ಶಿವಾ'ಸ್ ಹೇರ್ ಡಿಝೈನರ್ಸ್ ಪ್ರಸಿದ್ಧಿಯ ಶಿವರಾಮ ಭಂಡಾರಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.28: ದಕ್ಷಿಣ ಕನ್ನಡ ಕಾರ್ಕಳ ಅತ್ತೂರು ಮೂಲದ ಮುಂಬಯಿಯಲ್ಲಿ ಹೇರ್ ಸ್ಟೈಲೋ ಮೂಲಕ ಪ್ರಸಿದ್ಧಿ ಗಿಟ್ಟಿಸಿ ಕೊಂಡಿರುವ ಹೆಸರಾಂತ ಕೇಶ ವಿನ್ಯಾಸ ಸಂಸ್ಥೆ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ್ ಕೆ.ಭಂಡಾರಿ ಅತ್ತೂರು ಇವರು ಆಪ್ಟಿಮಲ್ ವಿೂಡಿಯಾ ಸೊಲ್ಯೂಶನ್‍ಸ್ ಸಂಸ್ಥೆ ಟೈಂಮ್ಸ್ ಪವರ್ ಮೆನ್ ಪ್ರಸ್ತುತ ಪಡಿಸಿದ ವಾರ್ಷಿಕ ಪುರಸ್ಕಾರ `ಗ್ರೂಮಿಂಗ್ ಎಕ್ಸ್‍ಪರ್ಟ್ ಆಫ್ ದ ಈಯರ್-2018' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ಬುಧವಾರ ಲೊವರ್ ಪರೇಲ್ ಇಲ್ಲಿನ ಹೈ ಸ್ಟ್ರೀಟ್ ಫಿನಿಕ್ಸ್ ಇದರ ಇಂಪಿರಿಯಲ್ ಸಭಾಗೃಹದಲ್ಲಿ ನಡೆಸಲ್ಪಟ್ಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಶಿವರಾಮ್ ಭಂಡಾರಿ ಅವರಿಗೆ ಪ್ರಶಸ್ತಿ ಪ್ರದಾನಿಸಿ ಶುಭಾರೈಸಿದರು.
ಸ್ವಸಮುದಾಯದ ಕುಲಕಸಬುವನ್ನೇ ಆರಿಸಿ ತಾನೊಬ್ಬನೇ ಕಾರ್ಮಿಕನೂ ಮಾಲಿಕನೂ ಆಗಿ ಸ್ವಂತ ಉದ್ಯಮವನ್ನಾಗಿಸಿ ಕೇಶವಿನ್ಯಾಸ ವೃತ್ತಿಯಿಂದ ದೈನಂದಿನ 30 ರೂಪಾಯಿ ಆದಾಯ ಗಳಿಕೆಯಿಂದ ಸ್ವಂತ ಅಂಗಡಿ ಆರಂಭಿಸಿ ಸದ್ಯ ಸುಮಾರು 20 ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಲೂನ್‍ಗಳನ್ನು ಸ್ಥಾಪಿಸಿ ಓರ್ವ ಕೇಶವಿನ್ಯಾಸಕರಾಗಿ ಪ್ರಸ್ತುತ ಸರ್ವೋತ್ಕೃಷ್ಟ ಯುವೋದ್ಯಮಿ ಆಗಿ ಆಧುನಿಕ ಯುಗಕ್ಕೆ ಮಾದರಿ ಉದ್ಯಮಿ ಆಗಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
1998ರಲ್ಲಿ ಉಪನಗರ ಥಾಣೆಯಲ್ಲಿ ಕಿರಿದಾದ ಸ್ವಂತ ಅಂಗಡಿ ಆರಂಭಿಸಿದ ಇವರು ಇದೀಗ ನೂರಾರು ಪರಿಣತ (ಪೆÇ್ರಫೆಶನಲ್) ಕೇಶವಿನ್ಯಾಸಕರು ಮತ್ತು ಸೌಂದರ್ಯಕಾರರನ್ನು ಹೊಂದಿದ್ದಾರೆ. ಅಲ್ಲದೆ ಶಿವರಾಮ್ ಭಂಡಾರಿ ಸ್ವಂತಿಕೆಯ ಶಿವಾ'ಸ್ ಟ್ರೆಂಡ್ ಹೆಸರಿನಲ್ಲಿ ಸೌಂದರ್ಯ (ಬ್ಯೂಟಿ) ಸಾಮಾಗ್ರಿಗಳನ್ನು ರಚಿಸಿ ಕೇಶವಿನ್ಯಾಸ ಉದ್ಯಮದಲ್ಲಿ ಇನ್ನಷ್ಟು ಸಾಗುತ್ತಿದ್ದಾರೆ.
ಶಿವರಾಮ್ ಭಂಡಾರಿ ಅವರ ಅನನ್ಯ ಸಾಧನೆಯನ್ನು ಮತ್ತು ಸೌಂದರ್ಯ ಸಾಮಾಗ್ರಿಗಳ ಶೋಧನೆಯನ್ನು ಮನವರಿಸಿ ಏಷಿಯಾ ಚಾಪ್ಟರ್-2015ರ ಜಾಗತಿಕ ಸಾಧಕ ಉದ್ಯಮಶೀಲರ ಘಟಿಕೋತ್ಸವÀದಲ್ಲಿ ಯುರೋಪಿಯ ನ್ ಕಾಂಟಿನೆಂಟಲ್ ಯುನಿವರ್ಸಿಟಿಯ ಕಾರ್ಯನಿರ್ವಹಕಾ ಪ್ರಧಾನ ರಾಜ್ಯಪಾಲ ಪೆÇ್ರ| ಡಾ| ರಾಲ್ಫ್ ಥೋಮಸ್, ಯುಸಿಯು ಬದಲಿ ಉಪಕುಲಪತಿ ಡಾ| ಜೋಪ್ಪ್ರೆಯ್ ಕ್ಲರ್ಕ್ ಮತ್ತು ವಿಶ್ವವಿದ್ಯಾನಿಲಯದ ಪ್ರತಿನಿಧಿ ಕು| ಜುಡಿತ್ ಕೌಲ್‍ಸನ್ ಡಾಕ್ಟಾರೇಟ್ ಗೌರವ ಪ್ರದಾನಿಸಿ ಗೌರವಿಸಿದ್ದರು.
ತೀರಾ ಸರಳ ಸ್ವಭಾವದ ಶಿವ ಬಾಲ್ಯದಲೇ ಮುಂಬಯಿ ಸೇರಿ ಸಲೂನ್‍ನಲ್ಲಿ ಕೆಲಸ ನಿರ್ವಹಿಸುತ್ತಾ ತನ್ನ ಸಾಧನೆಯಿಂದ ಇಂದು ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವರು. 1998ರ ಸಾಲಿನ ಸೆಲೂನ್ ಇಂಟರ್‍ನ್ಯಾಶನಲ್ ಪುರಸ್ಕಾರದಲ್ಲಿ ವಿಶ್ವದ ಖ್ಯಾತ 48 ಪ್ರತಿಷ್ಠಿತ ಕೇಶ ವಿನ್ಯಾಸಗಾರರಲ್ಲಿ ಭಾರತೀಯರಾಗಿ ಶಿವರಾಮ ಭಂಡಾರಿ ಪುರಸ್ಕೃತರಾಗಿದ್ದರು.
ತುಳುನಾಡ ಹಳ್ಳಿ ಹುಡುಗನೋರ್ವ ಭಂಡಾರಿ ಸಮುದಾಯದಲ್ಲಿ ಹುಟ್ಟಿ ಬೆಳೆದು ಅಖಂಡ ಭಂಡಾರಿ ಸಮಾಜಕ್ಕೆ ಕೀರ್ತಿಯನ್ನೊದಗಿಸಿದ ನಾದ ಶಿವರಾಮ ಭಂಡಾರಿ ಅವರ ಸಾಧನೆ ಸರ್ವರಿಗೂ ಮಾದರಿ ಆಗಿದ್ದು, ಹೇರ್ ಕಟ್ಟಿಂಗ್ ಸಲೂನ್‍ಗೆ ಹೊಸ ಆಯಾಮ ನೀಡಿ ತನ್ನ ಕ್ಷೌರಉದ್ಯಮವನ್ನು ಪ್ರೈವೇಟ್ ಲಿಮಿಟೆಡ್ ಮೂಲಕ ಶಿವಾಸ್ ಹೇರ್ ಸ್ಟೈಲೋ ಡಿಸೈನರ್ ಹೆಸರಿನೊಂದಿಗೆ ಥಾಣೆ, ಜುಹೂ, ಮುಲುಂಡ್, ಅಂಧೇರಿ ಲೊಖಂಡ್‍ವಾಲ, ಅಂಧೇರಿ ಪಶ್ಚಿಮ, ಮಲಾಡ್ ಮತ್ತು ಮೂಡಬಿದ್ರೆ ನಗರದಲ್ಲೂ ತೆರೆದಿರುತ್ತಾರೆ.
ಅತ್ಯಾಧುನಿಕ, ಸುಸಜ್ಜಿತ ಮಳಿಗೆಯಾಗಿ ಕಾರ್ಯಚರಿಸುತ್ತಾ ವ್ಯಕ್ತಿತ್ವದಲ್ಲಿ ಬಾಲಿವುಡ್ ವ್ಯಕ್ತಿಯಂತೆಯೇ ಪ್ರಜ್ವಲಿಸುತ್ತಾ ಸದಾ ತೆರೆಯ ಮರೆಯಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಶಿವರಾಮ ಅವರು ತಾಯಿ ಗುಲಾಬಿ ಕೃಷ್ಣ ಭಂಡಾರಿ, ಪತ್ನಿ ಅನುಶ್ರೀ ಭಂಡಾರಿ ಮಕ್ಕಳಾದ ಮಾ| ರೋಹಿಲ್ ಭಂಡಾರಿ ಹಾಗೂ ಕು| ಆರಾಧ್ಯ ಭಂಡಾರಿ ಇವರೊಂದಿಗೆ ಗೋರೆಗಾಂವ್‍ನಲ್ಲಿ ವಾಸವಾಗಿದ್ದಾರೆ.