Wednesday 14th, May 2025
canara news

ಗೋಕುಲ ಯುವ ವಿಭಾಗದಿಂದ ಆಶ್ರಯದಲ್ಲಿ ಚಿಣ್ಣರಿಗಾಗಿ ಚಳಿಗಾಲದ ಶಿಬಿರ

Published On : 28 Dec 2018   |  Reported By : Rons Bantwal


ಮುಂಬಯಿ, ಡಿ.28: ಬಿಎಸ್‍ಕೆಬಿ ಅಸೋಸಿಯೇಶನ್ ಇದರ ಗೋಕುಲದ ಯುವ ವಿಭಾಗವು ನೇರೂಲ್ ಅಲ್ಲಿರುವ ಹಿರಿಯ ನಾಗರಿಕರ ಆಶ್ರಯಧಾಮ `ಆಶ್ರಯ' ದಲ್ಲಿ ಕಳೆದ ಶನಿವಾರ (ಡಿ.22) ದಿಂದ ಮಕ್ಕಳಿಗಾಗಿ ಮೂರು ದಿನಗಳ ಚಳಿಗಾಲದ ಶಿಬಿರವನ್ನು ಆಯೋಜಿಸಿತ್ತು. 7 ರಿಂದ 15 ವರ್ಷದ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಚಳಿಗಾಲದ ಶಿಬಿರವನ್ನು ಭಜನೆಯೊಂದಿಗೆ ಆರಂಭಿಸಲ್ಪಟ್ಟಿತು.

ಮರುದಿನ ಮುಂಜಾನೆ ಬಾಲಾಲಯ ಶ್ರೀ ಕೃಷ್ಣ ಮಂದಿರದಲ್ಲಿ, ಜಪಾನುಷ್ಠಾನ, ವಿಷ್ಣು ಸಹಸ್ರನಾಮ, ರಾಮರಕ್ಷಾ ಸ್ತೋತ್ರ ಪಠನೆಯೊಂದಿಗೆ ಶಿಬಿರದ ಕಾರ್ಯಾಗಾರ ಆರಂಭವಾಯಿತು. ಸಹನಾ ಪೆÇೀತಿ, ಸಹನಾ ಭಾರದ್ವಾಜ್, ಶಾಲಿನಿ ಉಡುಪ, ಸರೋಜಾ ಸತ್ಯನಾರಾಯಣ, ಸುಚಿತ್ರಾ ರಾವ್, ಪಿ.ಸಿ.ಎನ್ ರಾವ್, ನೀರಜಾ ಭಟ್, ಕೃತಿ ಚಡಗ, ತನ್ವಿ ರಾವ್, ಪ್ರೇಮಾ ಬಿ.ರಾವ್, ಭಜನೆ, ಕನ್ನಡ ಮತ್ತು ಸಂಸ್ಕೃತ ಭಾಷಾಜ್ಞಾನ, ನೃತ್ಯ, ಯಕ್ಷಗಾನ, ಹೂ ಮಾಲೆ ಮಾಡುವುದು ಕಸೂತಿ, ಒರಿಗಾಮಿ ಮುಂತಾದ ಕರಕುಶಲ ವಸ್ತುಗಳನ್ನು ತಯಾರಿಸುವ ಬಗ್ಗೆ ಮಾಹಿತಿಯನ್ನಿತ್ತರು. ಎ.ಪಿ.ಕೆ ಪೆÇೀತಿ ಅವರು ವೇದಿಕ್ ಗಣಿತದಲ್ಲಿ ಮಕ್ಕಳನ್ನು ತರಬೇತಿಗೊಳಿಸಿದರು. ಕಾರ್ನಿವಾಲ್ ಸಪೆÇ್ಪೀರ್ಟ್ಸ್ ಸರ್ವಿಸಸ್‍ನ ಕಾಪೆರ್Çರೇಟ್ ತರಬೇತುದಾರ ಮಹೇಶ್ ಸ್ವಾಮಿನಾಥನ್ ಅವರು `ಆಟದೊಂದಿಗೆ ಪಾಠ' ವನ್ನು ಮತ್ತು ಪ್ರಶಾಂತ್ ಹೆರ್ಲೆ ಮತ್ತು ಶ್ರೀಲಕ್ಷಿ ್ಮ ಉಡುಪ ಅವರು ಮಕ್ಕಳಿಗೆ ವಿಧವಿಧದ ಆಟೋಟಗಳನ್ನು ಕಲಿಸಿಕೊಟ್ಟರು.

ಮಂಗಳವಾರ ಸಂಜೆ ಬಿಎಸ್‍ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆಯಲ್ಲಿ ಶಿಬಿರದ ಸಮಾರೋಪ ಜರಗಿತು. ಕಾರ್ಯದರ್ಶಿ ಎ. ಪಿ.ಕೆ. ಪೆÇೀತಿ, ಯುವ ವಿಭಾಗದ ಅಧ್ಯಕ್ಷ ಹರಿದಾಸ್ ಭಟ್, ಸಂಚಾಲಕ ನಾರಾಯಣ ಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಲಕ್ಷಿ ್ಮೀ ಉಡುಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳು ಹೆಚ್ಚು ಹೆಚ್ಚಾಗಿ ಶಿಬಿರದಲ್ಲಿ ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆಯಬೇಕು. ಶಿಬಿರದಿಂದಾಗುವ ಪ್ರಯೋಜನಗಳನ್ನು ಇತರರಿಗೂ ತಿಳಿಸಿ, ಇನ್ನೂ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಂತೆ ಪೆÇ್ರೀತ್ಸಾಹಿಸಬೇಕು ಎಂದು ಸುರೇಶ್ ರಾವ್ ಮಕ್ಕಳನ್ನು ಅಭಿನಂದಿಸಿದರು. ಹಾಗೂ ಶಿಬಿರದ ಯಶಸ್ಸಿಗೆ ಸಹಕರಿಸಿದ ಸಂಪನ್ಮೂಲ ವ್ಯಕ್ತಿಗಳನ್ನು, ಪದಾಧಿಕಾರಿಗಳು ಸ್ಮರಣಿಕೆಗಳನ್ನಿತ್ತು ಪುರಸ್ಕರಿಸಿದರು ಮತ್ತು ಹರಿದಾಸ್ ಭಟ್ ಅವರ ಮಾರ್ಗದರ್ಶನದಲ್ಲಿ ಶಿಬಿರವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಯುವ ವಿಭಾಗ ಹಾಗೂ ಮಹಿಳಾ ವಿಭಾಗದ ಕಾರ್ಯಕರ್ತರನ್ನು ಅಭಿನಂದಿಸಿದರು.

ಯುವ ವಿಭಾಗದ ಸಂಚಾಲಕ ನಾರಾಯಣ ಮೂರ್ತಿ ಅವರು ಸ್ವಾಗತಿಸಿದರು. ಹರಿದಾಸ್ ಭಟ್ ಧನ್ಯವಾದ ಸಮರ್ಪಿಸಿದರು. ಶಿಬಿರಾಥಿರ್ü ಮಕ್ಕಳು ತಾವು ಕಲಿತ ಭಜನೆ ಹಾಡನ್ನು ಸುಶ್ರಾವ್ಯವಾಗಿ ಹಾಡುವುದರೊಂದಿಗೆ ಶಿಬಿರವು ಸಂಪನ್ನವಾಯಿತು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here