Thursday 28th, March 2024
canara news

ಡಿ.15: ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ 74ನೇ ವಾರ್ಷಿಕ ಶನಿಪೂಜೆ-ಅಮೃತ ಮಹೋತ್ಸವ ಸಂಭ್ರಮಕ್ಕೆ ಚಾಲನೆ

Published On : 09 Dec 2018   |  Reported By : Rons Bantwal


ಮುಂಬಯಿ, ಡಿ.09: ಮುಂಬಯಿ ಫೆÇೀರ್ಟ್ (ವಿಟಿ) ಪರಿಸರದಲ್ಲಿ ಕಳೆದ ಸುಮಾರು ಏಳುವರೆ ದಶಕಗಳ ಹಿಂದೆ ಸ್ವರ್ಗೀಯ ಕೆ.ಕೆ ಕೋಟ್ಯಾನ್ ಮುಂದಾಳತ್ವ ಹಾಗೂ ನಾರಾಯಣ ಬಿ.ಸಾಲ್ಯಾನ್ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ (ರಿ.) ತನ್ನ 74ನೇ ವಾರ್ಷಿಕ ಶನಿ ಮಹಾ ಪೂಜೆ ಮತ್ತು ಅಮೃತ ಮಹೋತ್ಸವ ವರ್ಷದÀ ಉದ್ಘಾಟನಾ ಸಂಭ್ರಮಕ್ಕೆ ಇದೇ ಡಿ.15ನೇ ಶನಿವಾರ ಅದ್ದೂರಿಯಾಗಿ ಚಾಲನೆಯನ್ನೀಡಲಿದೆ.

  

Suvarna Baba                       Ashok Purohit

   

Harish Garnish                   Bhaskar Shetty CBD

  

 N T Poojary                    J J Kotyan

ಸಮಿತಿಯ ಬೆಳ್ಳಿ ಹಬ್ಬ, ಕನಕ ಮಹೋತ್ಸವ, ವಜ್ರಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದು, ಇದೀಗ ವೈಭವೋಲ್ಲಾಸದಿಂದ ಅಮೃತ ಮಹೋತ್ಸವ ಆಚರಿಸುವ ಪೂರ್ವಸಿದ್ಧತೆ ನಡೆಸಿದೆ. ಆ ಪ್ರಯುಕ್ತ ಸಮಿತಿಯ ವಠಾರದಲ್ಲಿ ನಿತ್ಯಪೂಜೆ, ಪ್ರತಿ ಶನಿವಾರ ಗ್ರಂಥ ಪಾರಾಯಣ, ಶನಿಪೂಜೆ ಹರಕೆ ಸೇವೆಗಳು ನಿರಂತರ ನಡೆಸಲಾಗುತ್ತಿದ್ದು, ವಿವಿಧ ಸಂಘಸಂಸ್ಥೆಗಳ ಆಹ್ವಾನದ ಮೇರೆಗೆ ಹಾಗೂ ಶನೈಶ್ವರ ಭಕ್ತರ ಪ್ರೀತಿಯ ಕರೆಯೋಲೆಗೆ ಸ್ಪಂದಿಸಿ ಶ್ರೀ ಶನಿ ಗ್ರಂಥ ಪಾರಾಯಣ ಯಕ್ಷಗಾನ ತಾಳಮದ್ದಲೆ ರೂಪದಲ್ಲಿ ಅಲ್ಲಲ್ಲಿ ನಡೆಸಿ ಕೊಡುತ್ತಿದೆ. ಸಮಿತಿಯಲ್ಲಿ ನುರಿತ ಅರ್ಥಧಾರಿಗಳು ಮತ್ತು ವಚನಾಕಾರರ ಮಾರ್ಗದರ್ಶನದಲ್ಲಿ ಸಮಿತಿಯಲ್ಲಿ ವಿಶೇಷವಾಗಿ ಗುರುಪೂರ್ಣಿಮಾ, ಶನಿ ಜಯಂತಿ, ಗಣೇಶ ಚತುಥಿರ್s, ನವರಾತ್ರಿ ಪೂಜೆಗಳನ್ನು ನೇರವೇರಿಸುತ್ತಾ ಸಮಿತಿಯನ್ನು ಮುನ್ನಡೆಸಲಾಗುತ್ತಿದೆ.

ಅಮೃತ ಮಹೋತ್ಸವ ಪ್ರಯುಕ್ತ ಸಮಿತಿಯು 74ನೇ ವಾರ್ಷಿಕ ಶನಿ ಮಹಾಪೂಜೆ ಮತ್ತು ಅಮೃತಉತ್ಸವದ ಉದ್ಘಾಟನಾ ಕಾರ್ಯಕ್ರಮಮನ್ನು ಫೆÇೀರ್ಟ್ ಕೋಟೆಯ (ವಿಟಿ) ಮಿಂಟ್ ರಸ್ತೆಯಲ್ಲಿನ ಖಾಂಜಿ ಕೇತ್ಸೀ ಸಭಾಗೃಹದಲ್ಲಿ ಇದೇ ಡಿ.15ರ ಶನಿವಾರ ಆಯೋಜಿಸಿದೆ. ಅಂದು ಬೆಳಿಗ್ಗೆ 6.00 ಗಂಟೆಯಿಂದ ಗಣಹೋಮ, ಹರೀಶ್ ಶಾಂತಿ ಹೆಜ್ಮಾಡಿ ಪೌರೋಹಿತ್ಯದಲ್ಲಿ 9.00 ಗಂಟೆ ವರೆಗೆ ಸತ್ಯನಾರಾಯಣ ಪೂಜೆ. 6.00 ಗಂಟೆಯಿಂದ ಶ್ರೀ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಮತ್ತು ವಿದ್ಯಾದಾಯಿನಿ ಭಜನಾ ಮಂಡಳಿ ಕೋಟೆ ಇವರಿಂದ ಭಜನೆ. 11.30 ಗಂಟೆÉಯಿಂದ ಶ್ರೀ ಶನಿದೇವರ ಕಲಶ ಪ್ರತಿಷ್ಠಾಪನೆ ಮತ್ತು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶನಿಗ್ರಂಥ ಪಾರಾಯಣ ಹಾಗೂ ಮದ್ಯಾಹ್ನ 12.30 ಯಿಂದ ಅನ್ನಸಂತರ್ಪಣೆ ನೆರವೇರಿಸಲಿದೆ. ರಾತ್ರಿ 8.30 ಗಂಟೆಗೆ ಶ್ರೀ ಶನಿದೇವರಿಗೆ ಮಹಾ ಮಂಗಳಾರತಿ ತೀರ್ಥಪ್ರಸಾದ ಮತ್ತು ಅನ್ನಸಂತರ್ಪಣೆ ಜರುಗಿಸಲಿದೆ.

ಅಮೃತ ಮಹೋತ್ಸವದ ಉದ್ಘಾಟನೆ:
ಸಂಜೆ 6.00 ಗಂಟೆಯಿಂದ ರಾತ್ರಿ 8.00 ಗಂಟೆ ವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಅಮೃತ ಮಹೋತ್ಸವ ಸಾಲಿನ ಉದ್ಘಾಟನೆ ನಡೆಸಲಾಗುತ್ತಿದ್ದು ವೆಸ್ಟೆರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ಗೌರವಾಧ್ಯಕ್ಷ ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ ಹರೀಶ್ ಜಿ.ಅವಿೂನ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರ ಪೆÇವಾಯಿ ಇದರ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಅಮೃತ ಮಹೋತ್ಸವಕ್ಕೆ ಚಾಲನೆಯನ್ನೀಡುವರು. ಪ್ರಸಿದ್ಧ ವಾಸ್ತು ತಜ್ಞ ಅಶೋಲ್ ಪುರೋಹಿತ, ಆನಂದಾತ ಫೌಂಡೇಶನ್ ಅಪ್ಪಾಜಿಬೀಡು ರಮೇಶ್ ಗುರು ಸ್ವಾಮಿ ಉಪಸ್ಥಿತರಿದ್ದು ಆರ್ಶಿರ್ವಚನ ನೀಡಲಿದ್ದಾರೆ.

ಅತಿಥಿü ಅಭ್ಯಾಗತರುಗಳಾಗಿ ಶ್ರೀ ಸದ್ಗುರು ನಿತ್ಯಾನಂದ ಸೇವಾ ಸಂಘ ಸಿಬಿಡಿ ಬೇಲಾಪುರ ಗೌರವಾಧ್ಯಕ್ಷ ಭಾಸ್ಕರ ಶೆಟ್ಟಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ನೊರ್ಡಿಕ್ ಶಿಪ್ಪಿಂಗ್ ಆ್ಯಂಡ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‍ನ ಪ್ರಮೋದ್ ಕರ್ಕೇರ, ಭಾರತ್ ಬ್ಯಾಂಕ್ ನಿರ್ದೇಶಕ ನ್ಯಾ| ಎಸ್.ಬಿ ಅವಿೂನ್, ಕರ್ನಾಟಕ ಸಂಘ ನಾಲಾಸೋಫಾರ ಅಧ್ಯಕ್ಷ ಸದಾಶಿವ ಎ.ಕರ್ಕೇರ ಮತ್ತಿತರ ಗಣ್ಯರು ಉಪಸ್ಥಿತರಿರುವರು. ಮಂದಿರದಲ್ಲಿ 50 ವರ್ಷಗಳ ಕಾಲ ಅರ್ಚಕರಾಗಿ, ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದಿ| ನಾರಾಯಣ ಬಿ.ಸಾಲ್ಯಾನ್ ಸ್ಮರಣರ್ಥ ಪ್ರಶಸ್ತಿಯನ್ನು ಕಾರ್ಯಕ್ರಮದಲ್ಲಿ ಪ್ರದಾನಿಸಲಾಗುವುದು.

ಆ ನಿಮಿತ್ತ ನೇರವೇರಲಿರುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಡಿನ ಸಮಸ್ತ ಭಕ್ತರು ಸಕ್ರೀಯರಾಗಿ ಭಾಗವಹಿಸಿ ಶ್ರೀ ಶನಿದೇವರ ಕೃಪೆಗೆ ಪಾತ್ರರಾಗುವಂತೆ ವೆಸ್ಟೆರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ಅಧ್ಯಕ್ಷ ಜೆ.ಜೆ ಕೋಟ್ಯಾನ್, ಉಪಾಧ್ಯಕ್ಷರುಗಳಾದ ರವಿ ಬಂಗೇರ ಮತ್ತು ಜನಾರ್ದನ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ, ಕೋಶಾಧಿಕಾರಿ ಶರತ್ ಜಿ.ಪೂಜಾರಿ ಮತ್ತು ಸರ್ವ ಪರಾಧಿಕಾರಿಗಳು ಈ ಮೂಲಕ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here