Monday 24th, June 2019
canara news

ಶ್ರೀ ಸಾಯಿನಾಥ ಮಿತ್ರ ಮಂಡಳಿ ಕಫ್‍ಪರೇಡ್ ನೆರವೇರಿಸಿದ ಶ್ರೀ ಸತ್ಯನಾರಾಯಣ ಪೂಜೆ

Published On : 05 Feb 2019


ಕೊಲಾಬಾದ ಜಾತ್ರೆ ಪ್ರಸಿದ್ಧಿಯಲ್ಲಿ ಪೂಜಿಸಲ್ಪಟ್ಟ ಶ್ರೀ ಸಾಯಿಬಾಬಾ 

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.29: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ, ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ಆಡಳಿತ ನಿರ್ದೇಶಕ ಕಡಂದಲೆ ಸುರೇಶ್ ಎಸ್.ಭಂಡಾರಿ ಧುರೀಣತ್ವದಲ್ಲಿ ದಕ್ಷಿಣ ಮುಂಬಯಿ ಇಲ್ಲಿನ ಕೊಲಾಬಾ ಕಫ್‍ಪರೇಡ್‍ನಲ್ಲಿ ಕಳೆದ ಮೂರು ದಶಕಗಳಿಂದ ಸೇವಾ ನಿರತ ಶ್ರೀ ಸಾಯಿನಾಥ ಮಿತ್ರ ಮಂಡಳಿ (ರಿ.) ತನ್ನ 30ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ ಮತ್ತು ಶ್ರೀ ಸಾಯಿಬಾಬಾ ಪೂಜೆ ಹಾಗೂ ಸಾಯಿ ಭಂಡಾರವು ಇಂದಿಲ್ಲಿ ಗುರುವಾರ ಕಪ್ ಪರೇಡ್‍ನ ಸಾಯಿ ಸದನ್‍ನಲ್ಲಿ ವಿವಿಧ ಧಾರ್ಮಿಕ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಯುತವಾಗಿ ನೇರವೇರಿಸಲ್ಪಟ್ಟಿತು.

 

ಕೊಲಾಬಾ ನಗರದ ವಾರ್ಷಿಕ ಜಾತ್ರೆ ಎಂದೇ ಪ್ರಸಿದ್ಧಿಯ ವಾರ್ಷಿಕ ಕಾರ್ಯಕ್ರಮ ನಿಮಿತ್ತ ಇಂದಿಲ್ಲಿ ಗುರುವಾರ ಶ್ರೀ ಸಾಯಿ ಅಭಿಷೇಕ, ಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಸಾಯಿ ಮಹಾರತಿ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ ಶ್ರೀ ಸಾಯಿಬಾಬಾ ಅವರ ಭಂಡಾರ ಜರುಗಿಸಲ್ಪಟ್ಟಿತು. ವಿದ್ವಾನ್ ಶ್ರೀ ಲಕ್ಷ್ಮೀನಾರಾಯಣ ಭಟ್ (ಭಾಂಡೂಪ್) ತಮ್ಮ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ವಿಧಿವತ್ತಾಗಿ ನೆರವೇರಿಸಿ ನೆರೆದ ಸದ್ಭಕ್ತರಿಗೆ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಕಳೆದ ಮಂಗಳವಾರ ಸಾಂಸ್ಕೃತಿಕ ಕಾರ್ಯಕ್ರಮ, ಹಳದಿ ಕುಂಕುಮ, ಧಾರ್ಮಿಕ ಕಾರ್ಯಕ್ರಮ ಹಾಗೂ ಬುಧÀವಾರ ಶ್ರೀ ಸಾಯಿ ಭಜನೆಯೊಂದಿಗೆ ವಾರ್ಷಿಕ ಸಂಭ್ರಮ ಆರಂಭಿಸಲಾಗಿತ್ತು.

ಈ ಸಂದರ್ಭದಲ್ಲಿ ಮಹಾರಾಷ್ಟ್ರ ಸರಕಾರದ ಸಂಪುಟ ಸಚಿವ (ಬಂಡವಾಳ), ಸ್ಥಾನೀಯ ಶಾಸಕ ರಾಜ್ ಕೆ.ಪುರೋಹಿತ್ ಮಹಾರಾಷ್ಟ್ರ ರಾಜ್ಯಪಾಲರ ನಾಮನಿರ್ದೇಶಿತ ವಿಧಾನ ಪರಿಷತ್ ಸದಸ್ಯ ರಾಹುಲ್ ಸುರೇಶ್ ನಾರ್ವೆಕರ್, ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾ| ಆರ್.ಎಂ ಭಂಡಾರಿ, ಡಾ| ಶಿವರಾಮ ಕೆ.ಭಂಡಾರಿ (ಶಿವಾಸ್), ಸತೀಶ್ ಭಂಡಾರಿ, ವಿಠಲ ಭಂಡಾರಿ, ಶಾರದಾ ವಿ.ಭಂಡಾರಿ, ನರಸಮ್ಮ ಭಂಡಾರಿ, ಪ್ರೇಮಾ ಭೋಜರಾಜ್, ರಾಮಚಂದ್ರ ಕೋಟ್ಯಾನ್, ಸದಾನಂದ ಪೂಜಾರಿ ತೆಳ್ಳಾರ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದು, ಶ್ರೀ ಸಾಯಿನಾಥ ಮಿತ್ರ ಮಂಡಳಿ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಶೋಭಾ ಸುರೇಶ್ ಭಂಡಾರಿ ಮತ್ತು ಸೌರಭ್ ಸುರೇಶ್ ಭಂಡಾರಿ ಸರ್ವ ಸಾಯಿಭಕ್ತರನ್ನು ಸತ್ಕರಿಸಿದರು. ಈ ಬಾರಿ ಬೃಹದಾಕಾರದ ಶ್ರೀ ರಾಮ ದೇವರ ಪ್ರತಿಕೃತಿ ಮಹಾದ್ವಾರ ಅತ್ಯಾಕರ್ಷವಾಗಿ ಸದ್ಭಕ್ತರನ್ನು ಆಕರ್ಷಿಸುವಂತಿತ್ತು.
More News

ಪತ್ರಕರ್ತ ಮುಹಮ್ಮದ್ ಆರಿಫ್ ಅವರಿಗೆ ಬ್ರ್ಯಾಂಡ್  ಮಂಗಳೂರು ಪ್ರಶಸ್ತಿ
ಪತ್ರಕರ್ತ ಮುಹಮ್ಮದ್ ಆರಿಫ್ ಅವರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ
 ಗಡಿನಾಡು ಕಾಸರಗೋಡಿನ ಸಾಹಿತ್ತಿಕ, ಸಾಂಸ್ಕøತಿಕ ಶ್ರೀಮಂತಿಕೆ ಕನ್ನಡ ನಾಡಿಗೆ ಹೆಮ್ಮೆ ತಂದಿದೆ- ಕೋಟ ಶ್ರೀನಿವಾಸ ಪೂಜಾರಿ
ಗಡಿನಾಡು ಕಾಸರಗೋಡಿನ ಸಾಹಿತ್ತಿಕ, ಸಾಂಸ್ಕøತಿಕ ಶ್ರೀಮಂತಿಕೆ ಕನ್ನಡ ನಾಡಿಗೆ ಹೆಮ್ಮೆ ತಂದಿದೆ- ಕೋಟ ಶ್ರೀನಿವಾಸ ಪೂಜಾರಿ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ- ಕೆಎಸ್‍ಸಿಸಿ ವತಿಯಿಂದ ದುಬೈಯಲ್ಲಿ ಸಂಪನ್ನಗೊಂಡ ಯಶಸ್ವೀ ರಕ್ತದಾನ ಶಿಬಿರ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ- ಕೆಎಸ್‍ಸಿಸಿ ವತಿಯಿಂದ ದುಬೈಯಲ್ಲಿ ಸಂಪನ್ನಗೊಂಡ ಯಶಸ್ವೀ ರಕ್ತದಾನ ಶಿಬಿರ

Comment Here