Wednesday 14th, May 2025
canara news

ವೊವ್ಯೊ-ವೇರ್ಸ್-ಸೋಭಾನೆ ಕಾರ್ಯನಿರ್ವಹಣಾ ತರಬೇತಿ-ಸಮಾರೋಪ

Published On : 10 Dec 2018   |  Reported By : Rons Bantwal


ಸಂಸ್ಕೃತಿ ಉಳಿವಿಗೆ ಯುವ ಪೀಳಿಗೆ ಪೆÇ್ರೀತ್ಸಾಹ ಅಗತ್ಯ: ಆರ್.ಪಿ ನಾಯ್ಕ್

ಮುಂಬಯಿ, ಡಿ.09: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸಂತ ಅಲೋಶಿಯಸ್ ಕಾಲೇಜು ಕೊಂಕಣಿ ಸಂಸ್ಥೆಯ ಸಹಯೋಗದಲ್ಲಿ ಕೊಂಕಣಿ ವಿದ್ಯಾಥಿರ್üಗಳಿಗಾಗಿ 30 ಗಂಟೆಗಳ ಕೊಂಕಣಿ ಸಂಸ್ಕೃತಿ ಸಾರುವ ವೊವ್ಯೊ-ವೇರ್ಸ್-ಸೋಭಾನೆ ಹಾಡುಗಳ ಕಾರ್ಯನಿರ್ವಹಣಾ ತರಬೇತಿ ಶಿಬಿರ (ಸರ್ಟಿಫಿಕೇಟ್ ಕೋರ್ಸ್) ಆಯೋಜಿಸಿದ್ದು, ಕೋರ್ಸ್‍ನ ಸಮಾರೋಪ ಸಮಾರಂಭ ಕಳೆದ ಶನಿವಾರ ಸಂಜೆ ಮಂಗಳೂರು ಅಲ್ಲಿನ ಸಂತ ಅಲೋಶಿಯಸ್ ಕಾಲೇಜ್‍ನ ಅರುಪ್ಪೆ ಬ್ಲಾಕ್ ಸಭಾಂಗಣದಲ್ಲಿ ನಡೆಸಲಾಯಿತು.

ಅಕಾಡೆಮಿ ಅಧ್ಯಕ್ಷ ಆರ್.ಪಿ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಿಂದಿನ ಸಂಸ್ಕೃತಿಯನ್ನು ಜೀವಂತ ಉಳಿಸುವಲ್ಲಿ ಯುವ ಪೀಳಿಗೆಯನ್ನು ಪೆÇ್ರೀತ್ಸಾಹಿಸ ಬೇಕಾಗಿರುವುದನ್ನು ಮನಗಂಡ ಅಕಾಡೆಮಿ ಇದೊಂದು ವಿನೂತನ ಪ್ರಯೋಗವನ್ನು ಸಂತ ಅಲೋಶಿಯಸ ಕಾಲೇಜಿನಲ್ಲಿ ಪ್ರಾರಂಭಿಸಿರುತ್ತದೆ. ಇದಕ್ಕೆ ಕಾಲೇಜಿನ ಮುಖ್ಯಸ್ಥರು ಸಹಕಾರ ನೀಡಿ ಮುಂದೆ ಬಂದಿರುವುದು ಶ್ಲಾಘನೀಯ ಎಂದು ಸಂತ ಅಲೋಶಿಯಸ್ ಕಾಲೇಜಿನ ಮುಖ್ಯಸ್ಥರನ್ನು ಅಭಿನಂಧಿಸಿದರು.

ಸಾಹಿತಿಗಳಾದ ಡಾ| ಶಿವರಾಮ್ ಕಾಮತ್, ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆ| ಡಾ| ಪ್ರವೀಣ್ ಮಾರ್ಟಿಸ್, ರೇಡಿಯೊ ಸಾರಂಗ್‍ನ ನಿರ್ದೇಶಕ ರೆ| ಡಾ| ಮಲ್ವಿನ್ ಪಿಂಟೋ ಅತಿಥಿü ಅಭ್ಯಾಗತರುಗÀಳಾಗಿ ಭಾಗವಹಿಸಿ ಶಿಬಿರಾಥಿರ್üಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ವೆನಿಸ್ಸ ಡಿಸೋಜಾ ಮತ್ತು ತಂಡವು ಪ್ರಾರ್ಥನೆಯನ್ನಾಡಿತು. ಅಕಾಡೆಮಿ ಸದಸ್ಯ ಲಕ್ಷ್ಮಣ ಪ್ರಭು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಪೆÇ್ಲೀರಾ ಕ್ಯಾಸ್ತಲಿನೊ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಬಿರಾಥಿರ್ü ಪರವಾಗಿ ಅನಿಲ್ ಡಿಸೋಜಾ ಮಾಹಿತಿ ನೀಡಿದರು. ಕು| ರುಪಲ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದÀರು. ಶಿಬಿರಾಥಿರ್ü ಕು| ನೊಯ್ಲಾ ಮಸ್ಕರೇನಸ್ ವಂದಿಸಿದರು. ನಂತರ ತರಬೇತಿ ವಿದ್ಯಾಥಿರ್ü ತಂಡದಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here