ಮುಂಬಯಿ, ಡಿ.31: ಹಿರಿಯ ವಿಶ್ರಾಂತ ಪತ್ರಕರ್ತ, ಸಾಹಿತ್ಯ ಕಲೆಗಳ ವಿದ್ವಾಂಸ, ವಿಮರ್ಶಕ, ಪತ್ರಿಕೋದ್ಯಮ ಮತ್ತು ಛಾಯಾಗ್ರಹಣ ಸೇರಿದಂತೆ ಹಲವು ರಂಗಗಳ ದಿಗ್ಗಜರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಸಾಟಿ ಇಲ್ಲದ ಸಾಧಕರಾಗಿದ್ದು ಕಳೆದ ಭಾನುವಾರ (ಡಿ.30) ಸ್ವರ್ಗಸ್ಥರಾದ ಕಾಸರಗೋಡು ಅನಂತಪುರ ಅಲ್ಲಿನ ಎ.ಈಶ್ವರಯ್ಯ ಅವರ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸಂತಾಪ ವ್ಯಕ್ತಪಡಿಸಿದ್ದಾರೆ.