Wednesday 14th, May 2025
canara news

ಖಾರ್ ಪೂರ್ವದ ಭಾರತ್ ಬ್ಯಾಂಕ್ ಶಾಖೆಯಲ್ಲಿ ಎಟಿಎಂ ಕಾರ್ಯಾರಂಭ

Published On : 17 Dec 2018   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.17: ಖಾರ್ ಪೂರ್ವದಲ್ಲಿನ ಜವಾಹರ್ ನಗರದ ಗೋಲಿಬಾರ್ ರೋಡ್‍ನಲ್ಲಿರುವ ಮಹಾತ್ಮಾ ಕೋ.ಅಪರೇಟಿವ್ ಹೌಸಿಂಗ್ ಸೊಸೈಟಿ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ತನ್ನ ಗ್ರಾಹಕರ ಹೆಚ್ಚುವರಿ ಸೇವೆಗಾಗಿ ಇಂದಿಲ್ಲಿ ಶುಕ್ರವಾರ ಬೆಳಿಗ್ಗೆ ಎಟಿಎಂ ಕೇಂದ್ರ ಕಾರ್ಯಾರಂಭಿಸಿತು. ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಿದ ನಂತರ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ಎಟಿಎಂ ಕೇಂದ್ರ ಉದ್ಘಾಟಿಸಿ ಶುಭಾರೈಸಿದರು. ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಖಾರ್ ಅಧ್ಯಕ್ಷ ಶಂಕರ್ ಕೆ.ಸುವರ್ಣ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.

ಕಾರ್ಯಕ್ರಮದಲ್ಲಿ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಖಾರ್ ಇದರ ಗೌರವಾಧ್ಯಕ್ಷ ಶ್ರೀಧರ್ ಜೆ.ಬಂಗೇರ, ಬ್ಯಾಂಕ್‍ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ, ನಿರ್ದೇಶಕರಾದ ಶಾರದಾ ಸೂರು ಕರ್ಕೇರ, ಎಂ.ಎನ್ ಕರ್ಕೇರಾ, ಎನ್.ಟಿ ಪೂಜಾರಿ, ಪುರುಷೋತ್ತಮ ಎಸ್. ಕೋಟ್ಯಾನ್, ಪ್ರೇಮನಾಥ್ ಪಿ. ಕೋಟ್ಯಾನ್, ಮಾಜಿ ನಿರ್ದೇಶಕರುಗಳಾದ ಎನ್.ಎಂ ಸನಿಲ್, ಪ್ರಧಾನ ಪ್ರಬಂಧÀಕ ಹಾಗೂ ಅಭಿವೃದ್ಧಿ ವಿಭಾಗದ ಮುಖ್ಯಸ್ಥ (ಹೆಚ್‍ಆರ್‍ಎಂ) ದಿನೇಶ್ ಬಿ.ಸಾಲಿಯಾನ್, ಉಪ ಪ್ರಧಾನ ಪ್ರಬಂಧಕ ಜನಾರ್ದನ ಎಂ.ಪೂಜಾರಿ, ಅಭಿವೃದ್ಧಿ ವಿಭಾಗದ ವಿಜಯ್ ಪಾಲನ್, ಅವೀಶ್ ಪೂಜಾರಿ ಉಪಸ್ಥಿತರಿದ್ದು ಬ್ಯಾಂಕ್‍ನ ಶ್ರೇಯೋಭಿವೃದ್ಧಿಗೆ ಯಶ ಕೋರಿದರು.

ಉಳ್ಳೂರು ಧನಂಜಯ ಶಾಂತಿ ಮತ್ತು ಉಳ್ಳೂರು ಶೇಖರ್ ಶಾಂತಿ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು. ಗಂಗಾಧರ್ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. ಯಶೋಧಾ ತರುಣ್ ಅವಿೂನ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದÀರು. ಶಾಖೆಯ ಮುಖ್ಯಸ್ಥ ಜಯಾ ಎ.ಕೋಟ್ಯಾನ್ ಸುಖಾಗಮನ ಬಯಸಿದರು. ಶಾಖೆಯ ಸಹ ಪ್ರಬಂಧಕಿ ಜಯಶ್ರೀ ವಿ.ಅವಿೂನ್ ಅಭಾರ ಮನ್ನಿಸಿದರು .

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here