Saturday 20th, July 2019
canara news

ಡಿ.23: ಮುಲುಂಡ್ ಪಶ್ಚಿಮದ ಸರಸ್ವತಿವಾಡಿಯ ಶ್ರೀ ಕುಛ್ ದೇಶಿಯಾ ಸಭಾಗೃಹದಲ್ಲಿ ಭಂಡಾರಿ ಸೇವಾ ಸಮಿತಿಯ 2018ನೇ ವಾರ್ಷಿಕ ಸಮ್ಮಿಲನ

Published On : 15 Dec 2018   |  Reported By : Rons Bantwal


ಮುಂಬಯಿ, ಡಿ14: ಬೃಹನ್ಮುಂಬಯಿಯಲ್ಲಿ ಸಮುದಾಯದ ಶ್ರೇಯೋನ್ನತಿಗಾಗಿ ಸಾಮಾಜಿಕವಾಗಿ ಸೇವಾ ನಿರತ ಭಂಡಾರಿ ಸೇವಾ ಸಮಿತಿ (ರಿ.) ಇದರ 2018ನೇ ವಾರ್ಷಿಕ ಸಮ್ಮೀಲನÀವು ಇದೇ ಡಿ.23ನೇ ರವಿವಾರ ಬೆಳಿಗ್ಗೆಯಿಂದ ಸಾಯಂಕಾಲ ತನಕ ಮುಲುಂಡ್ ಪಶ್ಚಿಮದ ಜವೇರ್ ರೋಡ್, ಸರಸ್ವತಿವಾಡಿ ಅಲ್ಲಿನ ಶ್ರೀ ಕುಛ್ ದೇಶಿಯಾ ಸರಸ್ವತಿ ಮಹಾ ಸಂಸ್ಥಾನ್ ಟ್ರಸ್ಟ್ ಸಭಾಗೃಹದಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಆರ್.ಎಂ ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಉಪಾಧ್ಯಕ್ಷರುಗಳಾದ ಪ್ರಭಾಕರ್ ಪಿ.ಭಂಡಾರಿ ಮತ್ತು ಪುರುಷೋತ್ತಮ ಜಿ.ಭಂಡಾರಿ ತಿಳಿಸಿದ್ದಾರೆ.

     

          Balakrishna Putturu Pune                Suesh S.Bhandary.                            Sadashiva Bhandary Sakaleshpur   

        

Shivarama K. BHandary                     Adv. R.M Bhandary  (President).          ShashidharBhandary (Hon. Gen Secreatary

ಅಂದು ಬೆಳಿಗ್ಗೆ 9.00 ಗಂಟೆಗೆ ಪದಾಧಿಕಾರಿಗಳನ್ನು ಒಳಗೊಂಡು ಅಧ್ಯಕ್ಷರು ವಾರ್ಷಿಕೋತ್ಸವ ಸಂಭ್ರಮಕ್ಕೆ ಚಾಲನೆ ನೀಡುವರು. ನಂತರ ರಂಗೋಲಿ, ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಸಂಸ್ಥೆಯ ಸದಸ್ಯರು, ಮಹಿಳೆಯರು ಮತ್ತು ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನುಸಾದರ ಪಡಿಸುವರು ಎಂದು ಸಂಘದ ಗೌರವ ಕೋಶಾಧಿಕಾರಿ ಕರುಣಾಕರ ಎಸ್.ಭಂಡಾರಿ ತಿಳಿಸಿದ್ದಾರೆ.

ಅಪರಾಹ್ನ 2.30 ಗಂಟೆಯಿಂದÀ ಸಂಘದ ನ್ಯಾ| ಆರ್.ಎಂ ಭಂಡಾರಿ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿüಯಾಗಿ ಕ್ಯಾಬಿನೆಟ್ ಸಿಸ್ಟಮ್ಸ್ ಆ್ಯಂಡ್ ಕಂಟ್ರೋಲ್ಸ್ ಪ್ರವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಬಾಲಕೃಷ್ಣ ಪುತ್ತೂರು ಪುಣೆ, ಗೌರವ ಅತಿಥಿüಗಳಾಗಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರÀ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಎಸ್.ಭಂಡಾರಿ, ಭಂಡಾರಿ ಮಹಾ ಮಂಡಲ ಅಧ್ಯಕ್ಷ ಸದಾಶಿವ ಎ.ಭಂಡಾರಿ ಸಕಲೇಶಪುರ, ಶಿವಾಸ್ ಹೇರ್ ಡಿಝೈನರ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಶಿವರಾಮ ಕೆ.ಭಂಡಾರಿ, ಕರಾವಳಿ ಇಂಟರ್‍ನೆಟ್ ಸರ್ವಿಸ್ ಮತ್ತು ಕೇಬಲ್ ಟಿವಿ ನೆಟ್‍ವರ್ಕ್ ಬೆಂಗಳೂರು ಇದರ ಆಡಳಿತ ನಿರ್ದೇಶಕ ಲಕ್ಷ್ಮಣ್ ಕರಾವಳಿ, ತಿರುಮಲ ಗ್ರೂಫ್ ಪುಣೆ ಆಡಳಿತ ನಿರ್ದೇಶಕ ಪ್ರಶಾಂತ್ ಕಾರ್ಕಳ್ ಪುಣೆ, ಭಂಡಾರಿ ಸೇವಾ ಸಮಿತಿ ಮುಂಬಯಿ ಮಾಜಿ ಅಧ್ಯಕ್ಷಗಳಾದ ಮಾಧವ ಆರ್.ಭಂಡಾರಿ, ನ್ಯಾ| ಸುಂದರ್ ಜಿ.ಭಂಡಾರಿ, ಬಾಲಕೃಷ್ಣ ಪಿ.ಭಂಡಾರಿ, ನ್ಯಾ| ಶೇಖರ ಎಸ್.ಭಂಡಾರಿ, ಮಹಿಳಾ ವಿಭಾಗ ಮಾಜಿ ಕಾರ್ಯಾಧ್ಯಕ್ಷೆಯರಾದ ರುಕ್ಮಿಣಿ ಎ.ಭಂಡಾರಿ, ಲಲಿತಾ ವಿ.ಭಂಡಾರಿ, ಶೋಭಾ ಎಸ್.ಭಂಡಾರಿ ಆಗಮಿಸಿ ಸಮಾಜದ ಸಾಧಕರಾದ ವಿಠಲ್ ಕೆ.ಭಂಡಾರಿ ಭಾಂಡೂಪ್, ಟಿ.ಎಂ ಶೇಖರ್ ಭಂಡಾರಿ ಮುಲುಂಡ್, ವಿಜಯನಂದ ಎಂ.ಭಂಡಾರಿ ಬಾಂದ್ರಾ, ವನಿತಾ ಎಸ್.ಭಂಡಾರಿ ಮಲಾಡ್ ಇವರನ್ನು ಸನ್ಮಾನಿಸಲಿರುವರು ಎಂದು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಆರ್.ಭಂಡಾರಿ ತಿಳಿಸಿದ್ದಾರೆ.

ಸಂಜೆ 4.00 ಗಂಟೆಯಿಂದ ಪನ್ವಿ ಕ್ರಿಯೇಷನ್ಸ್ ಸಂಸ್ಥೆಯು ಹರೀಶ್ ಶೆಟ್ಟಿ ಎರ್ಮಾಳ್ ನಿರ್ದೇಶನದಲ್ಲಿ ಸಂಗೀತ, ನೃತ್ಯಗಳೊಂದಿಗೆ ರಸಮಂಜರಿ ಕಾರ್ಯಕ್ರಮ ಪ್ರಸ್ತುತ ಪಡಿಸಲಿದೆ. ಆ ನಿಮಿತ್ತ ಬೃಹನ್ಮುಂಬಯಿ, ಉಪನಗರಗ ಳು ಸೇರಿದಂತೆ ಮಹಾರಾಷ್ಟ್ರ ರಾಜ್ಯದಾದ್ಯಂತ ನೆಲೆಯಾಗಿರುವ ಎಲ್ಲಾ ಭಂಡಾರಿ ಬಾಂಧವರು ಮತ್ತು ಹಿತೈಷಿಗಳು ಈ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಶಶಿಧರ ಡಿ.ಭಂಡಾರಿ ಮತ್ತು ಸರ್ವ ಪದಾಧಿಕಾರಿಗಳು ವಿನಂತಿಸಿದ್ದಾರೆ.

 

 
More News

ಬಿಲ್ಲವ ಭವನದಲ್ಲಿ ಸಾಂಪ್ರದಾಯಿಕವಾಗಿ ನೆರವೇರಿದ ಗುರುಪೂರ್ಣಿಮೆ  ಕೋಟಿಚೆನ್ನಯ-ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಭಕ್ತರಿಂದ ವಿಶೇಷ ಪೂಜೆ
ಬಿಲ್ಲವ ಭವನದಲ್ಲಿ ಸಾಂಪ್ರದಾಯಿಕವಾಗಿ ನೆರವೇರಿದ ಗುರುಪೂರ್ಣಿಮೆ ಕೋಟಿಚೆನ್ನಯ-ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಭಕ್ತರಿಂದ ವಿಶೇಷ ಪೂಜೆ
ಯೋಕ್ಷಾ ಶೆಟ್ಟಿ ಪುಟ್ಟ ಮಗು ಉಳಿಸಲು ನೆರವಿಗೆ ಮೊರೆ
ಯೋಕ್ಷಾ ಶೆಟ್ಟಿ ಪುಟ್ಟ ಮಗು ಉಳಿಸಲು ನೆರವಿಗೆ ಮೊರೆ
ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ವಿಶ್ವೇಶತೀರ್ಥಶ್ರೀಗಳಿಂದ ತಪ್ತ ಮುದ್ರಾಧಾರಣೆ ಶ್ರೀ ಕೃಷ್ಣ ದೇವರಿಗೆ ಮಹಾಪೂಜೆ ನೆರವೇರಿಸಿದ ವಿಶ್ವೇಶತೀರ್ಥಶ್ರೀಗಳು
ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ವಿಶ್ವೇಶತೀರ್ಥಶ್ರೀಗಳಿಂದ ತಪ್ತ ಮುದ್ರಾಧಾರಣೆ ಶ್ರೀ ಕೃಷ್ಣ ದೇವರಿಗೆ ಮಹಾಪೂಜೆ ನೆರವೇರಿಸಿದ ವಿಶ್ವೇಶತೀರ್ಥಶ್ರೀಗಳು

Comment Here