ಮುಂಬಯಿ ( ಗುರುಪುರ ),ಜ .09: ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಳಿಪಾಡಿ ಗ್ರಾಮದ ಅಳಿಕೆ ರಸ್ತೆ ನಿವಾಸಿ ಅನಿತಾ ಎಂಬವರ ವೈದ್ಯಕೀಯ ಚಿಕಿತ್ಸೆಗಾಗಿ ವಿಧಾನ ಪರಿಷತ್ ಸದಸ್ಯ (ಎಂಎಲ್‍ಸಿ) ಐವನ್ ಡಿ'ಸೋಜರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1.38 ಲಕ್ಷ ರೂ ಆರ್ಥಿಕ ನೆರವಿನ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಜಿ. ಸುನಿಲ್, ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಪಂಚಾಯತ್ ಸದಸ್ಯರಾದ ಬೂಬ ಪೂಜಾರಿ, ಹಮೀದ್ ಮೊದಲಾದವರಿದ್ದರು.