Monday 7th, July 2025
canara news

ಸ್ವರ್ಗೀಯ ಚಂದ್ರಶೇಖರ ರಾವ್ ಸ್ಮಾರಣಾರ್ಥ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ

Published On : 02 Feb 2019   |  Reported By : Rons Bantwal


ಸಂಬಂಧಗಳ ಮೂಲಕ ಸೇವಾ ಸಾಧನೆ ಸಿದ್ಧಿ : ಡಾ| ಕೆ. ರಘುನಾಥ್

ಮುಂಬಯಿ,: ಸೇವಾ ನಿರ್ಮಾಣ ಮಾಡಲು ಬೇಕಾದಂತಹ ಅರ್ಪಣಾ ಮನೋಭಾವ, ಶ್ರದ್ಧೆ ಚಂದ್ರಶೇಖರ ರಾವ್ ಅವರಲ್ಲಿ ನಾವೂ ಕಲಿಯಬೇಕಾದಂತ ಗುಣಗಳಾಗಿದ್ದವು. ಮುರಿಯುವುದು ಸುಲಭ ಆದರೆ ಕಟ್ಟುವುದು ಕಷ್ಟ. ಅಂತಹ ಕಟ್ಟುವ ಕೆಲಸಗಳನ್ನು ಚಂದ್ರಶೇಖರ್ ತಮ್ಮ ಸಂಬಂಧಗಳ ಮೂಲಕ ಸಾಧಿಸಿದ್ದಾರೆ. ಇಂದಿನ ಸಂಘ ಸಂಸ್ಥೆಯಲ್ಲಿರುವವರಿಗೆ ಚಂದ್ರಶೇಖರ್ ಒಂದು ಮಾದರಿ. ಆದ್ದರಿಂದಲೇ ಅವರಿಂದ ಭೌತಿಕಕಾಗಿ ನಮ್ಮೊಂದಿಗಿಲ್ಲದಿದ್ದರೂ ನೆನಪುಗಳಿಂದ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂದು ಸಾಹಿತಿ, ವಿಮರ್ಶಕ ಪ್ರಾಚಾರ್ಯ ಡಾ| ಕೆ.ರಘುನಾಥ್ ತಿಳಿಸಿದರು.

ಕವಿ, ಹರಟೆಗಾರ, ಕಥೆಗಾರ, ರಂಗನಟ ಚಂದ್ರಶೇಖರ ರಾವ್ ಅವರ ಸ್ಮರಣಾರ್ಥ ಕಳೆದ ಶನಿವಾರ ಭಾಂಡೂಪ್‍ನಲ್ಲಿ ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ಮುಂಬಯಿ ಶ್ರೀದೇವಿ ಸಿ.ರಾವ್ ಅಧ್ಯಕ್ಷತೆಯಲ್ಲಿ ನೇರವೇರಿಸಿದ ಚಂದ್ರಶೇಖರ ರಾವ್ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಸಂಸ್ಮರಣಾ ಭಾಷಣವನ್ನಾಡಿ ಡಾ| ರಘನಾಥ್ ಮಾತನಾಡಿದರು. ಗೌರವ ಅತಿಥಿüಗಳಾಗಿ ಟ್ರಸ್ಟ್‍ನ ವಿಶ್ವಸ್ಥರಾದ ಎಂ.ಎಸ್ ಪ್ರತಾಪ್, ಗೋಪಾಲ್ ಶೇಟ್ ಉಪಸ್ಥಿತರಿದ್ದರು.

ಶ್ರೀದೇವಿ ರಾವ್ ಮಾತನಾಡಿ ಚಂದಶೇಖರ್ ಅವರು ಜೀವಿತ ಕಾಲದಲ್ಲಿ ಹಲವು ಕನಸುಗಳನ್ನು ಹೊಂದಿದ್ದರು. ಇದೀಗ ಅವರ ಹೆಸರಿನ ಟ್ರಸ್ಟಿನ ಮೂಲಕ ಆ ಆಸೆಗಳನ್ನು ಕನಸುಗಳನ್ನು ನೇರವೇರಿಸಲು ಪಣತೊಟ್ಟಿದ್ದೇವೆ. ಯೋಗಾಯೋಗವೆಂಬಂತೆ ವಿವೇಕಾನಂದರ ಹುಟ್ಟು ದಿನದಂದೆ ಅವರ ಸಂಸ್ಮರಣಾ ಕಾರ್ಯಕ್ರಮ ನಡೆಯುತ್ತಿದೆ. ಚಂದ್ರಶೇಖರ್ ಕವಿತೆಯ ರೂಪದಲ್ಲಿ ಸಂಬಂಧ ಗಟ್ಟಿಯಾಗಿ ಉಳಿಯಬೇಕು. ಅವರ ಹೆಸರಿನಲ್ಲಿ ಸಾಹಿತ್ಯ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂಬುವುದೇ ನಮ್ಮ ಟ್ರಸ್ಟ್‍ನ ಆಶಯ ಎಂದರು.

ಕವಿಗೋಷ್ಠಿ:
ಕಾರ್ಯಕ್ರಮದ ಅಂಗವಾಗಿ ಡಾ| ಕೆ. ರಘುನಾಥ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಸಲಾಗಿದ್ದು, ಕವಿಗೋಷ್ಠಿಯು ಸಮಕಾಲೀನ ವಸ್ತ್ರವನ್ನೊಳಗೊಂಡಿದ್ದ ವೈವಿಧ್ಯತೆಗಳಿಂದ ಕೂಡಿದ ಕವಿತೆಗಳಿತ್ತು. ಮಾತ್ರವಲ್ಲದೆ ಸಂಬಂಧಗಳ ತೀವ್ರವಾದ ಶೋಧನೆ ಈ ಕವಿತೆಗಳಿತ್ತು. ಹೆಚ್ಚು ತೀವ್ರವಾದಷ್ಟು ಕವಿತೆಯ ತೀವೃತೆ ಹೆಚ್ಚಾಗುತ್ತದೆ. ಅಂತಹ ಕವಿತೆಗಳ ಅಗತ್ಯ ಇಂದು ಇದೆ ಎಂದು ರಘುನಾಥ್ ಅಭಿಪ್ರಾಯ ಪಟ್ಟರು.

ಡಾ| ಕರುಣಾಕರ ಎನ್.ಶೆಟ್ಟಿ, ಡಾ| ದಾಕ್ಷಾಯನಿ ಎಡಹಳ್ಳಿ, ಡಾ| ರಜನಿ ವಿ.ಪೈ, ಡಾ| ಜಿ.ಪಿ ಕುಸುಮ, ಗೋಪಾಲ ತ್ರಾಸಿ, ಕುಸುಮಾ ಸಿ.ಅವಿೂನ್ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಕವಿಯೂ ಆಗಿದ್ದ ಚಂದ್ರಶೇಖರ ರಾವ್ ಅವರ ಕವಿತೆಗಳನ್ನು ವಾಚಿಸಿ ಸಾ.ದಯಾ ಕಾರ್ಯಕ್ರಮ ನಿರ್ವಾಹಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿ.ಪಿ.ಎಂ ಶಾಲೆ ಮುಲುಂಡ್ ಇದರ ವಿದ್ಯಾಥಿರ್üಗಳು ನೃತ್ಯ ಕಾರ್ಯಕ್ರಮ ಹಾಗೂ ಪುಟಾಣಿಗಳು ಶೋಕ, ಸ್ತುತಿ ಹಾಗೂ ಭಗವದ್ಗೀತೆಯ ವಾಚನ ಕಾರ್ಯಕ್ರಮ ನಡೆಸಿದರು. ಎಂ.ಎ ಅಂಜನ್, ಸಂಧ್ಯಾ ರಾೈಕರ್, ಸುಶ್ಮಿತಾ ರಾಯ್ಕರ್ ಸಹಕರಿಸಿದ್ದು ಟ್ರಸ್ಟ್‍ನ ಗೌ| ಪ್ರ| ಕಾರ್ಯದರ್ಶಿ ಸಜ್ಜನ್ ಎಂ.ಎಸ್ ಧನ್ಯವಾದಗೈದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here