ಮುಂಬಯಿ, ಜ.06: ಶ್ರೀ ತಿರುಮಲ ವೆಂಕಟ್ರಮಣ ಸ್ವಾಮಿ ಮಂದಿರ ಬಂಟ್ವಾಳ ಇದರ ಪ್ರಧಾನ ಅರ್ಚಕ ಮತ್ತು ಜಿಎಸ್‍ಬಿ ಸೇವಾ ಮಂಡಲ ಕಿಂಗ್ ಸರ್ಕಲ್ ಮುಂಬಯಿ ವಿಶೇಷ ಆಮಂತ್ರಿತರೂ ಪ್ರಧಾನ ಗುರುಗಳು ಆಗಿದ್ದ ಬಂಟ್ವಾಳ ಕೃಷ್ಣ ಸೀತಾರಾಮ ಭಟ್ (83.) ಇಂದಿಲ್ಲಿ ರವಿವಾರ ಅಲ್ಪಕಾಲದ ಅನಾರೋಗ್ಯದಿಂದ ಮುಂಬಯಿಯಲ್ಲಿ ನಿಧನ ಹೊಂದಿದರು.
ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಇದರ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಮತ್ತು ಶ್ರೀ ಸಂಸ್ಥಾನದ ಕಿರಿಯ ಯತಿಗಳಾದ ಶ್ರೀ ಸಮ್ಯಮೀಂದ್ರ ಶ್ರೀಪಾದರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿರುವ ಕೃಷ್ಣ ಭಟ್ ಪರಂಪರಿಕ ವೈಧಿಕ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದರು.
ಮೃತರು ಪತ್ನಿ, ಓರ್ವ ಹೆಣ್ಣು, ಎರಡು ಗಂಡು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದಿಲ್ಲಿ ರವಿವಾರ ಮಧ್ಯಾಹ್ನ ದಾದರ್‍ನ ಶಿವಾಜಿ ಪಾರ್ಕ್‍ನಲ್ಲಿ ನೇರವೇರಿತು.