Wednesday 14th, May 2025
canara news

ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿ ಹಾಗೂ ಆಶೀರ್ವಾದಗಳೊಂದಿಗೆ ಡಿ.23:ಮೈಸೂರು ಅಸೋಸಿಯೇಷನ್ ಸಭಾಗೃಗದಲ್ಲಿ ತುಳು ಸತ್ಸಂಗ

Published On : 14 Dec 2018


ಮುಂಬಯಿ, ಡಿ.14: ಜಗದ್ಗುರು ಶ್ರೀ ಮಧ್ವ್ವಾಚಾರ್ಯ ಮಹಾಸಂಸ್ಥಾನಂ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಸುಬ್ರಹ್ಮಣ್ಯ ಮಠ ಇದರ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿ ಹಾಗೂ ಆಶೀರ್ವಾದಗಳೊಂದಿಗೆ ಇದೇ ಡಿ.23ನೇ ಭಾನುವಾರ ಸಂಜೆ 5.30 ಗಂಟೆಗೆ ಮಾಟುಂಗಾ ಪೂರ್ವದ (ಸೆಂಟ್ರಲ್ ರೈಲ್ವೇ) ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಸಭಾಗೃಹದಲ್ಲಿ ತುಳು ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿದೆ.

ಕರ್ನಾಟಕದ ಕರಾವಳಿ ಕಾಸರಗೋಡುನಿಂದ ಉಡುಪಿಯ ಬಾರ್ಕೂರು ತನಕ ಪರಶುರಾಮನ ಸೃಷ್ಠಿಯ ಒಂದು ಭಾಗವಾಗಿ ಮಹಾ ದಾರ್ಶನಿಕರಿಗೆ ಮತ್ತು ಸಂತ ಮಹಾಂತರಿರಿಗೆ ಜನ್ಮ ನೀಡಿದ, ಹತ್ತುಹಲವಾರು ಸಂಪ್ರದಾಯ, ಕೂಡು ಕಟ್ಟುಕಟ್ಟಾಲೆಗಳನ್ನು ಬೆಳೆಸಿ ಉಳಿಸಿ ತುಳು ಭಾಷೆಯೊಂದಿಗೆ ಸ್ವಂತಿಕೆಯ ನಾಡುವಾಗಿ ಸಾವಿರ ಸಾವಿರ ವರ್ಷಗಳ ಇತಿಹಾಸವುಳ್ಳ ಪುಣ್ಯಭೂಮಿ ಪ್ರಸಿದ್ಧಿಯ ತುಳುನಾಡು ಆಗಿದೆ.

ಇಂತಹ ಪಂಚವರ್ಣದ ಮಣ್ಣಿನ ಪರಿಮಳವನ್ನು ನಾಡಿನಾದ್ಯಂತ ಪಸರಿಸಲು ನಡೆಸುವಂತಹ ಪ್ರಯತ್ನವಾಗಿಸಿ ಉನ್ನತ ಸಂಸ್ಕೃತಿಯ ಆರಾಧಾಕರಾದ ಮುಂಬಯಿ ಮಹಾನಗರಿವಾಸಿ ತುಳುವರಲ್ಲಿ ಮತ್ತು ಭವಿಷ್ಯತ್ತಿನ ಪೀಳಿಗೆಗೆ ತುಳು ಸಂಸ್ಕೃತಿ, ಪರಂಪರೆಯನ್ನು ಭವಿಷ್ಯತ್ತಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಯತ್ನವಾಗಿಸಿ ದೈವಜ್ಞ ವಿದ್ವಾನ್ ಹೆರ್ಗ ರವೀಂದ್ರ ಭಟ್ ಇವರ ಸಂಯೋಜನೆ ಮತ್ತು ಪರಿಕಲ್ಪನೆಯಲ್ಲಿ ಪ್ರವಚನ, ಭಜನೆ, ಗೀತೆ, ನೃತ್ಯಗಳ ಸಂಯೋಜನೆ, ಸಜ್ಜನರ ಸಂಗಮ ಆಗಿಸಿ ಈ ತುಳು ಸತ್ಸಂಗ ಆಗಿಸಿ ಆಯೋಜಿಸಲಾದೆ.

ಮಹಾನಗರದಲ್ಲಿ ತುಳು ಸಂಘ-ಸಂಸ್ಥೆಗಳ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ತುಳುವ ಅಭಿಮಾನಿ, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಲ್ಲಾ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಸಂಘಟಕರು ಈ ಮೂಲಕ ವಿನಂತಿಸಿದ್ದಾರೆ.

 

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here