Wednesday 14th, May 2025
canara news

ಡಿ.08: ಮಲಾಡ್ ಪಶ್ಚಿಮದ ಸೈಂಟ್ ಜೂಡ್ ಹೈಸ್ಕೂಲ್‍ನಲ್ಲಿ ಮಲಾಡ್ ಕನ್ನಡ ಸಂಘದ ಮಕ್ಕಳಿಗಾಗಿ ಪ್ರತಿಭಾನ್ವೇಷಣೆ ಸ್ಪರ್ಧೆ

Published On : 07 Dec 2018   |  Reported By : Rons Bantwal


ಮುಂಬಯಿ, ಡಿ.08: ಮುಂಬಯಿ ಮಹಾನಗರದ ಹೆಸರಾಂತ ಸಂಸ್ಥೆ ಮಲಾಡ್ ಕನ್ನಡ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳಿಗಾಗಿ ಪ್ರತಿಭಾನ್ವೇಷಣೆ ಸ್ಪರ್ಧೆಯನ್ನು (ಖಿಚಿಟeಟಿಣ Seಚಿಡಿಛಿh ಅomಠಿeಣiಣioಟಿ) ಆಯೋಜಿಸಿದೆ.

  

 Padmanabh S Payyade                       Babu S. Shetty Malad

   

            Harish N.Shetty                         Shankar D. Poojary (Vice President

ಇದೇ ಡಿ. 09ರ ರವಿವಾರ ಬೆಳಿಗ್ಗೆ 9.30 ಘಂಟೆಗೆ ಸೈಂಟ್ ಜೂಡ್‍ಸ್ ಹೈಸ್ಕೂಲ್ ವಠಾರ, ಅಭ್ಯುದಯ ಬ್ಯಾಂಕ್‍ನ ಹತ್ತಿರ, ಜನಕಲ್ಯಾಣ ನಗರ, ಮಾರ್ವೆ ರೋಡ್, ಮಲಾಡ್ ಪಶ್ಚಿಮ, ಮುಂಬಯಿ ಇಲ್ಲಿ ನಡೆಸಲ್ಪಡುವ ಸ್ಪರ್ಧೆಲ್ಲಿ ಪ್ರಬಂಧ ಸ್ಪರ್ಧೆ, ಸಾಮಾನ್ಯ ಜ್ಞಾನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಗಾಯನ ಹಾಗೂ ನೃತ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮಧ್ಯಾಹ್ನ 1.00 ಘಂಟೆಗೆ ಸಂಘದ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಂಘದ ಗೌರವಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಉಪಸ್ಥಿತಿಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಹೋಟೇಲ್ ಉದ್ಯಮಿ ಬಾಬು ಎಸ್.ಶೆಟ್ಟಿ ಹಾಗೂ ಅತಿಥಿüಯಾಗಿ ಏರ್‍ಇಂಡಿಯಾ ಸಂಸ್ಥೆಯ ನಿವೃತ್ತ ಅಧಿಕಾರಿ ಮಾರಿ ಮುತ್ತು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪರಿಸರದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಾಗೂ ತಮ್ಮ ಮಕ್ಕಳನ್ನು ಪಾಲಕರು ಭಾಗವಹಿಸಲು ಪ್ರೇರೇಪಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಶಂಕರ್ ಡಿ.ಪೂಜಾರಿ ಹಾಗೂ ಕೋಶಾಧಿಕಾರಿ ಪ್ರಕಾಶ್ ಎಸ್.ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಈಮೂಲಕ ವಿನಂತಿಸಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here