Friday 29th, March 2024
canara news

ಸಾಫಲ್ಯ ಸೇವಾ ಸಂಘ (ರಿ.) ಮುಂಬಯಿ ಅಮೃತಮಹೋತ್ಸವ ಸಂಭ್ರಮ

Published On : 14 Dec 2018   |  Reported By : Rons Bantwal


ಡಿ.25: ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಎಪ್ಪತ್ತೈದರ ಸಮಾರಂಭ

ಮುಂಬಯಿ, ಡಿ.14: ರಾಷ್ಟ್ರದ ಆಥಿರ್üಕ ರಾಜಧಾನಿ, ವಾಣಿಜ್ಯನಗರಿ ಬೃಹನ್ಮುಂಬಯಿನಲ್ಲಿ 1941ರಲ್ಲಿ ಸ್ಥಾಪಿತ ಸಾಫಲ್ಯ ಸೇವಾ ಸಂಘ (ರಿ.) ಸಂಸ್ಥೆಯು ಸೇವೆಯ ಮೂಲಕ ಸ್ವಂತಿಕೆಯ ಪ್ರತಿಷ್ಠೆಯನ್ನು ರೂಪಿಸಿ ಭದ್ರವಾದ ತಳಹದಿ ಹಾಕಿಸೇವಾತೃಪ್ತಿಯನ್ನು ಹೆಮ್ಮೆಯಿಂದ ತೋರಿಸಿ ಕೊಟ್ಟು ಸುದೀರ್ಘವಾದ ಇತಿಹಾಸವನ್ನು ಹೆಜ್ಜೆಗುರುತು ಆಗಿಸಿ ಅಮೃತಮಹೋತ್ಸವ ಸಂಭ್ರಮದ ಸಿದ್ಧತೆಯಲ್ಲಿದೆ.

ಇದೇ ಡಿ.25ರ ಮಂಗಳವಾರ ಬೆಳಿಗ್ಗೆ 9.30 ಗಂಟೆಯಿಂದ ರಾತ್ರಿ 10.00 ಗಂಟೆ ವರೆಗೆ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ದಿನಪೂರ್ತಿ ಆಗಿಸಿ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಇವರ ಅಧ್ಯಕ್ಷತೆಯಲ್ಲಿ ಅಮೃತಮಹೋತ್ಸವ ಆಚರಿಸಲಿದೆ.

  

   M G Karkerjpg                    Pernanankila Haridas

  

Gopal C.Shetty                    Nalin Kumar Kateel

  

 Nalin Kumar Kateel                    Vedavyasa Kamat.

  

 Shrinivas P.Saphalya.                   Anusooya Kellaputtige.

Bhaskar Saphaliga.

ಉದ್ಘಾಟನಾ ಸಮಾರಂಭ
ಅಂದು ಬೆಳಿಗ್ಗೆ 10.00 ಗಂಟೆಗೆ ಸಾಫಲ್ಯ ಸೇವಾ ಸಂಘದ ಮಾಜಿ ಅಧ್ಯಕ್ಷ, ಅರ್ಕೇಡಿಯಾ ಶಿಪ್ಪಿಂಗ್ ಲಿಮಿಟೆಡ್ ಇದರ ನಿರ್ದೇಶಕ ಎಂ.ಜಿ ಕರ್ಕೇರ ಇವರ ಅಧ್ಯಕ್ಷತೆಯಲ್ಲಿ ಜರಗುವ ಅಮೃತಮಹೋತ್ಸವ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಉಳ್ಳಾಲ (ಉಳಿಯ) ಇಲ್ಲಿನ ಶ್ರೀ ಉಳ್ಳಾಳ್ತಿ ಧರ್ಮರಸು ಕ್ಷೇತ್ರದ ಧರ್ಮದರ್ಶಿ ಶ್ರೀ ದೇವು ಮೂಲಿಯಣ್ಣ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿsಯಾಗಿ ಸುಯೋಗ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಯತೀಶ್ ಅತ್ತವರ ಹಾಗೂ ಅತಿಥಿs ಅಭ್ಯಾಗತರುಗಳಾಗಿ ಕೊಲ್ಕತ್ತದ ಉದ್ಯಮಿ ಎಂ.ವಿ ನಾಥ್, ಬೆಂಗಳೂರುನ ಉದ್ಯಮಿ ಸುಂದರ್ ಸಾಲ್ಯಾನ್, ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಡಾ| ಸುರೇಂದ್ರಕುಮಾರ್ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ.

ಸಮಾರೋಪ ಸಮಾರಂಭ
ಸಂಜೆ 4.30 ಗಂಟೆಗೆ ಸಾಫಲ್ಯ ಸೇವಾ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಅಧ್ಯಕ್ಷತೆಯಲ್ಲಿ ಅಮೃತಮಹೋತ್ಸವ ಸಮಾರೋಪ ಸಮಾರಂಭ ನಡೆಯಲಿದ್ದು ಶ್ರೀ ಅಂಬಿಕಾ ದೇವಸ್ಥಾನ ವಿದ್ಯಾವಿಹರ್ ಇದರ ಪ್ರಧಾನ ಅರ್ಚಕ ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್ ಅನುಗ್ರಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಬೊರಿವಲಿ ಲೋಕಸಭಾ ಸದಸ್ಯ ಗೋಪಾಲ ಸಿ.ಶೆಟ್ಟಿ, ಮಂಗಳೂರು ಲೋಕಸಭಾ ಸದಸ್ಯ ನಳೀನ್‍ಕುಮಾರ್ ಕಟೀಲು, ಮಂಗಳೂರು ವಿಧಾನಸಭಾ ಶಾಸಕ ವೇದವ್ಯಾಸ ಕಾಮತ್, ಅತಿಥಿs ಅಭ್ಯಾಗತರುಗಳಾಗಿ ಕರ್ನಾಟಕ ಸಂಘ ಅಸಲ್ಫಾ ಇದರ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಎಸ್.ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆ ಪೆÇವಾಯಿ ಉಪ ಕಾರ್ಯಾಧ್ಯಕ್ಷ ನಡಿಬೆಟ್ಟು ನಿತ್ಯಾನಂದ ಹೆಗ್ಡೆ, ಗೌರವ್ವಾನಿತ ಅತಿಥಿsಗಳಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಪಿ.ಕುಲಾಲ್, ಗಾಣಿಗ ಸಂಘ ಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಒಕ್ಕಲಿಗ ಸಂಘ ಮಹಾರಾಷ್ಟ್ರ ಅಧ್ಯಕ್ಷ ಜಿತೇಂದ್ರ ಗೌಡ ಆಗಮಿಸಲಿದ್ದಾರೆ.

ಸಂಘದ ಮುಖವಾಣಿ `ಸಾಫಲ್ಯ' ತ್ರೈಮಾಸಿಕ ಬಗ್ಗೆ ಡಾ| ವಾಮನ ಎಸ್.ಸಾಫಲ್ಯ ತಿಳಿಸಲಿದ್ದು, ಹಾಗೂ ಸಂಘದ ಸಾಧನಾ ನಡೆಯ ಆರ್.ಸಿ ಮೂಲ್ಕಿ ರಚಿತ ಸಾಫಲ್ಯ ಯಾನೆ ಗಾಣಿಗ ಸಂಘ' ಕೃತಿ ಮತ್ತು ಸಂಘದ `ಅಮೃತ ಮಹೋತ್ಸವ ಸ್ಮರಣ ಸಂಚಿಕೆ' ಬಿಡುಗಡೆ ಗೊಳಿಸಲಿದ್ದಾರೆ. ಹಾಗೂ ಸಮುದಾಯದ ಸಾಧಕರಿಗೆ, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಮತ್ತು ಸಂಘದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಿದ್ದಾರೆ.

ದಿನಪೂರ್ತಿ ನಡೆಯಲಿರುವ ಸಂಭ್ರಮದಲ್ಲಿ ಸಂಘದ ಸದಸ್ಯರು ಮತ್ತು ಮಕ್ಕಳು ತುಳುನಾಡ ವೈಭವ, ಬಾಲಿವುಡ್‍ನ ನಡೆಯ ಪೂರ್ವಾನ್ವಯ (ರೆಟ್ರೋ ಡ್ಯಾನ್ಸ್) ನೃತ್ಯಗಳು, ಸಂಪ್ರದಾಯಿಕ ಉಡುಪುಗಳ ಪ್ರದರ್ಶನ (ಫ್ಯಾಶನ್ ಶೋ), ತುಳು ನಾಟಕ ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಮತ್ತು ಮಂಗಳೂರು ಉಳ್ಳಾಲ ಇಲ್ಲಿನ ನಾಟ್ಯ ನಿಲಯ ಸಂಸ್ಥೆಯು ನಾಟ್ಯ ವಿದುಷಿ ಸುನೀತಾ ಜಯಂತ್ ನಿರ್ದೇಶನದಲ್ಲಿ ಶಾಸ್ತ್ರೀಯ ನೃತ್ಯಗಳನ್ನು, ಗಣೇಶ್ ಎರ್ಮಾಳ್ ಮತ್ತು ಕಿರಣ್ ಸಫಲಿಗ ನಿರ್ದೇಶನದಲ್ಲಿ ಮಂಗಳೂರು ಮತ್ತು ಮುಂಬಯಿನ ನುರಿತ ಕಲಾವಿದರು ರಾಗ-ಸಂಗಮ ಪ್ರಸ್ತುತ ಪಡಿಸಲಿದ್ದಾರೆ.

ಮಹಾನಗರದಲ್ಲಿನ ಸಮಸ್ತ ಸಾಫಲ್ಯ ಬಂಧುಗಳು, ತುಳು-ಕನ್ನಡಿಗರು ಆಗಮಿಸಿ ಸಂಘದ ಅಮೃತಮಹೋತ್ಸವ ಸಂಭ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಅನುಸೂಯ ಕೆಲ್ಲಪುತ್ತಿಗೆ ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.

ಸಾಫಲ್ಯ ಸೇವಾ ಸಂಘ:
1941ರಲ್ಲಿ ಸ್ಥಾಪಿತ ಸಾಫಲ್ಯ ಸೇವಾ ಸಂಘ (ರಿ.) ಸಂಸ್ಥೆಯು ಸದ್ಯ 77ರ ಸೇವೆಯಲ್ಲಿ ಕಾರ್ಯನಿರತವಾಗಿದೆ. ಡಾ| ಜಿ.ಕೆ ಮೂಲ್ಕಿ, ಕೆ.ಎಸ್ ಮೆಂಡನ್, ಕೆ.ವಿ ಮಿಜಾರ್, ಐ.ಕೆ ರಾವ್, ಎಂ.ನಾರಾಯಣ್, ನರಸಿಂಹ ರಾವ್, ಲಕ್ಷ್ಮಣ್ ಕುಂದರ್, ಬಿ.ತಿಮ್ಮಪ್ಪ, ಎಸ್.ಸಫಲಿಗ, ಭಾಸ್ಕರ್ ಎನ್.ಡೊಂಗರಕೇರಿ, ಈಶ್ವರ್ ಮೆಂಡನ್, ಡಿ.ಜೆ ಬಂಗೇರ (ಎಲ್ಲರೂ ಸ್ವರ್ಗೀಯರು), ಓಂಪ್ರಕಾಶ್ ರಾವ್, ಎಂ.ಜಿ ಕರ್ಕೇರ, ಜಯರಾಮ ಸಫಲಿಗ, ನಾರಾಯಣ ಮೆಂಡನ್ ಸಂಘದ ಅಧ್ಯಕ್ಷರುಗಳಾಗಿ ಶ್ರಮಿಸಿದ್ದಾರೆ.

ಅಂಧೇರಿ ಪೂರ್ವದ ಸಾಯಿರಥ್ ಕೋ.ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್‍ನ ಕೆಸರ್ ಕುಂಜ್‍ನಲ್ಲಿ ಸ್ವಂತ ಕಛೇರಿಯುಳ್ಳ ಈ ಸಂಸ್ಥೆಯಲ್ಲಿ ಪ್ರಸ್ತುತ ಅಧ್ಯಕ್ಷರಾಗಿ ಶ್ರೀನಿವಾಸ ಪಿ.ಸಾಫಲ್ಯ, ಉಪಾಧ್ಯಕ್ಷರಾಗಿ ಕೃಷ್ಣ ಕುಮಾರ್ ಬಂಗೇರ, ಗೌರವ ಪ್ರಧಾನ ಕಾರ್ಯದರ್ಶಿ ಆಗಿ ಅನುಸೂಯ ಕೆಲ್ಲಪುತ್ತಿಗೆ, ಗೌರವ ಕೋಶಾಧಿಕಾರಿ ಆಗಿ ಭಾಸ್ಕರ್ ಸಫಲಿಗ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಆಗಿ ಶೋಭಾ ಬಂಗೇರ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಗಿ ರವಿಕಾಂತ್ ಸಫಲಿಗ ಪ್ರಮುಖ ಸ್ಥಾನಗಳೊಂದಿಗೆ ಕಾರ್ಯನಿರತರಾಗಿದ್ದಾರೆ. ಸಂಘದ ಮುಖವಾಣಿ `ಸಾಫಲ್ಯ' ತ್ರೈಮಾಸಿಕವು ಸಂಘಕ್ಕೆ ದೈವೀಪ್ರೇರಣೆಯಾಗಿದೆ. ಸದ್ಯ ಡಾ| ಜಿ.ಪಿ ಕುಸುಮಾ ತ್ರೈಮಾಸಿಕದ ಸಂಪಾದಕಿ ಆಗಿ ಸೇವಾ ನಿರತರಾಗಿದ್ದಾರೆ. : ರೋನಿಡಾ, ಮುಂಬಯಿ

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here