Wednesday 14th, May 2025
canara news

ಜ.20: ಸಾಂತಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ

Published On : 19 Jan 2019   |  Reported By : Rons Bantwal


ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಸಭೆ

ಮುಂಬಯಿ, ಜ.19: ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಳೆಯಂಗಡಿ ಇದರ ಕಟ್ಟೋಣ ಸಮಿತಿ ಮುಂಬಯಿ ವಿಶೇಷ ಸಭೆಯನ್ನು ಇದೇ ಆದಿತ್ಯವಾರ (ಜ.20) ಸಂಜೆ 4.30 ಗಂಟೆಗೆ ಸಾಂತಾಕ್ರೂಜ್ ಪೂರ್ವದ ಗುರು ನಾರಾಯಣ ಮಾರ್ಗದಲ್ಲಿನ ಬಿಲ್ಲವ ಭವನದ ಸಮಾಲೋಚನಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

1963ರಲ್ಲಿ ಅಂದಿನ ಹಿರಿಯ ಮುತ್ಸದ್ಧಿಗಳ ನೇತೃತ್ವದಲ್ಲಿ ಸ್ಥಾಪನೆಯಾದ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘವು ಸಮಾಜಮುಖಿ ಚಿಂತನೆಯೊಂದಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ನೀಡಿ ಜನಮಾನಸದಿಂದ ಮೆಚ್ಚುಗೆಯನ್ನು ಪಡೆದು, 2013ರಲ್ಲಿ ಭವ್ಯವಾದ ಗುರುಮಂದಿರ ಲೋಕಾರ್ಪಣೆ ಮಾಡಿ ಸದ್ಯ ಹಳೆಯಂಗಡಿಯ ಈ ಪುಣ್ಯಭೂಮಿ ಭಕ್ತಾಭಿಮಾನಿಗಳಿಂದ ಪವಿತ್ರ ಗುರುಕ್ಷೇತ್ರವಾಗಿ ಬೆಳೆಯುತ್ತಿದೆ ಎಂದು ಬಿಲ್ಲವ ಸಮಾಜ ಸೇವಾ ಸಂಘ (ರಿ) ಹಳೆಯಂಗಡಿ ಇದರ ಅಧ್ಯಕ್ಷ ಚಂದ್ರಶೇಖರ್ ನಾನಿಲ್ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ ಹಿಮಕರ್ ಟಿ.ಸುವರ್ಣ ಮತ್ತು ಕೋಶಾಧಿಕಾರಿ ಯಶೋಧರ್ ಎಸ್.ಸಾಲ್ಯಾನ್ ತಿಳಿಸಿದ್ದಾರೆ.

1974ರಲ್ಲಿ ಮುಂಬಯಿಯ ಹಿರಿಯ ಸಮಾಜ ಬಾಂಧವರ ಸಹಕಾರದಿಂದ ಹಳೆಯಂಗಡಿಯಲ್ಲಿ ನಿರ್ಮಾಣವಾದ ಬ್ರಹ್ಮಶ್ರೀ ನಾರಾಯಣ ಗುರು ಸಭಾಗೃಹವು ಸುಮಾರು ನಾಲ್ಕುವರೆ ದಶಕಗಳಿಂದ ಸಮಾಜ ಬಾಂಧವರ ಆಶೋತ್ತರಗಳನ್ನು ಪೂರೈಸಿದೆ. ಪ್ರಸ್ತುತ ಈ ಸಭಾಗೃಹದಿಂದ ಈಗಿನ ಕಾಲಸ್ಥಿತಿಯ ಅಗತ್ಯತೆ ಪೂರೈಸಲು ಅಸಾಧ್ಯ ಆಗಿರುವುದರಿಂದ ಮತ್ತು ಸಭಾಗೃಹವು ಸಂಪೂರ್ಣ ಶಿಥಿüಲ ಆಗಿರುವುದರಿಂದ ನೂತನ ಭವ್ಯ ಸುಸಜ್ಜಿತ ಸಭಾಗೃಹದ ನಿರ್ಮಾಣಕ್ಕೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಭೂಮಿಪೂಜೆ ಮತ್ತು ಶಿಲಾನ್ಯಾಸ ಸಮಾರಂಭ ನೆರೆವೇರಿಸಿದ್ದು, ಪ್ರಸ್ತುತ ನೂತನ ಸಭಾಗೃಹದ ಕಾಮಗಾರಿಯು ಬರದಿಂದ ಸಾಗುತ್ತಿದೆ ಎಂದು ಬಿಲ್ಲವ ಸಮಾಜ ಸೇವಾ ಸಂಘ ಹಳೆಯಂಗಡಿ ಇದರ ಕಟ್ಟೋಣ ಸಮಿತಿ ಅಧ್ಯಕ್ಷ ಮೋಹನ್ ಎಸ್.ಸುವರ್ಣ, ಕಾರ್ಯದÀರ್ಶಿ ಭಾಸ್ಕರ್ ಸಾಲ್ಯಾನ್, ಕೋಶಾಧಿಕಾರಿ ರಮೇಶ್ ಬಂಗೇರ ತಿಳಿಸಿದ್ದಾರೆ.

ಸಭೆಯಲ್ಲಿ ಸಂಘದ ಕಟ್ಟೋಣ ಪ್ರಗತಿ ಪರಿಶೀಲನೆ ವಿಚಾರವಾಗಿ ಚರ್ಚಿಸಲಾಗುವುದು. ಭವ್ಯ ಯೋಜನೆ ಕಾರ್ಯಗತಗೊಳಿಸಲು ಸಹೃದಯಿ ಬಂಧುಗಳ ತ್ರಿಕರಣ ರೂಪದ ಸಹಕಾರದ ನಿರೀಕ್ಷೆಯಲ್ಲಿದ್ದೇವೆ. ಆದ್ದರಿಂದ ಮಣಭಾರದ ಈ ಯೋಜನೆಯನ್ನು ಕಾರ್ಯಗತ ಗೊಳಿಸುವುದು ನÀಮ್ಮೆಲ್ಲರ ಆದ್ಯ ಕತ್ರ್ಯವ ಮತ್ತು ಜವಾಬ್ದಾರಿ ಎಂದು ತಿಳಿದು ಎಲ್ಲಾ ಸಮಾಜ ಬಾಂಧವರು ಮಾತ್ರವಲ್ಲದೆ ವಿಶೇಷವಾಗಿ ಹಳೆಯಂಗಡಿ, ಪಡುಪಣಂಬೂರು, ಬೆಳ್ಳಾಯರು, ಕೊಲ್ನಾಡು, ಕದಿಕೆ-ಕೊಳುವೈಲು, ಪಾವಂಜೆ, ಚೇಳಾೈರು, ತೋಕೂರು, ಬೊಳ್ಳೂರು, ಪಂಜ-ಕೊೈಕುಡೆ ವ್ಯಾಪ್ತಿಯ ಎಲ್ಲಾ ಮುಂಬಯಿಯ ಸಮಾಜ ಬಾಂಧವರು ಈ ಸಭೆಯಲ್ಲಿ ಕ್ಲಪ್ತ ಸಮಯಕ್ಕೆ ಆಗಮಿಸಿ ತಮ್ಮ ಅತ್ಯಮೂಲ್ಯ ಸಲಹೆ, ಸಹಕಾರವನ್ನಿತ್ತು ಸಭೆಯನ್ನು ಯಶಸ್ವಿ ಗೊಳಿಸುವಂತೆ ಕಟ್ಟೋಣ ಸಮಿತಿ ಮುಂಬಯಿ ಗೌರವಾಧ್ಯಕ್ಷ ಎಸ್.ಚಂದ್ರಶೇಖರ್, ಅಧ್ಯಕ್ಷ ಸುರೇಂದ್ರ ಎ.ಪೂಜಾರಿ (ಸಾಯಿಕೇರ್), ಕಾರ್ಯದರ್ಶಿ ವಿಶ್ವನಾಥ್ ಎಂ.ಪೂಜಾರಿ ಈ ಮುಖೇನ ವಿನಂತಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here