Wednesday 14th, May 2025
canara news

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ನೆರವೇರಿಸಿದ 74ನೇ ವಾರ್ಷಿಕ ಶನಿಪೂಜೆ

Published On : 18 Dec 2018   |  Reported By : Rons Bantwal


ಗಣಹೋಮ-ಸತ್ಯನಾರಾಯಣ ಪೂಜೆ-ಭಜನೆ-ಶ್ರೀ ಶನಿದೇವರ ಕಲಶ ಪ್ರತಿಷ್ಠಾಪನೆ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.17: ಮುಂಬಯಿ ಫೆÇೀರ್ಟ್ ಪ್ರದೇಶದ ಮೋದಿ ಸ್ಟ್ರೀಟ್‍ನಲ್ಲಿ ಕಳೆದ ಸುಮಾರು ಏಳುವರೆ ದಶಕಗಳಿಂದ ಸೇವಾ ನಿರತ ಸ್ವರ್ಗೀಯ ಕೃಷ್ಣಪ್ಪ ಕೆ.ಕೋಟ್ಯಾನ್ ಮತ್ತು ನಾರಾಯಣ ಬಿ.ಸಾಲ್ಯಾನ್ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ತನ್ನ 74ನೇ ವಾರ್ಷಿಕ ಶನಿ ಮಹಾಪೂಜೆಯನ್ನು ಧಾರ್ಮಿಕ ಕೈಂಕರ್ಯಗಳೊಂದಿಗೆ ವಿಧಿವತ್ತಾಗಿ ನೆರವೇರಿಸಿ ಸೇವಾ ಸಮಿತಿಯ ಅಮೃತ ವರ್ಷಕ್ಕೆ ಚಾಲನೆಯನ್ನೀಡಿತು.

ಆ ಪ್ರಯುಕ್ತ ಇಂದಿಲ್ಲಿ ಶನಿವಾರ ಫೆÇೀರ್ಟ್ (ವಿಟಿ) ಮಿಂಟ್ ರಸ್ತೆ ಅಲ್ಲಿನ ಖಾಂಜಿ ಕೇತ್ಸೀ ಸಭಾಗೃಹದಲ್ಲಿ ಬೆಳಿಗ್ಗೆ ಶ್ರೀ ಹರೀಶ್ ಶಾಂತಿ ಹೆಜ್ಮಾಡಿ ಪೌರೋಹಿತ್ಯದಲ್ಲಿ ಗಣಹೋಮ, ಸತ್ಯನಾರಾಯಣ ಪೂಜೆ ನೆರವೇರಿಸಿ ಶ್ರೀ ಶನಿದೇವರ ಕಲಶ ಪ್ರತಿಷ್ಠಾಪನೆಗೈದು ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು. ಸೇವಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ ಮತ್ತು ರಕ್ಷಿತಾ ವಿಶ್ವನಾಥ್ ಹಾಗೂ ಕೋಶಾಧಿಕಾರಿ ಶರತ್ ಜಿ.ಪೂಜಾರಿ ಮತ್ತು ವಿನಿತಾ ಸೇವಾ ಸಮಿತಿ ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಶ್ರೀ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಮತ್ತು ವಿದ್ಯಾದಾಯಿನಿ ಭಜನಾ ಮಂಡಳಿ ಕೋಟೆ ಭಜನೆಗೈದರು. ಮಧ್ಯಾಹ್ನ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶನಿಗ್ರಂಥ ಪಾರಾಯಣ ಹಾಗೂ ಅನ್ನಸಂತರ್ಪಣೆ, ರಾತ್ರಿ ಶ್ರೀ ಶನಿದೇವರಿಗೆ ಮಹಾ ಮಂಗಳಾರತಿ ತೀರ್ಥಪ್ರಸಾದ ಮತ್ತು ಅನ್ನಸಂತರ್ಪಣೆ ನೆರವೇರಿಸಲ್ಪಟ್ಟಿತು.

ಈ ಸಂದರ್ಭದಲ್ಲಿ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ ಅಧ್ಯಕ್ಷ ಜೆ.ಜೆ ಕೋಟ್ಯಾನ್, ಉಪಾಧ್ಯಕ್ಷರುಗಳಾದ ರವಿ ಎಲ್.ಬಂಗೇರ ಮತ್ತು ಜನಾರ್ದನ ಶೆಟ್ಟಿ, ಜೊತೆ ಕಾರ್ಯದರ್ಶಿ ರಾಜೇಶ್ ಸುವರ್ಣ, ಜೊತೆ ಕೋಶಾಧಿಕಾರಿಗಳಾದ ಪ್ರಶಾಂತ ಕರ್ಕೇರ ಮತ್ತು ಅಕ್ಷಯ್ ಸುವರ್ಣ, ಹಿರಿಯ ಸದಸ್ಯರೂ ಸಲಹೆಗಾರರಾದ ಬಿ.ಬಿ ಕೋಟ್ಯಾನ್, ಸದಾನಂದ ಸುವರ್ಣ, ಮೋಹನ್ ಡಿ.ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರನೇಕರು, ಮಂದಿರದ ಆರ್ಚಕರು, ಭುವಾಜಿಗಳು ಸೇರಿದಂತೆ ವಿಶೇಷ ಆಮಂತ್ರಿತ ಸದಸ್ಯರು, ಹಲವು ಸದಸ್ಯರು, ದಾನಿಗಳು, ಭಕ್ತರನೇಕರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಶನಿದೇವರ ಕೃಪೆಗೆ ಪಾತ್ರರಾದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here