Wednesday 14th, May 2025
canara news

ಕನ್ನಡ ಸಂಘ ಸಾಂತಾಕ್ರೂಜ್ ವಜ್ರಮಹೋತ್ಸವ ಸಂಭ್ರಮದ ಸಮಾಪನ ಸಮಾರಂಭ

Published On : 21 Dec 2018   |  Reported By : Rons Bantwal


ಉಪಕಾರ ಮನೋಭಾವ ತುಳು ಕನ್ನಡಿಗರ ದೊಡ್ಡತನ : ಪದ್ಮನಾಭ ಪಯ್ಯಡೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.21: ಕೃಷಿಕರೂ, ಶ್ರಮಜೀವಿಗಳಾದ ಕನ್ನಡಿಗರು ಕಷ್ಟದ ಜೀವನದಿಂದ ಬೆಳೆದು ಬಾಳಿದವರು. ಉಪಕಾರ ಮನೋಭಾವ ತುಳು ಕನ್ನಡಿಗರ ದೊಡ್ಡತನ ಆಗಿದ್ದು, ಭಾಷಾ ಉದ್ದೇಶದಿಂದ ಸಂಸ್ಥೆಗಳನ್ನು ಕಟ್ಟಿ ಜನಪರ ಸೇವೆಯಲ್ಲಿ ತೊಡಗಿಸಿ ಕೊಂಡವÀರು. ಕರ್ಮಭೂಮಿಯಲ್ಲೂ ಪರಸ್ಪರ ಸಂಬಂಧಗಳನ್ನು ಬೆಳೆಸಿ ಬದುಕು ಕಟ್ಟಿಕೊಂಡ ಕನ್ನಡಿಗರು ಭಾಷೆಯ ಮೂಲಕವೂ ತಮ್ಮ ಅಸ್ಮಿತೆಯನ್ನು ರೂಪಿಸಿದವರಾಗಿದ್ದಾರೆ. ಮರಾಠಿಗರು ಬಹಳ ಸರಳ, ಸೌಮ್ಯ ಸ್ವಭಾವದವರಾಗಿದ್ದು ನಮ್ಮೆಲ್ಲಾ ಸೇವೆಗೆ ಮರಾಠಿಗರ ಸಹಯೋಗ ಅನುಪಮ. ಅವರ ಪೆÇ್ರೀತ್ಸಾಹದಿಂದಲೇ ತುಳುಕನ್ನಡಿಗರು ಎತ್ತರಕ್ಕೆ ಬೆಳೆದಿದ್ದಾರೆ. ಆದ್ದರಿಂದ ನಾವೂ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ತಿಳಿಸಿದರು.

ಕನ್ನಡ ಸಂಘ ಸಾಂತಾಕ್ರೂಜ್ ತನ್ನ ಅರ್ವತ್ತರ ಸಂಭ್ರಮ ವಜ್ರಮಹೋತ್ಸವವನ್ನು ಇಂದಿಲ್ಲಿ ಭಾನುವಾರ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಸಂಭ್ರಮಿಸಿದ್ದು ಸಂಜೆ ನಡೆಸಿದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರಲ್ಲಿ ಸಾಮರಸ್ಯದ ಸಂಬಂಧಗಳನ್ನು ರೂಢಿಸಿರುವ ಎಲ್ವೀ ಅವಿೂನ್ ಓರ್ವ ಬಲಿಷ್ಠ ಸಂಘಟಕ. ಸುದೀರ್ಘವಾದ ಇತಿಹಾಸವಿರುವ ಈ ಸಂಘಕ್ಕೆ ಸರ್ವರನ್ನೂ ಸೇರಿಸಿ ಬೆಳೆಸಿದ ಈ ಕನ್ನಡ ಸಂಘದ ವಜ್ರಮಹೋತ್ಸವ ಇದೊಂದು ಮೈಲಿಗಲ್ಲನ್ನು ರೂಪಿಸುವ ಸುಸಂದರ್ಭ. ಸಂಘಟನೆ ಮೂಲಕ ಜನಹಿತ ಸಹಾಯವಾಗಬೇಕು. ಪ್ರಸ್ತುತ ಕಾಲದಲ್ಲಿ ಸಹಾಯ ಮಾಡುವುದು ಸುಲಭ ಸಾಧ್ಯವಲ್ಲ. ಆದುದರಿಂದ ಹಿರಿಯರ ದೂರದೃಷ್ಟಿತ್ವವನ್ನು ಅನುಕರಿಸಿ ಅವರ ಧ್ಯೇಯಗಳನ್ನು ಅರ್ಥಪೂರ್ಣವಾಗಿ ಪೂರೈಸೋಣ ಎಂದೂ ಪಯ್ಯಡೆ ಕರೆಯಿತ್ತರು.

ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್ ಘನಾಧ್ಯಕ್ಷತೆಯಲ್ಲಿ ಜರಗಿಸಲ್ಪಟ್ಟ ಸಮಾರಂಭದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಉಪಾಧ್ಯಕ್ಷ ಹರೀಶ್ ಜಿ.ಅವಿೂನ್, ರಾಜ್ಯೋತ್ಸವ ಪ್ರಶಸ್ತಿಪುರಸ್ಕೃತ ಆಥಿರ್üಕ ತಜ್ಞ ಡಾ| ಆರ್.ಕೆ.ಶೆಟ್ಟಿ, ಸೋನಿ ಸ್ಟೀಲ್ ಆ್ಯಂಡ್ ಎಪ್ಲಾಯನ್ಸಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಪಾಂಡುರಂಗ ಎಸ್.ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಜಯಕೃಷ್ಣ ಎ.ಶೆಟ್ಟಿ, ಕರ್ನಾಟಕಮಲ್ಲ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾ| ಸುಭಾಷ್ ಬಿ.ಶೆಟ್ಟಿ, ಭಾರತ್ ಬ್ಯಾಂಕ್ ನಿರ್ದೇಶಕರಾದ ನ್ಯಾ| ಸೋಮನಾಥ್ ಬಿ.ಅವಿೂನ್, ತೀಯಾ ಸಮಾಜ ಮುಂಬಯಿ ನಿಕಟಪೂರ್ವಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ದಿವ್ಯಾ ಸಾಗರ್ ಸಮೂಹದ ಆಡಳಿತ ನಿರ್ದೇಶಕ ಮುದ್ರಾಡಿ ದಿವಾಕರ ಶೆಟ್ಟಿ ಉಪಸ್ಥಿತರಿದ್ದು ಬಿಲ್ಲವರ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಸಂಘದ ವಜ್ರಮಹೋತ್ಸವ ಸ್ಮರಣಿಕೆ ಬಿಡುಗಡೆ ಗೊಳಿಸಿ ಶುಭಾರೈಸಿದರು.

ಬಹುತೇಕ ಕನ್ನಡಿಗರು ಕಲಿಕೆ ಹುಚ್ಚಿನಿಂದ ಊರು ಬಿಟ್ಟು ಮುಂಬಯಿ ಸೇರಿದವರಾಗಿದ್ದಾರೆ. ಇವರಿಗೆಲ್ಲಾ ಮುಂಬಯಿನ ರಾತ್ರಿ ಶಾಲೆಗಳು ಆಸರೆಯಾಗಿವೆ. ಆದರೆ ಈಗೀನ ಪೀಳಿಗೆ ಇದನ್ನು ಒಪ್ಪಿಕೊಳ್ಳುವರೇ ಎಂದು ಮನವರಿಸುವ ಅಗತ್ಯವಿದೆ. ಮಾನವ ಮಾಡುವ ಮಾನವೀಯ ಕರ್ತವ್ಯ ಈ ಸಂಘ ನಿಸ್ವಾರ್ಥವಾಗಿ ನೇರವೇರಿಸಿದ ಫಲವೇ ಈ ಸಂಭ್ರಮವಾಗಿದೆ ಎಂದು ಪಾಲೆತ್ತಾಡಿ ತಿಳಿಸಿದರು.

ಸಂಘವು 60ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಸಂಘವು ಇನ್ನಷ್ಟು ಬೆಳಗಲಿ. ಸಂಘದ ದೀರ್ಘಾವಧಿ ಅಧ್ಯಕ್ಷರಾದ ಎಲ್.ವಿ ಅಮೀನ್ ಅವರ ಅಧ್ಯಕ್ಷಸ್ಥಾನವೂ ಬೆಳ್ಳಿಹಬ್ಬ ಆಚರಿಸಿ ಸಂಘವು ಸರ್ವೋನ್ನತಿ ಸಾಧಿಸುವಂತಾಗಲಿ ಎಂದು ಎನ್.ಟಿ ಪೂಜಾರಿ ಆಶಯ ವ್ಯಕ್ತಪಡಿಸಿದರು.

ಈ ಶುಭಾವಸರದಲ್ಲಿ ಸಂಘದ ಅರವತ್ತು ವರ್ಷಗಳಲ್ಲಿ ದೀರ್ಘಾವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪ್ರಸಕ್ತ ಅಧ್ಯಕ್ಷ ಎಲ್.ವಿ ಅಮೀನ್ ಅವರಿಗೆ `ಸಮಾಜ ಸ್ನೇಹಿ' ಬಿರುದು ಪ್ರದಾನಿಸಿ (ಪತ್ನಿ ಸುಧಾ ಎಲ್ವೀ, ಸುಪುತ್ರಿಯರಾದ ಇಶಾ ಎಲ್ವೀ, ಡಾ| ಇತಿಕಾ ಎಲ್ವೀ, ಸೌಮ್ಯ ಎನ್.ಸಾಲ್ಯಾನ್ ಮತ್ತು ನವೀನ್ ಸಾಲ್ಯಾನ್ (ಜೊತೆಗೂಡಿ), ವಜ್ರಮಹೋತ್ಸವ ಸಮಿತಿ ಕಾರ್ಯಧ್ಯಕ್ಷ ಬಿ.ಆರ್ ಪೂಂಜ, ಗೌರವಾಧ್ಯಕ್ಷರಾದ ನಾರಾಯಣ ಎಸ್.ಶೆಟ್ಟಿ (ಪತ್ನಿ ಪ್ರಮೀಳಾ ನಾರಾಯಣ್) ಮತ್ತು ಎನ್.ಎಂ ಸನಿಲ್ (ಪತ್ನಿ ಲೀಲಾ ಸನಿಲ್), ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಮತ್ತು ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ಮತ್ತು ಸಾಮಾಜಿಕ ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷಿ ್ಮೀ ಎನ್.ಕೋಟ್ಯಾನ್ ಅವರನ್ನು ಅತಿಥಿüಗಳು ಸನ್ಮಾನಿಸಿ ಅಭಿನಂದಿಸಿದರು.

ಬೊರಿವಲಿ ಲೋಕಸಭಾ ಸದಸ್ಯ ಗೋಪಾಲ ಸಿ.ಶೆಟ್ಟಿ, ಭವಾನಿ ಫೌಂಡೇಶನ್ ನವಿಮುಂಬಯಿ ಸಂಸ್ಥಾಪಕಾಧ್ಯಕ್ಷÀ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ ಮಧ್ಯಾಂತರದಲ್ಲಿ ಆಗಸಿ ಕಾರ್ಯಕ್ರಮಕ್ಕೆ ಶುಭೇಚ್ಛ ಕೋರಿದರು ಹಾಗೂ ಹಿರಿಯ ಸದಸ್ಯರೂ, ದಾನಿಗಳನ್ನೂ ಗೌರವಿಸಿದರು. ಅತಿಥಿüಗಳೂ ಸಂದರ್ಭೋಚಿತವಾಗಿ ಮಾತನಾಡಿ ಸಂಘದ ಸೇವೆಯನ್ನು ಪ್ರಶಂಸಿ ಶುಭಾರೈಸಿದರು.

ಎಲ್.ವಿ ಅಮೀನ್ ಅಧ್ಯಕ್ಷೀಯ ನುಡಿಗಳನ್ನಾಡಿ ನನ್ನನ್ನು ಸಮಾಜಸ್ನೇಹಿ ಎಂದು ಬಿರುದು ಪ್ರದಾನಿಸಿ ಗೌರವಿಸಿದ ಸಂಘದ ಪದಾಧಿಕಾರಿಗಳಿಗೆ ಹೃತ್ಪೂರ್ವಕ ವಂದನೆ ಸಲ್ಲಿಸುತ್ತೇನೆ. ಬಡತನದಲ್ಲಿರುವವರಿಗೆ ಸಹಾಯ ನೀಡುವ ಉದ್ದೇಶದಿಂದ ಶಿಕ್ಷಣ ಮೂಲ ಉದ್ದೇಶವನ್ನು ಇಟ್ಟುಕೊಂಡು ಸಂಘವು ಸದಾ ಸಮಾಜ ಸೇವೆ ನೀಡುತ್ತಾ ಬಂದಿದೆ. ಮುಂದೆಯೂ ಇನ್ನಷ್ಟು ಜನಪರ ಸೇವೆಯಲ್ಲಿ ತೊಡಗಿಸಿ ಕೊಂಡು ಮನ್ನಡೆಯುವ ವಿಶ್ವಾಸ ನನಗಿದೆ ಎಂದರು.

ವೇದಿಕೆಯಲ್ಲಿ ಗೌ| ಪ್ರ| ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷೆ ವನಿತಾ ವೈ.ನೋಂದ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದು, ಸಂಘದ ವಿದ್ಯಾದಾನಿಗಳಾದ ಪದ್ಮನಾಭ ಎಸ್.ಪಯ್ಯಡೆ, ಎನ್.ಟಿ ಪೂಜಾರಿ, ಡಾ| ಆರ್.ಕೆ.ಶೆಟ್ಟಿ, ಹರೀಶ್ ಜಿ.ಅವಿೂನ್, ಸ್ಮರಣ ಸಂಚಿಕೆ ಮುದ್ರಕ ಪ್ರಸನ್ನ ಶೆಟ್ಟಿ, ಹರೀಶ್ ಪೂಜಾರಿ ಕೊಕ್ಕರ್ಣೆ ಇವರನ್ನು ಅಧ್ಯಕ್ಷರು ಸನ್ಮಾನಿಸಿ ಅಭಿವಂದಿಸಿದರು.

ಲಕ್ಷಿ ್ಮೀ ಎನ್.ಕೋಟ್ಯಾನ್ ಪ್ರಾರ್ಥನೆಯನ್ನಾಡಿದರು. ಸಂಘದ ಉಪಾಧ್ಯಕ್ಷ ಗುಣಪಾಲ ಶೆಟ್ಟಿ ಐಕಳ (ನಿಧಿ ಸಂಗ್ರಹ ಸಮಿತಿ ಕಾರ್ಯಾಧ್ಯಕ್ಷ) ಸುಖಾಗಮನ ಬಯಸಿದರು. ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ ಸನ್ಮಾನಿತರನ್ನು ಪರಿಚಯಿಸಿದರು. ಬಂಟರವಾಣಿ ಮಾಸಿಕದ ಸಂಪಾದಕ ಅಶೋಕ್ ಪಕ್ಕಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಧನ್ಯವದಿಸಿದರು.

ಲತೇಶ್ ಎಂ.ಪೂಜಾರಿ ಸಾರಥ್ಯದಲ್ಲಿ ಸಂಘದ ಸದಸ್ಯರು, ಮಕ್ಕಳು ವೈವಿಧ್ಯಮಯ ಕಾರ್ಯಕ್ರಮಗಳನ್ನು, ಶ್ರೀ ದುರ್ಗಾ ಪರಮೇಶ್ವರಿ ಕೃಪಾ ಪೆÇೀಷಿತ ಯಕ್ಷಗಾನ ಕಲಾ ಮಿತ್ರ ಮಂಡಳಿ ಸಾಕಿನಾಕ ಇದರ ಬಾಲ ಕಲಾವಿದರು `ವೀರ ಅಭಿಮನ್ಯು' ಯಕ್ಷಗಾನ ಹಾಗೂ ಅಭಿನಯ ಮಂಟಪ ಮುಂಬಯಿ ಕಲಾವಿದರು ಕರುಣಾಕರ ಕಾಪು ನಿರ್ದೇಶನದಲ್ಲಿ `ಪುರ್ಸೊತ್ತಿಜ್ಜಿ' ತುಳು ನಾಟಕ ಪ್ರದರ್ಶಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here