ಓದಿನಿಂದ ಬುದ್ಧಿಜ್ಞಾನ ವೃದ್ಧಿ ಸಾಧ್ಯ ಆಗುವುದು : ರಘುನಂದನ್ ಕಾಮತ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.30: ಊರಿನ ಪುನರ್‍ಪುಲಿ, ಕೋಲ ಮೊದಲಾದವುಗಳನ್ನು ಒಟ್ಟಿಗೆ ಕಟ್ಟಿಕೊಂಡು ಈ ಮುಂಬಯಿಗೆ ಬಂದು ಸೇರಿದ ನಾವಿಬ್ಬರೂ ಇಲ್ಲೂ ಸಹೋದರತ್ವದಿಂದಲೇ ಬಾಳಿದೆವು. ಚಂದ್ರಹಾಸ ಸುವರ್ಣ ಅವರು ಮಣ್ಣ್‍ದ ಮದಿಪು ಕಾದಂಬರಿ ರಚಿಸಿದರೆ ನಾನು ಮಣ್ಣಿನ ಪರಿಮಳ ಪಸರಿಸುವ ಹೊಟೇಲು ಉದ್ಯಮ ನಡೆಸಿದೆ. ಬರವಣಿಗೆ, ಸಾಹಿತ್ಯ ಓದಿನಿಂದ ಮನುಷ್ಯನ ಬುದ್ಧಿಜ್ಞಾನ ವೃದ್ಧಿಯಾಗಿ ಸಮಾಜವು ಸ್ವಸ್ಥವಾಗುವುದು. ಅರಿವು ಮನುಕುಲದ ಬಾಳು ಬೆಳಗಿಸುವುದು ಎಂದು ನ್ಯಾಚುರಲ್ ಐಸ್‍ಕ್ರೀಂ ಸಂಸ್ಥೆಯ ಸಂಸ್ಥಾಪಕ ರಘುನಂದನ್ ಎಸ್. ಕಾಮತ್ ತಿಳಿಸಿದರು.
ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠದ ಸಭಾಗೃಹದಲ್ಲಿ ಅಭಿನಯ ಸಾಮ್ರಾಜ್ಯ ಮುಂಬಯಿ ಮತ್ತು ಪೇಜಾವರ ಮಠ ಮುಂಬಯಿ ಶಾಖೆ ಸಹಯೋಗÀÀದಲ್ಲಿ ಪೂಜಾ ಪ್ರಕಾಶನ ಮುಂಬಯಿ ಪ್ರಕಾಶಿತ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಭಾಧ್ಯಕ್ಷತೆ ವಹಿಸಿ ಕಾಮತ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ ನಾಗೇಶ್ವರ ಸಿನಿ ಕ್ರಿಯೇಷನ್ಸ್‍ನ ಆಡಳಿತ ನಿರ್ದೇಶಕ, ಚಲನಚಿತ್ರ ನಿಮಾಪಕ, ಕರ್ನಾಟಕ ಸಂಘ ಅಸಲ್ಫಾ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರು ಪೂಜಾ ಪ್ರಕಾಶನದ ಪ್ರಕಾಶಕ, ಪ್ರಶಸ್ತಿ ಪುರಸ್ಕೃತ ಕವಿ ಶಿಮಂತೂರು ಚಂದ್ರಹಾಸ ಸುವರ್ಣ ರಚಿತ ಪಣಿಯಾಡಿ ಪ್ರಶಸ್ತಿ ಪುರಸ್ಕೃತ ತುಳು ಕಾದಂಬರಿ `ಮಣ್ಣ್‍ದ ಮದಿಪು' ಹಾಗೂ ಪ್ರಶಸ್ತಿ ವಿಜೇತ ಕವಯತ್ರಿ, ಲೇಖಕಿ ಶಾರದಾ ಆನಂದ್ ಅಂಚನ್ ಅವರ ತುಳು ಅನುವಾದ ಕೃತಿ `ಪಾರ್ದನೊಡು ಮೂಡ್ದ್ ಬೈದಿನ ಬೀರ್ಯದ ಪೆÇಂಜೊವುಲು' ಮತ್ತು ಕನ್ನಡ ಕಥಾಸಂಕಲನ `ರಂಗೋಲಿ' ಕೃತಿಗಳನ್ನು ಏಕಕಾಲಕ್ಕೆ ಬಿಡುಗಡೆ ಗೊಳಿಸಿದರು. ಸಮಾಜ ಸೇವಕ ಮಧುಕರ್ ಪೂಜಾರಿ ಅತಿಥಿüಯಾಗಿ ಉಪಸ್ಥಿತರಿದ್ದರು.
ಹೊಟ್ಟೆಪಾಡಿಗೆ ತಾಯ್ನಾಡನ್ನು ತೊರೆದು ಮಯಾನಗರಿಗೆ ಬಂದರೂ ನಾವು ನಮ್ಮ ಸಂಸ್ಕೃತಿ ಸಾಹಿತ್ಯ ಸೇವೆಯನ್ನು ನಿರಂತರವಾಗಿ ಉಳಿಸುವ ಪ್ರಯತ್ನದಲ್ಲಿ ನಿರತರಾದವರು ಎನ್ನುವುದಕ್ಕೆ ಇಂದಿನ ಈ ಕಾರ್ಯಕ್ರಮ ಸಾಕ್ಷಿ. ಹೆಣ್ಣು ಕೇವಲ ಮನೆಯಲ್ಲಿ ಶೃಂಗರಿಸಿದ ಗೊಂಬೆಯಲ್ಲ ಎನ್ನುವುದಕ್ಕೆ ಶಾರದಾ ಅಂಚನ್ ಉದಾಹರಣೆ. ಅಹಿಂಸೆಯ ರೂಪದಲ್ಲಿರುವ ಪೆನ್ನು ಒಂದು ಉಪಯುಕ್ತ ಅಸ್ತ್ರ. ಅದನ್ನು ಸಶಕ್ತವಾಗಿ ಉಪಯೋಗಿಸ ಬೇಕಾದ ಅಗತ್ಯನಮಗಿದೆ. ವಿಜ್ಞಾನ ಬಾಹ್ಯ ಜಗತ್ತನ್ನು ಗಟ್ಟಿಗೊಳಿಸುತ್ತಿದ್ದರೆ ಓದು ಎಂಬ ಜ್ಞಾನ ನಮ್ಮ ಆತ್ಮವನ್ನು ಗತ್ತಿಗೊಳಿಸುತ್ತದೆ ಎಂದು ಸುರೇಶ್ ಭಂಡಾರಿ ತಿಳಿಸಿದರÀು.
ಮದಿಪು ಕೃತಿಯನ್ನು ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ ಮತ್ತು ಶಾರದಾ ಅಂಚನ್ ಅವರ ಕೃತಿಗಳನ್ನು ಕವಿ, ನಾಟಕಕಾರ ಸಾ.ದಯಾ (ದಯಾನಂದ ಸಾಲ್ಯಾನ್) ಕ್ರಮವಾಗಿ ಪರಿಚಯಿಸಿ ಶುಭಾರೈಸಿದರು. ಕೃತಿಕಾರರಾದ ಚಂದ್ರಹಾಸ ಸುವರ್ಣ ಮತ್ತು ಶಾರದಾ ಅಂಚನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಅಭಿವಂದಿಸಿದರು.
ಭಾರತ್ ಬ್ಯಾಂಕ್ ನಿರ್ದೇಶಕ ದಾಮೋದರ್ ಸಿ.ಕುಂದರ್, ಪೇಜಾವರ ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ರಾಮದಾಸ ಉಪಾಧ್ಯಾಯ ರೆಂಜಾಳ, ನ್ಯಾ| ಆರ್.ಎಂ ಭಂಡಾರಿ, ಅನ್ನಪೂರ್ಣೇಶ್ವರಿ ಕಾಮತ್, ಚಿತ್ರಕಾರ ದೇವದಾಸ ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ, ಜಯ ಎ.ಶೆಟ್ಟಿ, ನಾಗರಾಜ್ ಗುರುಪುರ, ರಮೇಶ್ ಶೆಟ್ಟಿ ಪಯ್ಯರು, ಶೇಖರ್ ಸಸಿಹಿತ್ಲು, ಡಾ| ಕರುಣಾಕರ ಶೆಟ್ಟಿ ಪಣಿಯೂರು, ಲತಾ ಎಸ್.ಶೆಟ್ಟಿ ಮುದ್ದುಮನೆ, ರಜಿತ್ ಎಂ.ಸುವರ್ಣ, ಜಯಕರ ಡಿ.ಪೂಜಾರಿ, ಪ್ರೇಮನಾಥ್ ಪಿ.ಕೋಟ್ಯಾನ್, ಡಾ| ಈಶ್ವರ್ ಅಲೆವೂರು, ಧರ್ಮಪಾಲ್ ಜಿ.ಅಂಚನ್, ಅಶೋಕ್ ವಳವೂರು, ಕು| ಮಾನ್ಸಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದು ಕೃತಿಕಾರರನ್ನು ಅಭಿನಂದಿಸಿದರು.
ಪೂಜಾ ಪ್ರಕಾಶನದ ಸರಸ್ವತಿ ಸಿ.ಸುವರ್ಣ, ಪೂಜಾಶ್ರೀ ಸಿ.ಸುವರ್ಣ, ಆನಂದ್ ವಿ.ಅಂಚನ್, ಪ್ರಭಾಕರ್ ಅವಿೂನ್, ಹೇಮಾ ಹರಿದಾಸ್, ವಿೂಣಾ ಪೂಜಾರಿ ಅತಿಥಿüಗಳಿಗೆ ಪುಷ್ಪಗುಪ್ಛವನ್ನಿತ್ತು ಗೌರವಿಸಿ ದರು. ಶಾರದಾ ಎ.ಅಂಚನ್ ಪ್ರಾರ್ಥನೆಯನ್ನಾಡಿದರು. ನವೀನ್ ಕರ್ಕೇರ ಸ್ವಾಗತಿಸಿ, ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣರಾಜ್ ಸುವರ್ಣ ಕೃತಜ್ಞತೆ ಸಮರ್ಪಿಸಿದರು.