Wednesday 24th, April 2024
canara news

ಆಲ್ ಇಂಡಿಯಾ ಕೋ.ಅಪರೇಟಿವ್ ಬ್ಯಾಂಕಿಂಗ್ ಕಾನ್ಫರೆನ್ಸ್

Published On : 21 Jan 2019   |  Reported By : Rons Bantwal


ಬ್ಯಾಂಕೊ ಪುರಸ್ಕಾರ 2018ಕ್ಕೆ ಪಾತ್ರವಾದ ಭಾರತ್ ಬ್ಯಾಂಕ್

ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.18: ಬ್ಯಾಂಕೊ ಗ್ಯಾಲಕ್ಸಿ ಇನ್ಮ ಸಂಸ್ಥೆಯು ಮುಂಬಯಿ ಹೊರ ವಲಯದ ಕರ್ಜತ್ ಇಲ್ಲಿನ ರಾಡಿಸನ್ ಬ್ಲು ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಮೂರು ದಿನಗಳ ಆಲ್ ಇಂಡಿಯಾ ಕೋ.ಅಪರೇಟಿವ್ ಬ್ಯಾಂಕಿಂಗ್ ಕಾನ್ಫರೆನ್ಸ್ ಮತ್ತು ಬ್ಯಾಂಕೊ ಬ್ಲೂ ರಿಬನ್ ಆಥಿರ್üಕ ಸಮಾವೇಶ-2019 ನಡೆದಿದ್ದು, ಭವ್ಯ ಸಮಾರಂಭದಲ್ಲಿ ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಗತ ಸಾಲಿನ ರೂಪಾಯಿ 5,000ಕ್ಕಿಂತ ಅಧಿಕ ಗ್ರಾಹಕ ಸ್ನೇಹಿ ವ್ಯವಹಾರಕ್ಕಾಗಿ `ಬ್ಯಾಂಕೊ ಪುರಸ್ಕಾರ 2018'ಕ್ಕೆ ಪ್ರದಾನಿಸಿ ಗೌರವಿಸಿ ಅಭಿನಂದಿಸಿತು.

ರಾಡಿಸನ್ ಬ್ಲು ಲಾವ್ನ್‍ನಲ್ಲಿ ನಡೆಸಲ್ಪಟ್ಟ ಅಖಿಲ ಭಾರತ ಸಹಕಾರಿ ಪಥಸಂಸ್ಥೆಗಳ ವಾರ್ಷಿಕ ಲಾಭ ಪ್ರಯೋಜನಾ ಶೃಂಗಸಭೆಯ (ಎಡ್‍ವಾಂಟೇಜ್ ಆ್ಯನ್ಯುಅಲ್ ಸಮಿಟ್ ಎಂಡ್ ಬ್ಯಾಂಕೊ ಬ್ಲೂ ರಿಬನ್ ಸೆರೆಮನಿ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿದ್ದ ಉಪಸ್ಥಿತ ಕೊಟಾಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್‍ನ ಅನುಸರಣಾ ವಿಭಾಗದ ಮುಖ್ಯಸ್ಥ ಟಿ.ವಿ ಸುಧಕರ ಅವರು ಗ್ಯಾಲಕ್ಸಿ ಇನ್ಮಸಂಸ್ಥೆಯ ನಿರ್ದೇಶಕ ಅಶೋಕ್ ನಾಯ್ಕ್ ಮತ್ತು ಬ್ಯಾಂಕೊ ಸಂಪಾದಕ ಅವಿನಾಶ್ ಶಿಂತ್ರೆ ಉಪಸ್ಥಿತಿಯಲ್ಲಿ ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಪ್ರಧಾನ ಪ್ರಬಂಧಕÀ ದಿನೇಶ್ ಬಿ. ಸಾಲ್ಯಾನ್ (ಅಭಿವೃದ್ಧಿ ವಿಭಾಗದ ಮುಖ್ಯಸ್ಥ-ಹೆಚ್‍ಆರ್‍ಎಂ) ಅವರಿಗೆ ಪುರಸ್ಕಾರ ಫಲಕ, ಗೌರವಪತ್ರ ಪ್ರದಾನಿಸಿ ಶುಭಾರೈಸಿದರು.

ಪುರಸ್ಕಾರ ತೀರ್ಪುಗಾರರಾದ ಅತುಲ್ ಖೇದಡ್ಕರ್, ಅವಿನಾಶ್ ಜೋಶಿ, ವಿವೇಕ್ ಮಹರ್ಶಿ, ಉದ್ಯಮಿ ಪ್ರದೀಪ್ ದೇಸಾಯಿ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು. ಕರ್ನಾಟಕ, ಮಹಾರಾಷ್ಟ್ರ ಹಾಗೂ ದೇಶದ ನಾನಾ ರಾಜ್ಯ, ಜಿಲ್ಲೆಗಳ ಆಯ್ದ ವಿವಿಧ ಬ್ಯಾಂಕ್‍ಗಳು ಪುರಸ್ಕಾರಕ್ಕೆ ಪಾತ್ರವಾಗಿದ್ದು, ಆಯಾ ಬ್ಯಾಂಕ್‍ನ ಮುಖ್ಯಸ್ಥರು ಪ್ರಶಸ್ತಿಗಳನ್ನು ಸ್ವೀಕರಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here