಪಕ ದಾಮೋದರ ಮೇಂಡರ ಅವರನ್ನು ಸನ್ಮಾನಿಸಲಾಯಿತು.

ಕ್ರೀಡಾಕೂಟದಲ್ಲಿ ಸಂಘದ ವ್ಯಾಪ್ತಿಗೊಳಪಟ್ಟ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಅಧ್ಯಕ್ಷತೆ ವಹಿಸಿದ್ದರು. ಯುವ ವಿಭಾಗಾಧ್ಯಕ್ಷ ಉದಯ ಶೆಟ್ಟಿ ಸ್ವಾಗತಿಸಿದರು. ಸುದರ್ಶನ ಶೆಟ್ಟಿ ಪೆರ್ಮಂಕಿ ಪ್ರಾಸ್ತಾವಿಕ ನುಡಿದರು. ಜಯರಾಮ ಶೆಟ್ಟಿ ಉಳಾಯಿಬೆಟ್ಟು ಬಹುಮಾನಿತರ ಪಟ್ಟಿ ವಾಚಿಸಿದರು. ರಾಜೀವ ಶೆಟ್ಟಿ ಸಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here