Friday 29th, March 2024
canara news

ಡಿ.16: ಕನ್ನಡ ಸಂಘ ಸಾಂತಾಕ್ರೂಜ್ ವಜ್ರಮಹೋತ್ಸವ ಸಂಭ್ರಮ

Published On : 13 Dec 2018


ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಅರ್ವತ್ತರ ಸಮಾರಂಭ

ಮುಂಬಯಿ, ಡಿ.13: ವಜ್ರದ ಮಹೋತ್ಸವವು ಸಾಂಪ್ರದಾಯಿಕ ಅರವತ್ತು ವರ್ಷಗಳ ಸೇವಾ ಚಕ್ರದೊಂದಿಗೆ ಸೇರಿಕೊಳ್ಳುತ್ತದೆ. ಇದನ್ನು `ವಜ್ರ ಉತ್ಸವ ಯಾ ಹೀರಕ ಮಹೋತ್ಸವ' ಎಂದು ಕರೆಯಲಾಗುತ್ತಿದ್ದು ಇದೊಂದು ಮೈಲಿಗಲ್ಲು ಎಂದೇ ಪರಿಗಣಿಸಲಾಗುತ್ತಿದೆ. ಆದುದರಿಂದಲೇ ಈ ಆಚರಣೆ ವಿಶೇಷ ಪ್ರಾಮುಖ್ಯತೆ ಪಡೆದು ಪ್ರತಿಷ್ಠೆಯ ಹೆಜ್ಜೆಗುರುತುವಾಗಿ ಪ್ರಕಾಶಮಾನ ಆಗುತ್ತಿರುವುದು ಸಹಜ. ಸಂಘ-ಸಂಸ್ಥೆಗಳೂ ಇಂತಹ ಉತ್ಸವಗಳನ್ನು ಒಂದೆಡೆ ಸೇವಾ ಸಂಭ್ರಮವಾಗಿ ಆಚರಿಸುತ್ತಿರುವುದು ಸ್ತುತ್ಯರ್ಹ. ಅಂತೆಯೇ ತಮ್ಮ ಸೇವೆಗಳನ್ನು ನೆನಪಿಟ್ಟುಕೊಳ್ಳಲು ಇದೊಂದು ಸ್ಮರಣ ಉಡುಗೊರೆಯೇ ಸರಿ. ಮಹೋತ್ಸವದ ಸಂಕೇತವನ್ನು ಸಂಭ್ರಮವಾಗಿ ವಿನ್ಯಾಸಗೊಳಿಸುತ್ತಿರುವುದು ವಾಡಿಕೆ. ಆದುದರಿಂದಲೇ ಇಂತಹ ಆಚರಣೆಗಳನ್ನು ಹೆಮ್ಮೆಯಿಂದ ತೋರಿಸಿ ಕೊಟ್ಟು ಸುದೀರ್ಘವಾದ ಇತಿಹಾಸವನ್ನು ಭದ್ರ ಪಡಿಸಿಕೊಳ್ಳುವಲ್ಲಿ ಹೆಜ್ಜೆಗುರುತನ್ನು ರೂಪಿಸಲು ಭರದ ಸಿದ್ಧತೆಯಲ್ಲಿದೆ ಕನ್ನಡ ಸಂಘ ಸಾಂತಾಕ್ರೂಜ್.

  

 Lokaya Shetty                         K B Jain.j

 

 M R Basruru.                     Boluru Padmanabha Aman

  

 Felix DSouza                       L V Amin

ಇದೇ ಡಿ.16ರ ಆದಿತ್ಯವಾರ ಬೆಳಿಗ್ಗೆ 9.00 ಗಂಟೆಯಿಂದ ರಾತ್ರಿ 9.00 ಗಂಟೆ ತನಕ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ದಿನಪೂರ್ತಿಯಾಗಿಸಿ ಸಂಘದ ಅಧ್ಯಕ್ಷ ಎಲ್.ವಿ ಅಮೀನ್ ಅಧ್ಯಕ್ಷತೆಯಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್ ಅಧ್ಯಕ್ಷತೆಯಲ್ಲಿ ವಜ್ರಮಹೋತ್ಸವ ಸಂಭ್ರಮಿಸಲಿದೆ.

ಉದ್ಘಾಟನಾ ಸಮಾರಂಭ
ಅಂದು ಬೆಳಿಗ್ಗೆ 9.00 ಗಂಟೆಗೆ ಅತಿಥಿs ಗಣ್ಯರಿಂದ ಉದ್ಘಾಟನೆಗೊಳ್ಳಲಿದೆ. ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಕೃಷ್ಣ ಪ್ಯಾಲೇಸ್ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಕೃಷ್ಣ ವೈ.ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಉದ್ಯಮಿ ಕೃಪಾ ಭೋಜರಾಜ್ ಕುಳಾಯಿ, ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ದಾಮೋದರ ಸಿ.ಕುಂದರ್, ಪುರುಷೋತ್ತಮ ಎಸ್.ಕೋಟ್ಯಾನ್, ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಟ್ರಸ್ಟಿ ಬಿ.ಆರ್ ರಾವ್, ಪ್ರಸಿದ್ಧ ವಾಸ್ತುತಜ್ಞ ಅಶೋಕ್ ಪುರೋಹಿತ್, ಹೊಟೇಲ್ ಉದ್ಯಮಿ ಬೆಳಗಾಂ ರಘುರಾಮ ಕೆ.ಶೆಟ್ಟಿ, ಶ್ರೀಮತಿ ಶಾರದಾ ಭಾಸ್ಕರ್ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಕಲ್ಯಾಣ್ ಇದರ ಸಂಸ್ಥಾಪಕಾಧ್ಯಕ್ಷ ಭಾಸ್ಕರ್ ಎಸ್.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಉದ್ಯಮಿಗಳಾದ ವಾಮನ ಡಿ.ಪೂಜಾರಿ, ಗಣೇಶ್ ಆರ್.ಪೂಂಜ, ಗ್ರೆಗೋರಿ ಡಿ'ಅಲ್ಮೇಡಾ, ಮಂಜುನಾಥ ಬನ್ನೂರು, ಜಗನ್ನಾಥ ಶೆಟ್ಟಿ, ರತ್ನಾಕರ್ ವೈ.ಶೆಟ್ಟಿ, ಸುರೇಶ್ ಆರ್.ಕಾಂಚನ್, ವಿಠ್ಠಲ ಎಸ್.ಅವಿೂನ್, ಪ್ರಮೋದಾ ಶಿವಣ್ಣ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಉಪಾಧ್ಯಕ್ಷ ಅಶೋಕ್ ಆರ್.ಶೆಟ್ಟಿ, ಹೆಸರಾಂತ ಲೆಕ್ಕಪರಿಶೋಧಕಾರಾದ ಸಿಎ| ಅಶ್ವಜಿತ್ ಹೆಜಮಾಡಿ, ಸಿಎ| ಜಗದೀಶ್ ಶೆಟ್ಟಿ, ಆಹಾರ್ ಮಾಜಿ ಅಧ್ಯಕ್ಷ ನಾರಾಯಣ ಆಳ್ವ, ವಸಾಯಿ ಕನ್ನಡ ಸಂಘ ಅಧ್ಯಕ್ಷ ಓ.ಪಿ ಪೂಜಾರಿ, ಶ್ರೀ ಕಟೀಲು ಯಕ್ಷಾ ವೇದಿಕೆ ವಸಾಯಿ ಕಾರ್ಯಾಧ್ಯಕ್ಷ ಪಾಂಡು ಎಲ್.ಶೆಟ್ಟಿ, ರಜಕ ಸಂಘ ದಹಿಸರ್-ವಿರಾರ್ ವಲಯ ಮಾಜಿ ಕಾರ್ಯಾಧ್ಯಕ್ಷ ದೇವೆಂದ್ರ ಬುನ್ನಾನ್ ಮತ್ತಿತರ ಗಣ್ಯರು ಆಗಮಿಸಿ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ.

ದಿನಪೂರ್ತಿ ನಡೆಯಲಿರುವ ಸಂಭ್ರಮದಲ್ಲಿ ಸಂಘದ ಸದಸ್ಯರು ಮತ್ತು ಮಕ್ಕಳು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೆÇೀಷಿತ ಯಕ್ಷಗಾನ ಕಲಾ ಮಿತ್ರ ಮಂಡಳಿ ಸಾಕಿನಾಕ ಇದರ ಬಾಲ ಕಲಾವಿದರು `ವೀರ ಅಭಿಮನ್ಯು' ಯಕ್ಷಗಾನ ಪ್ರದರ್ಶಿಸಲಿದ್ದಾರೆ. ಅಭಿನಯ ಮಂಟಪ ಮುಂಬಯಿ ಸಂಸ್ಥೆಯು ಕರುಣಾಕರ ಕೆ.ಕಾಪು ನಿರ್ದೇಶನದಲ್ಲಿ ರವಿಕುಮಾರ್ ಕಡೆಕಾರು ರಚಿತ ತುಳು ಹಾಸ್ಯ ನಾಟಕ `ಪುರ್ಸೊತ್ತಿಜ್ಜಿ' ಪ್ರದರ್ಶಿಸಲಿದ್ದಾರೆ.

ಸಮಾರೋಪ ಸಮಾರಂಭ
ಸಂಜೆ 3.15 ಗಂಟೆಗೆ ಅಧ್ಯಕ್ಷ ಎಲ್.ವಿ ಅಮೀನ್ ಘನಾಧ್ಯಕ್ಷತೆಯಲ್ಲಿ ವಜ್ರೋತ್ಸವ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿsಯಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಸಂಘದ ವಿಶೇಷ ಸ್ಮರಣಿಕೆ ಬಿಡುಗಡೆ ಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರುಗಳಾಗಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬೊರಿವಲಿ ಲೋಕಸಭಾ ಸದಸ್ಯ ಗೋಪಾಲ ಸಿ.ಶೆಟ್ಟಿ, ಬಿಲ್ಲವರ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ.ಶೆಟ್ಟಿ, ಹೆಸರಾಂತ ವಾಸ್ತುತಜ್ಞ, ಪುರೋಹಿತ ಡಾ| ಎಂ.ಜೆ ಪ್ರವೀಣ್ ಭಟ್ ಸಯಾನ್, ವಿ.ಕೆ (ಮ್ಯಾಕೊೈೀ) ಸಮೂಹದ ಆಡಳಿತ ನಿರ್ದೇಶಕ ಕೆ.ಎಂ ಶೆಟ್ಟಿ, ಭವಾನಿ ಫೌಂಡೇಶನ್ ನವಿಮುಂಬಯಿ ಸಂಸ್ಥಾಪಕ ಅಧ್ಯಕ್ಷÀ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಉಪಾಧ್ಯಕ್ಷ ಹರೀಶ್ ಜಿ.ಅಮೀನ್, ಸೋನಿ ಸ್ಟೀಲ್ ಆ್ಯಂಡ್ ಎಪ್ಲಾಯನ್ಸಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಪಾಂಡುರಂಗ ಎಸ್.ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಜಯಕೃಷ್ಣ ಎ.ಶೆಟ್ಟಿ, ಕರ್ನಾಟಕ ಮಲ್ಲ ಕನ್ನಡದೈನಿಕದ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾ| ಸುಭಾಷ್ ಬಿ.ಶೆಟ್ಟಿ, ತೀಯಾ ಸಮಾಜ ಮುಂಬಯಿ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ದಿವ್ಯಾ ಸಾಗರ್ ಸಮೂಹದ ಆಡಳಿತ ನಿರ್ದೇಶಕ ಮುದ್ರಾಡಿ ದಿವಾಕರ ಶೆಟ್ಟಿ, ಭಾರತ್ ಬ್ಯಾಂಕ್‍ನ ನಿರ್ದೇಶಕ ನ್ಯಾ| ಸೋಮನಾಥ್ ಬಿ.ಅಮೀನ್ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಘದ ಅರ್ವತ್ತರ ನಡಿಗೆ ಪ್ರಾತ್ಯಕ್ಷಿಕೆ ನಡೆಸಿ ಸಂಘದ ಶಾಶ್ವತ ವಿದ್ಯಾನಿಧಿಗೆ ಮಹಾದಾನಿಗಳಾಗಿ ಶೈಕ್ಷಣಿಕ ಪೆÇ್ರೀತ್ಸಹ ನೀಡಿದ ದಾನಿಗಳಿಗೆ ಸನ್ಮಾನಿಸಲಾಗುವುದು ಎಂದು ಸಂಘದ ಉಪಾಧ್ಯಕ್ಷ ಗುಣಪಾಲ ಶೆಟ್ಟಿ ಐಕಳ (ಕಾರ್ಯಾಧ್ಯಕ್ಷರು, ನಿಧಿ ಸಂಗ್ರಹ ಸಮಿತಿ), ಗೌ| ಪ್ರ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್,ವಜ್ರಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ನಾರಾಯಣ ಎಸ್.ಶೆಟ್ಟಿ ಮತ್ತು ಎನ್.ಎಂ ಸನಿಲ್, ಕಾರ್ಯಧ್ಯಕ್ಷ ಬಿ.ಆರ್ ಪೂಂಜ, ಸ್ಮರಣ ಸಂಚಿಕೆ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್, ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ ತಿಳಿಸಿದ್ದಾರೆ.

ಮಹಾನಗರದಲ್ಲಿನ ಸಮಸ್ತ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಘದ ವಜ್ರೋತ್ಸವ ಸಂಭ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಮತ್ತು ವಜ್ರೋತ್ಸವ ಆಚರಣಾ ಸಮಿತಿಯ ಮುಖ್ಯಸ್ಥರು ವಿನಂತಿಸಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here