Wednesday 14th, May 2025
canara news

ಆನಂದತೀರ್ಥ ವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ

Published On : 07 Dec 2018   |  Reported By : Gurudatt Somayaji


ಕುಂಜಾರುಗಿರಿ ಪಾಜಕದಲ್ಲಿರುವ ಆನಂದತೀರ್ಥ ವಿದ್ಯಾಲಯದಲ್ಲಿ "ಪುರಾಣದ ಕಥೆಗಳ ಮಹತ್ವ" ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಡಿಸೆಂಬರ್ 5 ರಂದು ಜರುಗಿತು. ಉಪನ್ಯಾಸಕರಾಗಿ ಬೆಂಗಳೂರಿನ ಪಿಇಎಸ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಕೃಷ್ಣರಾಜ ಕುತ್ಪಾಡಿ ಆಗಮಿಸಿದ್ದರು . "ಭಾರತೀಯ ಪೌರಾಣಿಕ ಕಥೆಗಳು ಮಾನವೀಯತೆ ಮತ್ತು ಭಾರತೀಯತೆಯ ಅಂಶಗಳನ್ನು ಮನದಟ್ಟು ಮಾಡಿಸುತ್ತವೆ . ವಿಜ್ಞಾನ ಕ್ಷೇತ್ರಕ್ಕೆ ಜಗತ್ತಿಗೆ ಮೊತ್ತಮೊದಲಾಗಿ ಕೊಡುಗೆಯನ್ನಿತ್ತವರು ಶ್ರೀ ಮಧ್ವಾಚಾರ್ಯರು . ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಪುರಾಣ ಕಥೆಗಳು ಸಹಕಾರಿ " ಎಂದು ಅವರು ಅಭಿಪ್ರಾಯಪಟ್ಟರು .

ಕಾರ್ಯಕ್ರಮ ಸಂಯೋಜಕ ಯದುನಂದನ ಹೆಬ್ಬಾರ್ , ದತ್ತಾತ್ರೇಯ , ಸಂಸ್ಥೆಯ ಆಡಳಿತಾಧಿಕಾರಿ ಗುರುದತ್ ಸೋಮಯಾಜಿ , ಪ್ರಾಂಶುಪಾಲೆ ಗೀತಾ ಎಸ್ ಕೋಟ್ಯಾನ್ ಮತ್ತು ಶಿಕ್ಷಕ - ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here