Wednesday 14th, May 2025
canara news

ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್‍ನ ತಾಲೂಕು ಮಟ್ಟದ ಹತ್ತೊಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾರೀ ಸಿದ್ಧತೆ

Published On : 08 Dec 2018   |  Reported By : Rons Bantwal


ಮುಂಬಯಿ, ಡಿ.07: ಬಂಟ್ವಾಳ ತಾಲೂಕು ಇಲ್ಲಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಭಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಬಂಟ್ವಾಳ ತಾಲೂಕು ಮಟ್ಟದ 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧಗೊಂಡಿದೆ. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಲ್ಲಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಭಾಂಗಣದಲ್ಲಿ ಇಂದು ಮತ್ತು ನಾಳೆ (ಡಿ.7-8) ನಡೆಯಲಿರುವ ತಾಲೂಕು ಮಟ್ಟದ 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾರೀ ಸಿದ್ಧತೆ ನಡೆದಿದೆ. ಈಗಾಗಲೇ ಸಭಾಂಗಣ ಮಾತ್ರವಲ್ಲದೆ ಕನ್ನಡ ಭುವನೇಶ್ವರಿ ಮೆರವಣಿಗೆ ಸಾಗುವ ತುಂಬೆ-ಫರಂಗಿಪೇಟೆ ರಸ್ತೆಯುದ್ದಕ್ಕೂ ಕನ್ನಡ ಬಾವುಟ ರಾರಾಜಿಸುತ್ತಿದೆ.

   

Prof.K.Thukarama Poojary                         Y S V Datta

ಪೆÇ್ರ| ಕೆ.ತುಕಾರಾಮ ಪೂಜಾರಿ-ಸಮ್ಮೇಳನಾಧ್ಯಕ್ಷರು:
ಸಮ್ಮೇಳನಾಧ್ಯಕ್ಷ ಪೆÇ್ರ| ಕೆ.ತುಕಾರಾಮ ಪೂಜಾರಿ ಅವರು ಬಂಟ್ವಾಳ ಎಸ್‍ವಿಎಸ್ ಪದವಿ ಕಾಲೇಜಿನಲ್ಲಿ ರಾಜಕೀಯ ಶಾಶ್ತ್ರ ವಿಭಾಗ ಮುಖ್ಯಸ್ಥರಾಗಿ, ಉಪ ಪ್ರಾಂಶುಪಾಲರಾಗಿ, ಬಿ.ಸಿ.ರೋಡು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷರಾಗಿ ರಾಣಿ ಅಬ್ಬಕ್ಕ ವಸ್ತು ಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ಮುನ್ನಡೆಸುತ್ತಿದ್ದಾರೆ. ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದ ಇವರು ವಿವಿಧ ಪುಸ್ತಕಗಳ ಸಂಪಾದನೆ ಮತ್ತು ಪ್ರಕಟಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ.

ವೈಎಸ್.ವಿ.ದತ್ತ - ಸಮ್ಮೇಳನ ಉದ್ಘಾಟಕರು:
ಇದೇ 7ರಂದು ಸಂಜೆ 4ಗಂಟೆಗೆ ಸಮ್ಮೇಳನ ಉದ್ಘಾಟಿಸಲಿರುವ ಹಿರಿಯ ಚಿಂತಕ ವೈ.ಎಸ್.ವಿ ದತ್ತ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನವರು. ಯುಗಟಿ ಸೂರ್ಯನಾರಾಯಣ ರಾವ್ ವೆಂಕಟೇಶ್ವರಯ್ಯ ದತ್ತ ಇವರ ಪೂರ್ಣ ಹೆಸರು. ಹಿರಿಯ ಸಾಹಿತಿ ಕೀ.ರಂ.ನಾಗರಾಜ್ ಅವರಿಂದ ಬಾಲ್ಯದಿಂದಲೇ ಇವರು ಸಾಹಿತ್ಯದ ಬಗ್ಗೆ ಒಲವು ಗಳಿಸಿಕೊಂಡವರು.

ಬಿಎಸ್ಸಿ ಪದವೀಧರರಾಗಿರುವ ಇವರು 40ವರ್ಷ ಎಸ್‍ಎಸ್‍ಎಲ್‍ಸಿ, ಪಿಯೂಸಿ ಮತ್ತು ಬಿಎಸ್ಪಿ ವಿದ್ಯಾಥಿರ್üಗಳಿಗೆ ಟ್ಯುಟೋರಿಯಲ್ ಮೂಲಕ ಗಣಿತ ಮತ್ತು ರಸಾಯನಶಾಸ್ತ್ರ ಬೋಧಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ ಅವರ ಕರೆಯಂತೆ ರಾಜಕೀಯ ಪ್ರವೇಶಿಸಿ, ವಿಧಾನಪರಿಷತ್-6ವರ್ಷ, ವಿಧಾನಸಭೆ-5ವರ್ಷ ಹೀಗೆ 11-ವರ್ಷಗಳಲ್ಲಿ ರಾಜಕೀಯ ರಂಗದಲ್ಲಿ ಅಪರೂಪದ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದಾರೆ.

ಬಂಟ್ವಾಳ ಕಸಾಪ ಅಧ್ಯಕ್ಷ ಕೆ.ಮೋಹನ ರಾವ್, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ.ಕೃಷ್ಣಕುಮಾರ್ ಪೂಂಜ, ಸಮಿತಿ ಅಧ್ಯಕ್ಷ ಕೆ.ಎನ್.ಗಂಗಾಧರ ಆಳ್ವ ಮತ್ತಿತರರ ನೇತೃತ್ವದಲ್ಲಿ ವಿವಿಧ ಉಪ ಸಮಿತಿ ಪದಾಧಿಕಾರಿಗಳು ಮತ್ತು ಊರಿನ ನಾಗರಿಕರು ಸಮ್ಮೇಳನದ ಯಶಸ್ವಿಯಾಗಿ ಶ್ರಮಿಸುತ್ತಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here