Monday 12th, May 2025
canara news

ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ ರಂಗೋಲಿ ಸ್ಪರ್ಧೆ ಯಕ್ಷಗಾನ ತರಬೇತಿ ಶಿಬಿರ ಮತ್ತು ಹಳದಿ ಕುಂಕುಮ ಕಾರ್ಯಕ್ರಮ

Published On : 26 Jan 2019   |  Reported By : Rons Bantwal


ಮುಂಬಯಿ, ಜ. 26: `ಜಗತ್ತಿನ ದಿವ್ಯಾ ಶಕ್ತಿಯೇ ಸೂರ್ಯ. ಸೂರ್ಯ ಅಂತೆಯೇ ವರ್ಷದ ಆದಿಯಲ್ಲಿಯೇ, ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸೂರ್ಯ ದೇವನನ್ನು ಆರಾದಿಸುವ ಹಿಂದೂ ಸಂಸ್ಕøತಿಯ ವರ್ಷದ ಪ್ರಥಮ ಹಬ್ಬವೇ ಮಕರ ಸಂಕ್ರಾಂತಿ. ಆ ದಿನದಿಂದ ಆರಂಭವಾಗುವ `ಉತ್ತರಾಯಣ' ಅನಾದಿಕಾಲದಿಂದಲೂ ಹಿಂದೂ ಧರ್ಮದಲ್ಲಿ ಶುಭ ದಿನಗಳೆಂದು ನಂಬಿಕೊಂಡು ಬಂದಿರುವೆವು. ಸಕಾರಾತ್ಮಕ ಗುಣಗಳನ್ನು ತಮ್ಮದಾಗಿರಿಸಿಕೊಮಡು ನಮ್ಮ ಸಂಸ್ಕøತಿಯನ್ನು ಕಾಪಾಡಿ ಕೊಂಡು ಬರುವುದು ನಮ್ಮೆಲ್ಲರ, ವಿಶೇಷವಾಗಿ ಮಹಿಳೆಯರ ಆದ್ಯ ಕರ್ತವ್ಯ'' ಎಂದು ಓಂ ಶಕ್ತಿ ಮಹಿಳಾ ಸಂಸ್ಥೆಯ ಗೌ. ಅಧ್ಯಕ್ಷೆ ಚಿತ್ರಾ ಆರ್ ಶೆಟ್ಟಿಯವರು ನುಡಿದರು.

ಮಕರ ಸಂಕ್ರಾಂತಿಯ ಪ್ರಯುಕ್ತ ಓಂ ಶಕ್ತಿ ಮಹಿಳಾ ಸಂಸ್ಥೆಯು ಆಯೋಜಿಸಿದ ವಿವಿಧ ಕಾರ್ಯಕ್ರಮಗಳನ್ನು ಜನವರಿ 15ರಂದು ಹೊಟೇಲ್ ಸಾಗರ್ ಇಂಟರ್ ನ್ಯಾಷನಲ್ ಟೇರೇಸ್ ಗಾರ್ಡನ್‍ನಲ್ಲಿ ಉದ್ಘಾಟಿಸುತ್ತಾ, ಯಕ್ಷಗಾನ ಕಲೆಯು ಇಂದು ಮುಂಬಯಿ ಮಹಾನಗರಿ ಮಾತ್ರವಲ್ಲದೆ, ಹೊರ ದೇಶದಲ್ಲಿಯೂ ಜನ ಪ್ರಿಯತೆ ಉಳಿಸಿಕೊಮಡು ಬಂದಿದ್ದು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಈ ಕಲೆಯಲ್ಲಿ ಅಭಿರುಚಿ ತೋರಿಸುತ್ತಿರುವುದು ಈ ಕಲೆಯ ಶ್ರೇಷ್ಟತೆ ಹಾಗೂ ಧಾರ್ಮಿಕ ಮಹತ್ವವನ್ನು ತೋರಿಸುತ್ತಿದೆ ಎಂದು ತಿಳಿಸಿದರು.

ಓಂ ಶಕ್ತಿ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಹರಿಣಿ ಟಿ. ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಹಿತ ಚಿಂತನೆಯೇ ಮೂಲ ಉದ್ದೇಶವಾಗಿರುವ ಓಂ ಶಕ್ತಿ ಸಂಸ್ಥೆಯು, ಅದರೊಟ್ಟಿಗೆ ಸದಸ್ಯೆಯರ ಕ್ರಿಯಾಶೀಲತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯ ಈ ಶುಭ ದಿನದಂದು, ಧಾರ್ಮಿಕತೆಯ ಶುಭ ಸೂಚಕವಾದ ರಂಗೋಲಿ ಸ್ಪರ್ಧೆಯನ್ನು ನಮ್ಮ ಮಹಿಳೆಯರಿಗೆ ಏರ್ಪಡಿಸಿದ್ದೇವೆ. ನಮ್ಮ ಕರ್ಮ ಭೂಮಿ ಮಹಾರಾಷ್ಟ್ರ. ಈ ನೆಲದ ಋಣವನ್ನು ಸಹ ನಾವು ಪೂರೈಸುವುದು ನಮ್ಮೆಲ್ಲರ ಕರ್ತವ್ಯ. ಈ ಸಲುವಾಗು ಓಂ ಶಕ್ತಿಯು ಈ ತಿಂಗಳಿನಲ್ಲಿ ಹಳ್ಳಿಯ ಆದಿವಾಸಿ ಜನಗಳ ಏಳಿಗೆಯನ್ನು ಬಯಸುತ್ತಾ `ಹಳ್ಳಿಯ ವಿಕಾಸ' ಯೋಜನೆಯನ್ನು ಹಮ್ಮಿಕೊಂಡಿರುವುದು ಎಂದು ಸಭೆಯಲ್ಲಿ ತಿಳಿಸಿದರು.

ಮುಂಬಯಿಯ `ಭ್ರಾಮರಿ ಯಕ್ಷಾ ನೃತ್ಯ ಕಲಾ ನಿಲಯ ಚಾರಿಟೇಬಲ್ ಟ್ರಸ್ಟ್'ನ ರುವಾರಿ ಹಾಗೂ ಪ್ರಸಿದ್ಧ ಯಕ್ಷಗಾನ ತರಬೇತಿ ಗುರು ಶ್ರೀ ಸದಾನಂದ ಶೆಟ್ಟಿ ಕಟೀಲು ಇವರನ್ನು ಸಭೆಯಲ್ಲಿ ಗೌರವಿಸಲಾಯಿತು.

ಅಂದು ನಡೆದ ರಂಗೋಲಿ ಸ್ಪರ್ಧೆಯಲ್ಲಿ, ನಮೃತಾ ಕೌಶಿಕ್ ಪ್ರಥಮ, ಯಶೋದಾ ಎಸ್ ಶೆಟ್ಟಿ ದ್ವಿತೀಯ ಮತ್ತು ಉಮಾ ನಾಯ್ಕ್ ತೃತೀಯ ಬಹುಮಾನಗಳನ್ನು ಪಡೆದರು. ಸಮಾಧಾನಕರ ಬಹುಮಾನಗಳನ್ನು ಸುಪ್ರೀತಾ ಎಮ್ ಭಂಡಾರಿ ಮತ್ತು ಜಯಶ್ರೀ ಎಸ್ ಶೆಟ್ಟಿ ಪಡೆದರೆ; ಸುಚಿತಾ ವರ್ಮ; ಆಶಾ ನಾಯ್ಕ್, ಶಾಶ್ವತಿ ಶೆಟ್ಟಿ; ಮತ್ತು ನಂದಿತ ಕೌಶಿಕ್ ತೀರ್ಪುಗಾರರ ಮೆಚ್ಚುಗೆಯನ್ನು ಪಡೆದರು. ವಿಜೇತರೆಲ್ಲರಿಗೂ ಬಹುಮಾನಗಳನ್ನು ಹಂಚಲಾಯಿತು.

ತೀರ್ಪುಗಾರರಾಗಿ ಶಶಿ ಪಿ. ಶೆಟ್ಟಿ (ಖಾಲ್ಸಾ ಕಾಲೇಜ್ ಮಾಟುಂಗ, ಶಿಕ್ಷಕಿ); ಆಶಾ ವಿ ಶೆಟ್ಟಿ (ಚಿತ್ರಕಲೆಯ ಶಿಕ್ಷಕಿ) ಮತ್ತು ಹರ್ಷಿತಾ ಎಸ್ ಶೆಟ್ಟಿ (ಕಿಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ಬೊರಿವಿಲಿ, ಶಿಕ್ಷಕಿ ) ಸಹಕರಿಸಿದರು.ಉಪಾಧ್ಯಕ್ಷೆ ಜ್ಯೋತಿ ಎಸ್ ಶೆಟ್ಟಿ, ಕೋಶಾಧಿಕಾರಿ ಸುರೇಶಾ ಎಚ್ ಶೆಟ್ಟಿ; ಜತೆ ಕೋಶಾಧಿಕಾರಿ ಕುಶಲಾ ಜಿ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಂದಿನ ಕಾರ್ಯಕ್ರಮವನ್ನು ಕಾರ್ಯದರ್ಶಿ ರೂಪಾ ವೈ ಶೆಟ್ಟಿ ಮತ್ತು ಸಾಂಸ್ಕøತಿಕ ಸಮಿತಿಯ ಸಂಚಾಲಕಿ ರೋಹಿಣಿ ಡಿ ಶೆಟ್ಟಿಯವರು ನಿರ್ವಹಿಸಿದರು. ಆರಂಭದಲ್ಲಿ ಆಶಾ ನಾಯ್ಕ್ ಮತ್ತು ಉಮಾನಾಯ್ಕ್ ಪ್ರಾರ್ಥಿಸಿದರೆ, ಜತೆ ಕಾರ್ಯದರ್ಶಿ ಗ್ರೀಷ್ಮಾ ಪಿ ಶೆಟ್ಟಿಯವರು ಧನ್ಯವಾದ ಸಮರ್ಪಣೆ ಮಾಡಿದರು.

ಮಹಿಳೆಯರಿಗೆ ಮತ್ತು ಮಕ್ಕಳಿಗೆ ಯಕ್ಷಗಾನ ಹೆಜ್ಜೆಯನ್ನು ಕಲಿಸುವ ಮೂಲಕ, ತರಬೇತಿ ಶಿಬಿರಕ್ಕೆ ಯಕ್ಷಗಾನ ಗುರು ಮುಹೂರ್ತವನ್ನು ಏರ್ಪಡಿಸಿದರು. ಕೊನೆಯಲ್ಲಿ ಮಹಿಳೆಯರು ಹಳದಿ ಕುಂಕುಮ ಹಚ್ಚಿ, ಹೂ ನೀಡಿ ಎಳ್ಳುಂಡೆ ಹಂಚಿ ಶುಭ ಕೋರಿ ಹಳದಿ ಕುಂಕುಮ ಕಾರ್ಯಕ್ರಮವನ್ನು ನೆರವೇರಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here