Wednesday 27th, March 2019
canara news

ಡಿ.20: ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಮುದ್ದು ಮೂಡುಬೆಳ್ಳೆ ಅವರಿಗೆ ಅಧಿಕೃತ ಆಮಂತ್ರಣ

Published On : 15 Dec 2018   |  Reported By : Rons Bantwal


ಮುಂಬಯಿ (ಶಿರ್ವ), ಡಿ.15: ಉಡುಪಿ ಜಿಲ್ಲೆಯ ನೂತನ ತಾಲೂಕು ಆಗಿ ರಚನೆಗೊಂಡಿರುವ ಕಾಪು ತಾಲೂಕಿನ ಪ್ರಪ್ರಥಮಕನ್ನಡ ಸಾಹಿತ್ಯ ಸಮ್ಮೇಳನ ಡಿ.20ನೇ ಗುರುವಾರ ಶಿರ್ವ ಸಮೀಪದ ಕುತ್ಯಾರು ಶ್ರೀ ಪರಶುರಾಮೇಶ್ವರ ಕ್ಷೇತ್ರದ ಶ್ರೀಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಸಭಾಂಗಣದಲ್ಲಿ ಜರುಗಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರು, ಆಕಾಶವಾಣಿ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಕವಿ, ಸಾಹಿತಿ ಮುದ್ದು ಮೂಡುಬೆಳ್ಳೆ ಅವರಿಗೆ ಕಸಾಪ ಉಡುಪಿ ಜಿಲ್ಲಾ ಸಮಿತಿ, ಕಾಪು ತಾಲೂಕು ಘಟಕ ಹಾಗೂ ಸಮ್ಮೇಳನ ಸಮಿತಿ ವತಿಯಿಂದ ಮೂಡುಬೆಳ್ಳೆ ನಿವಾಸದಲ್ಲಿ ಸಮಿತಿಯ ವತಿಯಿಂದ ಗೌರವಿಸಿ ಅಧಿಕೃತವಾಗಿ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.

ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಜಿಲ್ಲೆಯ ಸಾಹಿತ್ಯ ಪರಂಪರೆ, ಹಾಗೂ ಸಾಹಿತ್ಯ ಪರಿಷತ್ತು ಕನ್ನಡ ನಾಡು,ನುಡಿ,ಪರಂಪರೆ, ಸಂಸ್ಕøತಿ, ಜಾನಪದಕ್ಕೆ ಒತ್ತು ನೀಡಿ, ಮಾಡುತ್ತಿರುವ ಕಾರ್ಯ ಸಾಧನೆಗಳ ಬಗ್ಗೆ ಮಾಹಿತಿ ನೀಡಿ, ಕಾಪು ತಾಲೂಕಿನ ಪ್ರಪ್ರಥಮ ಸಾಹಿತ್ಯ ಸಮ್ಮೇಳನ ಭವಿಷ್ಯದ ಸಾಹಿತ್ಯಕ್ಷೇತ್ರಕ್ಕೆ ದಿಕ್ಸೂಚಿಯಾಗಲಿ ಎಂದರು.

ಸಾಹಿತ್ಯ ಪರಿಷತ್ತುಜಿಲ್ಲಾಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಅಭಿನಂದಿಸಿ ಶುಭಕೋರಿದರು. ಅಹ್ವಾನಪತ್ರ ಸ್ವೀಕರಿಸಿದ ಮುದ್ದು ಮೂಡುಬೆಳ್ಳೆ ಮಾತನಾಡಿ, ತಾಲೂಕಿನ ಪ್ರಪ್ರಥಮ ಐತಿಹಾಸಿಕ ಸಮ್ಮೇಳನದ ಸರ್ವಾಧ್ಯಕ್ಷತೆಗೆಆಯ್ಕೆ ಮಾಡಿ,ಕಳೆದ 40 ವರ್ಷಗಳಿಂದ ಸಾಹಿತ್ಯದ ವಿವಿಧ ಮಜಲುಗಳಲ್ಲಿ ನೀಡುತ್ತಿರುವ ಸಾಹಿತ್ಯಸೇವೆಯನ್ನು ಗುರುತಿಸಿ ಗೌರವಿಸಿದ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಘಟಕ, ಸಮ್ಮೇಳನ ಸಮಿತಿಯವರಿಗೆ ಕೃತಜ್ಞತೆ ಸಲ್ಲಿಸಿ ಎಲ್ಲರೂ ಜೊತೆಯಾಗಿ ಈ ಸಮ್ಮೇಳನ ಸ್ಮರಣೀಯವಾಗಿ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಸಮ್ಮೇಳನದ ಗೌರವ ಕಾರ್ಯದರ್ಶಿ ಕುತ್ಯಾರು ಪ್ರಸಾದ್ ಶೆಟ್ಟಿ, ಸಮ್ಮೇಳನ ಸಮಿತಿ ಉಪಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಕಸಾಪ ತಾಲೂಕು ಘಟಕದ ಕೋಶಾಧಿಕಾರಿ ಎಸ್.ಎಸ್ ಪ್ರಸಾದ್ ಬಂಟಕಲ್ಲು, ಸಮತಿ ಸದಸ್ಯರಾದ ಹರೀಶ್ ಕಟ್ಪಾಡಿ, ಕೃಷ್ಣಕುಮಾರ್ ಮಟ್ಟು, ಸಲಹಾ ಸಮಿತಿಯ ಪದ್ಮನಾಭ ನಾಯಕ್ ಬೆಳ್ಳೆ, ತಾ.ಪಂ ಸದಸ್ಯೆ ಸುಜಾತಾ ಸುವರ್ಣ, ಮುದ್ದು ಮೂಡುಬೆಳ್ಳೆ ಅವರ ಸಹೋದರಿ ಗಿರಿಜಾ ಮೂಡುಬೆಳ್ಳೆ, ಕ್ರಿಸ್ತಿನ್ ಫೆರ್ನಾಂಡಿಸ್ ಬೆಳ್ಳೆ, ಅನಿಲ್ ಆಳ್ವ ಉಪಸ್ಥಿತರಿದ್ದರು.

ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಸಮಿತಿ ಸದಸ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ಸಮ್ಮೇಳನದ ಗೌರವ ಕಾರ್ಯದರ್ಶಿ ಕುತ್ಯಾರು ಪ್ರಸಾದ್ ಶೆಟ್ಟಿಧನ್ಯವಾದವಿತ್ತರು.

 
More News

ಬಾಂದ್ರಾ ಟರ್ಮಿನಲ್ ನಿಂದ ಮಂಗಳೂರು ಜಂಕ್ಷಣ್ ರೈಲು ಪ್ರಯಾಣಕ್ಕೆ ಹಸಿರು ನಿಶಾನೆ
ಬಾಂದ್ರಾ ಟರ್ಮಿನಲ್ ನಿಂದ ಮಂಗಳೂರು ಜಂಕ್ಷಣ್ ರೈಲು ಪ್ರಯಾಣಕ್ಕೆ ಹಸಿರು ನಿಶಾನೆ
ಶಿವಾ'ಸ್ ಹೇರ್ ಡಿಝೈನರ್ಸ್ ಪ್ರಸಿದ್ಧಿಯ ಶಿವರಾಮ ಕೆ.ಭಂಡಾರಿ ಮುಡಿಗೇರಿಸಿದ ಗ್ಲೋಬಲ್ ಲೀಡರ್ಸ್ ಆವಾರ್ಡ್ ಎಂಟರ್‍ಪ್ರೈಸ್ ಎಡಿಶನ್ -2019 ಪ್ರಶಸ್ತಿ
ಶಿವಾ'ಸ್ ಹೇರ್ ಡಿಝೈನರ್ಸ್ ಪ್ರಸಿದ್ಧಿಯ ಶಿವರಾಮ ಕೆ.ಭಂಡಾರಿ ಮುಡಿಗೇರಿಸಿದ ಗ್ಲೋಬಲ್ ಲೀಡರ್ಸ್ ಆವಾರ್ಡ್ ಎಂಟರ್‍ಪ್ರೈಸ್ ಎಡಿಶನ್ -2019 ಪ್ರಶಸ್ತಿ
ಪೆÇಲೀಸ್ ಆಯುಕ್ತ ಸಂಜಯ್ ಬಾರ್ವೆ ಅವರನ್ನು ಅಭಿನಂದಿಸಿದ  ಜಯ ಸಿ.ಸುವರ್ಣ
ಪೆÇಲೀಸ್ ಆಯುಕ್ತ ಸಂಜಯ್ ಬಾರ್ವೆ ಅವರನ್ನು ಅಭಿನಂದಿಸಿದ ಜಯ ಸಿ.ಸುವರ್ಣ

Comment Here