Wednesday 14th, May 2025
canara news

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಸೋಮಯಾಗಕ್ಕೆ

Published On : 07 Jan 2019   |  Reported By : Rons Bantwal


ಕುಲಾಲ ಸಮುದಾಯದಿಂದ ಮಣ್ಣಿನ ಕುಂಭ ತಯಾರಿ ಮುಹೂರ್ತ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜ.01: ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019ರ ಫೆ.18ರಿಂದ 24ರ ತನಕ ಆಯೋಜಿಸಲಾಗಿರುವ `ವಿಶ್ವಜಿತ್ ಅತಿರಾತ್ರ ಸೋಮಯಾಗ'ದಲ್ಲಿ ಉಪಯೋಗಿಸಲಿರುವ ವಿವಿಧ ವಸ್ತುಗಳನ್ನು ಹಿಂದೂ ಸಮಾಜದ ವಿವಿಧ ಸಮುದಾಯಗಳವರು ತಮ್ಮ ಕುಲವೃತ್ತಿಯಂತೆ ತಯಾರಿ ಮಾಡುವ ಮುಹೂರ್ತ ನಡೆಯುತ್ತಿದ್ದು ಅದರಂತೆ ಕುಲಾಲ ಸಮುದಾಯವು ಯಾಗಕ್ಕೆ ಬೇಕಾದ ಮಣ್ಣಿನ ವಿವಿಧ ರೀತಿಯ ಪಾತ್ರೆಗಳು ಮತ್ತು ಅರುಣ ಕೇತುಕ ಚಯನಕ್ಕೆ ಬೇಕಾದ 1200 ಸಣ್ಣಗಾತ್ರದ ಮಣ್ಣಿನ ಪಾತ್ರೆಗಳನ್ನು ತಯಾರಿಸುವ ಮುಹೂರ್ತವನ್ನು ತಾ. 30-12-2018 ರಂದು ಬಂಟ್ವಾಳ ಮುರುವ ಅಲ್ಲಿನ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷಿ ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ಪೈವಳಿಕೆಯ ಕಾಯರಕಟ್ಟೆ ಲಾಲ್‍ಭಾಗ್‍ನ ಕುಲಾಲ ಸಮಾಜ ಮಂದಿರದಲ್ಲಿ ನಡೆಸಿದರು.

ಉಪಸ್ಥಿತರಿದ್ದ ಕುಲಾಲ ಸಮಾಜ ಬಾಂಧವರು ಜೊತೆಗೇ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಾರಾಯಣ ನಡೆಸಿದರು. ನಂತರ ಪೂಜೆ, ಮತ್ತು ಯತಿದ್ವಯರು ಸತ್ಸಂಗಗಳನ್ನು ನೆರವೇರಿಸಿದರು.

ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ರವೀಂದ್ರ ಮುನ್ನಿಪ್ಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆಯ ವೇದಮೂರ್ತಿ ಹರಿನಾರಾಯಣ ಮಯ್ಯ, ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಬೊಟ್ಟಾರಿ, ಹರಿಶ್ಚಂದ್ರ ಮಂಜೇಶ್ವರ, ಬಾಲಕೃಷ್ಣ ದೀಕ್ಷಾ ಕುಂಜತ್ತೂರುಪದವು, ಕಾಸರಗೋಡು ಜಿಲ್ಲಾ ಕುಲಾಲ ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ ಎಸ್.ಬಂಗೇರ, ಕುಲಾಲ ಸಂಘ ಕಾಸರಗೋಡು ಜಿಲ್ಲೆ, ಪೈವಳಿಕೆ ಶಾಖೆ ಅಧ್ಯಕ್ಷ ಪೂವಪ್ಪ ಮುನ್ನಿಪ್ಪಾಡಿ, ಕುಲಾಲ ಸಮುದಾಯದ ಪ್ರಮುಖರಾದ ಶ್ರೀನಿವಾಸ್ ಕೋರಿಕ್ಕಾರ್, ಪಾಣಾಜೆ ಬಾಬು ಮತ್ತು ಪ್ರಮೀಳಾ ಮಾಧವ ಮತ್ತಿತರರು ಉಪಸ್ಥಿತರಿದ್ದರು. ಕು| ಎಸ್.ದೀಪ್ತಿ ಮತ್ತು ಬಳಗದವರ ಪ್ರಾರ್ಥನೆಯಿಂದ ಆರಂಭಗೊಂಡ ಕಾರ್ಯಕ್ರಮಕ್ಕೆ ದಾಮೋದರ ಮಾಸ್ತರ್ ಮೀಯಪದವು ಸ್ವಾಗತಿಸಿದರು. ಸದಾನಂದ ಅಮ್ಮೇರಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವನಾಥ ಮಾಣಿಪ್ಪಾಡಿ ವಂದಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here