Wednesday 14th, May 2025
canara news

ಮುಂಬಯಿ ಕನ್ನಡ ಸಂಘದಿಂದ ನಡೆಸಲ್ಪಟ್ಟ ಎರಡು ದತ್ತಿ ಉಪನ್ಯಾಸಗಳು

Published On : 03 Jan 2019   |  Reported By : Rons Bantwal


ಪ್ರಜ್ಞಾವಂತ ಜನರು ಮೂಢನಂಬಿಕೆಯನ್ನು ಖಂಡಿಸಬೇಕು
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಡಿ.30: ಮುಂಬಯಿ ಕನ್ನಡ ಸಂಘವು ಎರಡು ದತ್ತಿ ಉಪನ್ಯಾಸಗಳನ್ನು ಕಳೆದ ಮಂಗಳವಾರ ಮಾಟುಂಗದ ಭಾವುದಾಜಿ ರಸ್ತೆಯಲ್ಲಿನ ಸಂಘದ ಕಾರ್ಯಾಲಯದÀಲ್ಲಿ ಆಯೋಜಿಸಿತ್ತು. ಖಾಲ್ಸಾ ಕಾಲೇಜು ಕನ್ನಡ ಪ್ರೇಮಿ ಮಂಡಳಿ ದತ್ತಿ ಉಪನ್ಯಾಸÀವನ್ನು ಕವಿಯಿತ್ರಿ ವಾಣಿ ಶೆಟ್ಟಿ ಹಾಗೂ ಲೇಖಕಿ ಸುಜ್ಞಾನಿ ಬಿರಾದಾರ್ ಅವರು ದಿವಂಗತ ಜಿ.ವಿ ರಂಗಸ್ವಾಮಿ ಸ್ಮಾರಕ ದತ್ತಿ ಉಪನ್ಯಾಸÀವನ್ನು ನೀಡಿದರು.

ಕಾರ್ಯಕ್ರಮದ ಮುಖ್ಯ ಅಥಿüತಿಯಾಗಿ ಸಮಾಜ ಸೇವಕ ಜಿ.ಟಿ.ಆಚಾರ್ಯ ಉಪಸ್ಥಿತರಿದ್ದು ಮುಂಬಯಿಯ ಮಹಿಳೆಯರು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ,ಹಾಗೂ ಸಾಮಾಜಿಕವಾಗಿ ದೊಡ್ಡ ಕೊಡುಗೆ ಇತ್ತಿದ್ದಾರೆ. ಮುಂಬಯಿ ಕನ್ನಡ ಭಾಷೆ, ಸಾಹಿತ್ಯಕ್ಕೆ ಹಾಗೂ ಸಂಸ್ಕೃತಿಗೆ ಪೂರಕವಾದ ಕೆಲಸವನ್ನು ಮುಂಬಯಿ ಮಹಿಳೆಯರು ಮಾಡುತ್ತಿರುವುದು ಸ್ತುರ್ಹ್ಯವಾಗಿದೆ. ದೈವಾರಾಧನೆ, ಭೂತಾರಧನೆ, ನಾಗಾರಾಧನೆ ಇವು ತುಳು ನಾಡಿನಲ್ಲಿ ಬಹು ಹಿಂದಿನಿಂದ ನಂಬಿಕೊಂಡು ಬಂದಂತಹ ನಂಬಿಕೆಗಳಾಗಿವೆ. ನಂಬಿಕೆ ಬೇರೆ, ಮೂಢನಂಬಿಕೆ ಬೇರೆಯಾಗಿದೆ. ನಂಬಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ದಾರಿಯಲ್ಲಿ ಬೆಕ್ಕು ಅಡ್ಡಬರುವುದು, ವಿಧವೆಯರಿಗೆ ಅಮಾನುಷ ರೀತಿಯಿಂದ ವರ್ತಿಸುವುದು, ರಾಶಿ ಭವಿಷ್ಯ ನೋಡುವುದು ಇವೆಲ್ಲ ಮೂಢನಂಬಿಕೆಗಳಾಗಿವೆ. ಪ್ರಜ್ಞಾವಂತರಾದ ನಾವುಗಳು ಮೂಢನಂಬಿಕೆಯನ್ನು ಖಂಡಿಸಬೇಕು ಎಂದರು.


`ಮುಂಬಯಿ ಕನ್ನಡಿಗರ ಮಹಿಳಾ ಸಂಘಟನೆಗಳು' ವಿಷಯವಾಗಿಸಿ ವಾಣಿ ಶೆಟ್ಟಿ ಉಪನ್ಯಾಸ ನೀಡಿ ಮುಂಬಯಿಯಲ್ಲಿ ಮಹಿಳೆಯರು ತಮ್ಮ ಮಹಿಳಾ ಸಂಘಟನೆಗಳಿಂದ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಉಲ್ಲೇಖನೀಯವಾದ ಕಾರ್ಯ ಮಾಡುತ್ತಿದ್ದಾರೆ. ಮುಂಬಯಿಯ ಎಲ್ಲ ಸಂಘ-ಸಂಸ್ಥೆಗಳಲ್ಲಿ ಪ್ರತೇಕವಾದ ಮಹಿಳಾ ವಿಭಾಗಗಳು ಸ್ಥಾಪನೆಗೊಂಡಿವೆ. ಹಳದಿ ಕುಂಕುಮ, ವರಲಕ್ಷಿ ್ಮ ಪೂಜೆ, ಸತ್ಯ ನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಳುವುದರ ಜತೆಗೆ ಪುರುಷರ ಸಾಂಘಿಕ ಕೆಲಸಗಳಿಗೆ ಬೆನ್ನಲುವಾಗಿ ನಿಲ್ಲುವುದರಲ್ಲಿ ಮುಂ¨ಯಿ ಮಹಿಳೆಯರ ಪಾಲು ಹಿರಿದಾದುದು. ಮುಂಬಯಿ ಮಹಿಳಾ ಸಂಘಟನೆಗಳಿಂದ ಮಹಿಳೆಯರು ನೃತ್ಯ, ಸಂಗೀತ, ನಾಟಕ, ಯಕ್ಷಗಾನ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸುತ್ತಿದ್ದಾರೆ ಎಂದರು.

`ನಮ್ಮ ಮೂಡನಂಬಿಕೆಗಳು' ಕುರಿತು ಸುಜ್ಞಾನಿ ಬಿರಾದಾರ್ ಉಪನ್ಯಾಸ ನೀಡಿ ಇಂದಿನ ಆಧುನಿಕ ಯುಗದಲ್ಲಿ ಕೂಡ ಸುಶಿಕ್ಷಿತರು ಮೂಡನಂಬಿಕೆಯ ಬಲೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವುದು ಶೋಚನಿವಾದ ಸಂಗತಿ. ಮನುಷ್ಯನು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕಾದರೆ ಶಿಕ್ಷಣದಲ್ಲಿ ವೈಜ್ಞಾನಿಕ ದೃಷ್ಟಿಕೋನದ ವಿಚಾರಗಳನ್ನು ಬಿಂಬಿಸಬೇಕು. ಶಿಕ್ಷಣವು ಮನುಷ್ಯನ್ನು ಮನುಷ್ಯನಾಗಿ ನೋಡುವಂತೆ ಮಾಡುತ್ತದೆ ಎಂದರು.
ಸಂಘದ ಅಧ್ಯಕ್ಷ ಜಿ.ಎಸ್ ನಾಯಕ ಪ್ರಸ್ತಾವಿಕ ನುಡಿಗಳನ್ನಾಡಿ ಮುಂಬಯಿ ಕನ್ನಡ ಸಂಘವು 82 ದಶಕಗಳಿಂದ ಕನ್ನಡದ ಕೈಂಕರ್ಯವನ್ನು ಮಾಡುತ್ತಾ ಬಂದಿದೆ ಎಂದರು.

ಹಿರಿಯ ಸಾಹಿತಿ, ಕವಯತ್ರಿ ಸುನೀತಾ ಎಂ.ಶೆಟ್ಟಿ, ಸಂಘದ ಉಪಾಧ್ಯಕ್ಷರಾದ ಎಸ್.ಕೆ.ಭವಾನಿ ಮತ್ತಿತರÀ ಸಾಹಿತ್ಯಾಸಕ್ತರು ಉಪಸ್ಥಿರಿದ್ದು, ಸಂಘದ ವಾಚನಾಲಯ ಮುಖ್ಯಸ್ಥ ಎಸ್.ಕೆ ಪದ್ಮನಾಭ ಪ್ರಾರ್ಥನಾಗೀತೆ ಹಾಡಿದರು. ಜೊತೆ ಕಾರ್ಯದರ್ಶಿ ಸೋಮನಾಥ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದ್ದು, ಗೌರವ ಕೋಶಾಧಿಕಾರಿ ಸುಧಾಕರ್ ಸಿ.ಪೂಜಾರಿ ವಂದನಾರ್ಪಣೆಗೈದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here