Saturday 20th, April 2024
canara news

ಮಾಹಿಮ್‍ನಲ್ಲಿ ಮೊಡೇಲ್ ಬ್ಯಾಂಕ್‍ನಿಂದ 2018ನೇ ಸಾಲಿನ ವಿದ್ಯಾಥಿ೯ ವೇತನ ವಿತರಣೆ

Published On : 22 Jan 2019   |  Reported By : Rons Bantwal


ಬಾಲ್ಯದ ಚಿಂತನೆಗಳೇ ಬದುಕನ್ನು ರೂಪಿಸ ಬಲ್ಲವು  : ಜೆಸ್ಸಿ ವಾಜ್

ಮುಂಬಯಿ, ಜ.18: ವ್ಯಕ್ತಿಯ ಬಾಲ್ಯಾವಸ್ಥೆಯ ಚಿಂತನೆಗಳು ಬಲಾಢ್ಯಗೊಂಡು ಭವ್ಯ ಬದುಕು ರೂಪಿಸಲು ಭದ್ರ ಬುನಾದಿ ಆಗಬಲ್ಲದು. ಆದುದರಿಂದ ಮಕ್ಕಳು ಎಳೆವಯಸ್ಸಿನಲ್ಲೇ ಧನಾತ್ಮಕ ಚಿಂತನೆಗಳನ್ನೇ ರೂಢಿಸಿ ಕೊಳ್ಳಬೇಕು. ಅದೇ ಭಾವೀ ಪ್ರಜೆಗಳಾದ ವಿದ್ಯಾಥಿರ್üಗಳ ಭವ್ಯ ಬದುಕಿಗೆ ಮೌಲ್ಯವಾಗುವುದು. ವಿದ್ಯಾಥಿರ್ಗಳ ಜೀವನ ನಿರ್ವಹಣಾ ನಿರ್ಧಾರಗಳನ್ನು ಪ್ರೌಢವಸ್ಥೆಯಲ್ಲೇ ತೆಗೆದು ಕೊಳ್ಳಲು ಕಾರಣವಾಗಿದ್ದು, ಈ ನಿಟ್ಟಿನಲ್ಲಿ ನಿಖರವಾದ ಮತ್ತು ಬಹಳ ಪ್ರಭಾವಶಾಲಿಯಾದ ಹೆಜ್ಜೆಗಳನ್ನಿತ್ತು ಭದ್ರವಾದ ಮತ್ತು ಬಲಿಷ್ಠವಾದ ಬದುಕು ರೂಪಿಸಿಕೊಳ್ಳಿರಿ ಎಂದು ಜಮ್ನಾಬಾೈ ನರ್ಸಿ ಇಂಟರ್‍ನೇಶನಲ್ ಸ್ಕೂಲ್ (ಜೆಎನ್‍ಐಎಸ್) ಶಿಕ್ಷಣ ಸಂಸ್ಥೆ ಮತ್ತು ಮುಂಬಯಿ ಧರ್ಮ ಪ್ರಾಂತ್ಯದ ಶಿಕ್ಷಣ ಮಂಡಳಿಯ ಹಿರಿಯ ಸಲಹೆಗಾರ್ತಿ, ಜೋಸ್ಫಿನ್ (ಜೆಸ್ಸಿ) ವಾಜ್ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಮಾಹಿಮ್ ಪಶ್ಚಿಮದಲ್ಲಿನ ಕ್ಸೇವಿಯರ್ ಇನ್‍ಸ್ಟಿಟ್ಯೂಟ್ ಆಫ್ ಇಂಜಿನೀಯರಿಂಗ್ ಕಾಲೇಜ್ ಸಭಾಗೃಹದಲ್ಲಿ ಮೊಡೇಲ್ ಕೋ.ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ ಸದಸ್ಯರ ಮಕ್ಕಳಿಗೆ ವಾರ್ಷಿಕವಾಗಿ ವಿತರಿಸಿದ 2018ನೇ ಸಾಲಿನ ವಿದ್ಯಾಥಿರ್üವೇತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಸ್ಮರಣಿಕೆ, ಪ್ರಮಾಣಪತ್ರಳೊಂದಿಗೆ ವಾರ್ಷಿಕ ವೇತನ ವಿತರಿಸಿದರು.

ಮಕ್ಕಳು ಅಸಾಧ್ಯವನ್ನು ಸಾಧ್ಯವಾಗಿಸುವ ಪ್ರಯತ್ನ ಮಾಡಬೇಕು. ತಮಗೆ ಸಿಕ್ಕ ಅವಕಾಶಗಳ ಲಾಭವನ್ನು ಪಡೆದು ತಮ್ಮಲ್ಲಿನ ಆಶಯಗಳನ್ನು ಸ್ವತಃ ಈಡೇರಿಸಿ ಕೊಳ್ಳÀಬೇಕು. ಜೊತೆಗೆ ಆಶಾಭಾವದ ಧ್ಯೇಯಗಳನ್ನು ಕಾರ್ಯರೂಪದದಲ್ಲಿ ತರುವಂತೆ ಪ್ರಯತ್ನಿಸಬೇಕು. ಪ್ರಯತ್ನ ಮತ್ತು ಕಠಿಣ ಶ್ರಮದಿಂದ ಸ್ವಇಚ್ಛೆಯ ಆಯ್ಕೆಗೆ ಮಹತ್ವ ನೀಡುತ್ತಾ ಬದುಕು ರೂಪಿಸಿ ಕೊಳ್ಳಬೇಕು ಎಂದೂ ವಿದ್ಯಾಥಿರ್üಗಳ ಶೈಕ್ಷಣಿಕ ಬೆಳವಣಿಗೆ ಉದ್ದೇಶಿಸಿ ಮಾತನಾಡಿ ಮಕ್ಕÀಳಿಗೆ ಭವ್ಯ ಭವಿಷ್ಯ ಹಾರೈಸಿದರು.

ಮುಂಬಯಿ ಮಹಾನಗರದಲ್ಲಿ ಸುಮಾರು 102 ವರ್ಷಗಳ ಹಿಂದೆ ಮೆಂಗ್ಳೂರಿಯನ್ ಕಥೋಲಿಕ್ ಕೊ.ಆಪರೇಟಿವ್ ಕ್ರೆಡೀಟ್ ಸೊಸೈಟಿ ಲಿಮಿಟೆಡ್ ಹೆಸರಿನಲ್ಲಿ ಸ್ಥಾಪಿಸಿ ಸದ್ಯ ಮೊಡೇಲ್ ಬ್ಯಾಂಕ್ ನಾಮಕರಣದೊದಿಗೆ ಸೇವಾ ಪ್ರವೃತ್ತ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಈ ಬಾರಿ ವಿವಿಧ ವಿಭಾಗೀಯ ನೂರಾರು ವಿದ್ಯಾಥಿರ್üಗಳಿಗೆ ವಾರ್ಷಿಕ ವೇತನ ವಿತರಿಸಿತು.

ನಿಮ್ಮ ಶ್ರಮದ ಫಲವೇ ಈ ಗೌರವವಾಗಿದೆ. ಉನ್ನತ ಶಿಕ್ಷಣಕ್ಕೆ ಇದು ಉಪಯುಕ್ತವೂ ಹೌದು. ಮಕ್ಕಳು ಬರೀ ಜೀವನೋಪಾಯಕ್ಕೆ ವಿದ್ಯಾವಂತರಾಗದೆ ರಾಷ್ಟ್ರ ನಿರ್ಮಾಣಕ್ಕೂ ಕಾರಣಕರ್ತರಾಗಬೇಕು ಎಂದು ವಿದ್ಯಾಥಿರ್üಗಳನ್ನು ಉದ್ದೇಶಿಸಿ ವಿಲಿಯಂ ಸಿಕ್ವೇರಾ ನುಡಿದರು.

ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿ'ಸಿಲ್ವಾ, ಮಾಜಿ ಉಪ ಕಾರ್ಯಾಧ್ಯಕ್ಷ ವಿನ್ಸೆಟ್ ಮಥಾಯಸ್, ನಿರ್ದೇಶಕರುಗಳಾದ ಪೌಲ್ ನಝರೆತ್, ತೋಮಸ್ ಡಿ.ಲೋಬೊ, ಲಾರೇನ್ಸ್ ಡಿ'ಸೋಜಾ, ಸಂಜಯ್ ಶಿಂಧೆ, ಬೆನೆಡಿಕ್ಟಾ ರೆಬೆಲ್ಲೋ, ಮರಿಟಾ ಡಿ'ಮೆಲ್ಲೋ, ಜೆರಾಲ್ಡ್ ಕರ್ಡೋಜಾ ಮತ್ತು ಬ್ಯಾಂಕ್‍ನ ಸಿಇಒ ಮತ್ತು ಮಹಾ ಪ್ರಬಂಧಕ ವಿಲಿಯಂ ಎಲ್.ಡಿ'ಸೋಜಾ ವೇದಿಕೆಯಲ್ಲಿ ಆಸೀನರಾಗಿದ್ದರು.

ಜೋನ್ ಡಿಸಿಲ್ವಾ ಮಾತನಾಡಿ ಮೊಡೇಲ್ ಬ್ಯಾಂಕ್ ನಿಮ್ಮ ಬ್ಯಾಂಕ್ ಆಗಿದ್ದು, ಸಮುದಾಯದ ಉನ್ನತಿ, ಉದ್ಯಮಶೀಲತೆಗೆ ಪೆÇ್ರೀತ್ಸಹಿಸುತ್ತಿದೆ. ವಿದ್ಯಾಥಿರ್üಗಳು ಸದ್ಗುಣವಂತರಾಗಿ ಮುನ್ನಡೆಯಬೇಕು. ಎಂದಿಗೂ ಉದ್ಯೋಗಿಗಳಾಗದೆ, ಉದ್ಯಮಿಗಳಾಗುವ ಸಾಧಕರಾಗಬೇಕು. ನಾಗರಿಕರ ಸೇವೆಯು, ಸಮಾಜ ಸೇವೆಗಳತ್ತ ಹೆಚ್ಚುವರಿ ಚಿತ್ತವನ್ನರಿಸುವ ಅಗತ್ಯವಿದೆ. ನಾಯಕತ್ವ, ಸಂಘಟನಾತ್ಮಕ ಗುಣಗಳನ್ನು ಮೈಗೂಡಿಸಿ ದೇಶಸೇವೆ ಜೊತೆಗೆ ರಾಷ್ಟ್ರಪ್ರೇಮಿಗಳಾಗಿ ಕ್ರೀಯಾಶೀಲ ನಾಗರಿಕರಾಗಿರಿ ಎಂದು ನುಡಿದರು.

ನಮ್ಮ ಕಾಲದಲ್ಲಿ ಶಿಕ್ಷಣದಲ್ಲಿ ಬಾಲಕರೇ ಮುಂಚೂಣಿಯಲಿದ್ದರು. ಇದೀಗ ಬಾಲಕಿಯರೇ ಮುನ್ನಡೆ ಸಾಧಿಸುತ್ತಿದ್ದಾರೆ. ಇದೇ ಶಿಕ್ಷಣ ಕ್ಷೇತ್ರದ ಬದಲಾವಣೆ ಅಂದೆಣಿಸುತ್ತಿದೆ. ಜೀವನದಲ್ಲಿ ಒಂದು ಧ್ಯೇಯವನ್ನಿರಿಸಿ ಕೊಂಡು ಸಾಗಬೇಕು. ಸೂಕ್ಷ ್ಮಗ್ರಹಿಕೆಯಿಂದ ಪದವೀಧರರಾಗಬೇಕು. ಮುಂದೆ ಸಾಧನೆಯತ್ತ ಯೋಚಿಸಬೇಕು. ಸದ್ಯ ಸಾಧನೆಗೆ ಅನೇಕ ಅವಕಾಶಗಳಿವೆ. ಆದರೆ ಆಯ್ಕೆ ನಮ್ಮ ಆಸಕ್ತಿಗೆ ಅರ್ಹದ್ದಾಗಿರಲಿ ಎಂದು ವಿನ್ಸೆಂಟ್ ಮಥಾಯಸ್ ಸಲಹಿದರು.

ರೆ| ಫಾ| ವಿನ್ಸೆಂಟ್ ಮಿನೇಜಸ್ ವಿಶೇಷ ಅತಿಥಿüಯಾಗಿ ಉಪಸ್ಥಿತರಿದ್ದು, ವಿಲಿಯಂ ಎಲ್.ಡಿ'ಸೋಜಾ ಸುಖಾಗಮನ ಬಯಸಿ, ಪ್ರಸ್ತಾವನೆಗೈದರು. ಬ್ಯಾಂಕ್‍ನ ಪ್ರಬಂಧಕ ಎಡ್ವರ್ಡ್ ರಾಸ್ಕಿನ್ಹಾ ಕಾರ್ಯಕ್ರಮ ನಿರೂಪಿಸಿದರು. ಲೊಲಿಟಾ ರೋಡ್ರಿಗಸ್ ಫಲಾನುಭವಿಗಳ ಪಟ್ಟಿ ವಾಚಿಸಿದರು. ಹಿರಿಯ ಪ್ರಬಂಧಕಿ ಬಿಯೆಟಾ ಕಾರ್ವಾಲೋ ಅಭಾರ ಮನ್ನಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here