Thursday 28th, March 2024
canara news

ಚಿಣ್ಣರ ಬಿಂಬ ಸಂಭ್ರಮಿಸಿದ ಹದಿನಾರನೇ ಮಕ್ಕಳ ಉತ್ಸವ-ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆ

Published On : 06 Feb 2019   |  Reported By : Rons Bantwal


ಕರಾವಳಿ ಜನತೆಯಿಂದ ಕರ್ನಾಟಕವು ಭೂಪಟದಲ್ಲಿ ರಾರಜಿಸುತ್ತಿದೆ : ಕೆ.ಎನ್ ಚನ್ನೇಗೌಡ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.03: ಮರಾಠಿ ಮಣ್ಣಿನಲ್ಲಿ ಕನ್ನಡದ ಅದ್ಭುತವಾದ ಕಾರ್ಯಕ್ರಮ ನಿಜಕ್ಕೂ ಕನ್ನಡಾಂಭೆಯ ನಿಜಾರ್ಥದ ಸೇವೆಗೆ ವರವಾಗಿದೆ. ಕರ್ನಾಟಕದ ದಕ್ಷಿಣ ಕನ್ನಡದಿಂದ ಹೊರಗೆ ಬಂದವರು ಮುಂಬಯಿ ಅಥವಾ ದುಬಾಯಿ ಅಲ್ಲದೆ ಇತರ ದೇಶ ಪ್ರದೇಶಕ್ಕೆ ಹೋದವರು ಕನ್ನಡದ ಸಂಸ್ಕೃತಿಯನ್ನು ಜೀವಂತವಾಗಿರಿಸಲು ತುಂಬಾ ಶ್ರಮಪಡಿತ್ತಿದ್ದಾರೆ. ಕರಾವಳಿ ಜನತೆಯಿಂದ ಕರ್ನಾಟಕವು ವಿಶ್ವಭೂಪಟದಲ್ಲಿ ರಾರಜಿಸುತ್ತಿದೆ. ಈ ಚಿಣ್ಣರೋತ್ಸವವು ಮುಂಬಯಿನ ಕನ್ನಡಿಗ ಮಕ್ಕಳ ಹಬ್ಬವೇ ಸರಿ. ಇದೊಂದು ಮುಂಬಯಿಯಲ್ಲಿನ ಕನ್ನಡದ ಕಲರವ. ಅತ್ಯಾದ್ಭುತ ಸ್ಥಾನ ಪಡೆದು ಸಾಧಕರೆಣಿಸಿದ ಮುಂಬಯಿ ಕನ್ನಡಿಗರು ಸರ್ವ ಶ್ರೇಷ್ಠರು ಎಂದು ವಿಜಯವಾಣಿ ಕನ್ನಡ ದೈನಿಕದ ಸಂಪಾದಕ ಕೆ.ಎನ್ ಚನ್ನೇಗೌಡ ನುಡಿದರು.

ಇಂದಿಲ್ಲಿ ಭಾನುವಾರ ಬೆಳಿಗ್ಗೆ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್‍ನ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರ ಪ್ರಾಯೋಜಕತ್ವದಲ್ಲಿ ಚಿಣ್ಣರ ಬಿಂಬ ಸಂಸ್ಥೆ ಸಂಭ್ರಮಿಸಿದ ಹದಿನಾರನೇ ಮಕ್ಕಳ ಉತ್ಸವ, ಗುರುವಂದನೆ, ಪ್ರತಿಭಾ ಪುರಸ್ಕಾರ ಪ್ರದಾನ ಮತ್ತು ಸಾಂಸ್ಕೃತಿಕ ಪ್ರತಿಭಾ ಸ್ಪರ್ಧಾ ಸಮಾರಂಭ ಉದ್ಘಾಟಿಸಿ ಚನ್ನೇಗೌಡ ಮಾತನಾಡಿದರು.

ರೀಜೆನ್ಸಿ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಜಯರಾಮ ಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಉದ್ಘಾಟನಾ ಸಮಾರಂಭದ ಮಾ ತುಲಸೀ ಪೀಠಾಧೀಶ್ವರ್ ಸ್ವಾಮಿ ಶ್ರೀ ಪುರುಷೋತ್ತಮ ರಾಮಾನುಜಾಚಾರ್ಯ ತುಲಸೀ ಮಹಾರಾಜ್ ದಿವ್ಯೋಪಸ್ಥಿತಿಯಲ್ಲಿ ಮುಖ್ಯ ಅತಿಥಿüಯಾಗಿ ಕನ್ನಡ ಅಭಿವೃದ್ಧಿ ಪ್ರಾಧೀಕಾರದ ಕಾರ್ಯಾಧ್ಯಕ್ಷ ಪೆÇ್ರ| ಎಸ್.ಜಿ ಸಿದ್ದರಾಮಯ್ಯ, ಗೌರವ ಅತಿಥಿüಗಳಾಗಿ ಬಂಟ್ಸ್ ಸಂಘ ಮುಂಬಯಿ ಮಹಿಳಾ ವಿಭಾಗದ ಜತೆ ಕಾರ್ಯದರ್ಶಿ ಮನೋರಮಾ ಎನ್.ಬಿ ಶೆಟ್ಟಿ, ಯುವೋದ್ಯಮಿ ಅಶೋಕ್ ಶೆಟ್ಟಿ ಪೆರ್ಮುದೆ, ಕಲಾ ಜಗತ್ತು ಇದರ ಸ್ಥಾಪಕ ತೋನ್ಸೆ ವಿಜಯಕುಮಾರ್ ಶೆಟ್ಟಿ, ಚಿಣ್ಣರ ಬಿಂಬದ ರೂವಾರಿ ಮತ್ತು ಪ್ರವರ್ತಕರಾದ ಪ್ರಕಾಶ್ ಬಿ. ಭಂಡಾರಿ, ರೇಣುಕಾ ಪಿ.ಭಂಡಾರಿ, ಚಿಣ್ಣರ ಬಿಂಬದ ಕಾರ್ಯಾಧ್ಯಕ್ಷೆ ಕು| ನೈನಾ ಪಿ.ಭಂಡಾರಿ ವೇದಿಕೆಯಲ್ಲಿದ್ದರು.

ಇಂತಹ ಕನ್ನಡದ ಕಾರ್ಯಕ್ರಮಗಳನ್ನು ನಾವು ಕರ್ನಾಟಕದಲ್ಲೇ ಕಾಣಲಸಾಧ್ಯ. ಕನ್ನಡ ಹೆಸರಿನಲ್ಲಿ ಸುಳಿಗೆ ಮಾಡುವ, ಸ್ವಯಂಘೋಷಿತ ಕನ್ನಡಪ್ರೇಮಿಗಳಿಗೆ ಇಲ್ಲಿ ಕರೆಸಿ ಇಂತಹ ಕಾರ್ಯಕ್ರಮಗಳನ್ನು ತೋರಿಸಬೇಕು ಮತ್ತು ಕನ್ನಡಾಂಭೆಯ ನಿಜಾರ್ಥದ ಕಾಯಕದ ಬಗ್ಗೆ ಪಾಠಮಾಡಿರಿ ಎಂದು ಎಸ್.ಜಿ ಸಿದ್ದರಾಮಯ್ಯರಿಗೆ ಎಚ್ಚರಿಸಿದ ಚನ್ನೇಗೌಡರು ತುಂಬಾ ಅದ್ಭುತ ರೀತಿಯಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರವು ಮುಖಪುಟ ವರದಿಗೂ ಯೋಗ್ಯವಾದದ್ದು ಎನ್ನುವುದನ್ನೂ ಸಮಥಿರ್sಕೊಂಡರು.

ಮಾತೆಯೇ ಮಕ್ಕಳ ಪ್ರಥಮ ದೇವರಾಗಿದ್ದಾರೆ. ಆದುದರಿಂದ ದೇವರನ್ನು ಮಠಮಂದಿರಗಳಲ್ಲಿ ಹುಡುಕಾಡುವ ಅಗತ್ಯವಿಲ್ಲ. ಮಾತಪಿತಾರ ಸೇವಾಕರ್ಮದಿಂದಲೇ ದೇವರನ್ನು ಕಾಣಬಹುದು. ಮಕ್ಕಳು ಭೇದಭಾವ ಮರೆತು ಸ್ವಸ್ಥರಾಗಿದ್ದರೆ ಸುಖದಾಯಕ ಜೀವನ ಪಾವನವಾಗುವುದು. ಮಾತೃದೇವೊಭಾವ ಪಿತೃದೇವೋಭಾವ, ಗುರುದೇವೊಭಾವಗಳೆಂಬ ನೀತಿಯನ್ನು ಮಕ್ಕಳು ರೂಢಿಸಿಕೊಂಡಲ್ಲಿ ಸಂಸ್ಕಾರಯುತ ಬದುಕು ತನ್ನೀಂತಾನೇ ಫಲಿಸುವುದು. ಇಂದಿನ ಮಕ್ಕಳು ಭಗವಂತನನ್ನು ನಂಬುವುದಿಲ್ಲ ಎನ್ನುವುದನ್ನು ಈ ಚಿಣ್ಣರಕೂಟವು ಸುಳ್ಳುಪಡಿಸುತ್ತಿದೆ. ಕರ್ಮದಂತೆ ಧರ್ಮ ನಡೆಯುವುದು ಎಂದು ತುಲಸೀ ಮಹಾರಾಜ್ ನೆರೆದ ಜನತೆಯನ್ನು ಹರಸಿದರು.

ಸಿದ್ದರಾಮಯ್ಯ ಮಾತನಾಡಿ ಸ್ಪರ್ಧೆಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ವ್ಯಕ್ತಿತ್ವ ವಿಕಾಸನ ಮುಖ್ಯವಾದುದು. ಇದನ್ನೇ ಈ ಸಂಸ್ಥೆ ರೂಪಿಸಿ ಶಿಬಿರಾಥಿರ್üಗಳ ಪಾಲಿಗೆ ಯಶ ತಂದಿದೆ. ಸ್ಪರ್ಧೆಕ್ಕಿಂತ ಎಲ್ಲರನ್ನು ಒಳಗೊಳ್ಳುವ ಶಕ್ತಿಯು ಮುಖ್ಯವಾಗಿದ್ದು, ಇದೊಂದು ವಿಶೇಷವಾದ ಅನುಭವ. ಇಲ್ಲಿನ ಮಕ್ಕಳು ಪಂಚಭಾಷಾ ಮೇಧಾವಿಗಳಾಗಿದ್ದರೂ ಕನ್ನಡ ಭಾಷೆಯನ್ನು ಮೆರೆಸಿ ಸ್ಥಳೀಯತ್ವಕ್ಕೆ ನೀಡಿದ ಕೊಡುಗೆ ಅರ್ಥಪೂರ್ಣ. ನನಗೆ ನೂರಾರು ಗೌರವಗಳು ಪ್ರಾಪ್ತಿಯಾಗಿವೆ ಆದರೆ ಇವತ್ತು ಮಕ್ಕಳ ಕೈಯಲ್ಲಿ ಪಡೆದ ಗೌರವ ರಾಜ್ಯೋತ್ಸವ ಪ್ರಶಸ್ತಿಗಿಂತ ಹಿರಿದು. ಮುಂಬಯಿ ಕನ್ನಡಿಗರ ಕನ್ನಡದ ಒಲವು ಅತ್ಯಾದ್ಭುತವಾದುದು. ಆದುದರಿಂದಲೇ ಮಾತೃಪ್ರಧಾನ ವ್ಯವಸ್ಥೆಗೆ ಕರಾವಳಿ ಕನ್ನಡಿಗರು ಪ್ರೇರಕರು ಎಂದರು.


ಮನೋರಮಾ ಶೆಟ್ಟಿ ಮಾತನಾಡಿ ಸಂಸ್ಕಾರಯುತ ಬದುಕಿಗೆ ಚಿಣ್ಣರಬಿಂಬವು ಪ್ರೇರಣೆಯೂ ಜಗಕ್ಕೆ ಮಾದರಿಯೂ ಆಗಿದೆ. ಇಲ್ಲಿನ ಮಕ್ಕಳ ಶಿಸ್ತುಬದ್ಧ ನಡೆ ಹಿರಿಯ್ರಿಗೂ ಆದರಣೀಯ. ಪಾಲಕರಿಗೂ ಇದು ಗೌರವವಾಗಿದೆ. ಇಲ್ಲಿನ ಶಿಬಿರಾಥಿರ್üಗಳು ಜೀವನಪೂರ್ತಿಯಾಗಿ ಚಿಣ್ಣರ ಬಿಂಬದ ಋಣ ಪೂರೈಸಬೇಕು. ಭವಿಷ್ಯತ್ತಿನ ಮಕ್ಕಳಿಗೂ ನೀವು ಆದರನೀಯರಾಗಬೇಕು ಎಂದು ಆಶಯ ನುಡಿಗಳನ್ನಾಡಿದರು.

ಸುಮಾರು 7-14 ವರ್ಷದೊಳಗಿನ ಮಕ್ಕಳ ಭವಿಷ್ಯಕ್ಕೆ ಉಪಯುಕ್ತ ಮಾರ್ಗದರ್ಶನ ನೀಡುವ ಚಿಣ್ಣರ ಬಿಂಬದ ಸೇವೆ ಗಣನೀಯ ಮತ್ತು ಗಮನೀಯವಾದದು. ಇದು ಭಾವೀ ಜನಾಂಗದ ಭವಿಷ್ಯತ್ತಿನ ಪೀಳಿಗೆಗೆ ಮಾರ್ಗದರ್ಶನ ಆಗಲಿ ಎಂದು ಅಶೋಕ್ ಶೆಟ್ಟಿ ಹಿತನುಡಿಗಳÀನ್ನಾಡಿದರು.

ತನ್ನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ, ನುಡಿನಡೆ, ಶಿಸ್ತು ಬದ್ಧತೆ, ಆತ್ಮವಿಶ್ವಾಸ ಮೂಲಕ ಮನೆಮನಗಳನ್ನು ಬೆಳೆಗಿಸಿದ ಅಪೂರ್ವ ಸಂಸ್ಥೆ ಚಿಣ್ಣರಬಿಂಬವಾಗಿದೆ. ಮೌಲ್ಯಧಾರಿತ ಬದುಕನ್ನು ಕಟ್ಟುವಲ್ಲಿ ಪ್ರೇರಕವಾಗಿವ ಈ ಸಂಸ್ಥೆ ಎಲ್ಲರಿಗೂ ಮಾದರಿ. ಸನಾತನ ಧರ್ಮ ಉಳಿಸಿ ಬೆಳೆಸಲು ಪ್ರೇರಕವಾದ ಈ ಸಂಸ್ಥೆ ಭವ್ಯ ಭಾರತ ನಿರ್ಮಾಣಕ್ಕೂ ಪೂರಕವಾಗಿದೆ ಎಂದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಜಯರಾಮ ಶೆಟ್ಟಿ ಆಶಯ ವ್ಯಕ್ತಪಡಿದರು.

ಸುರೇಂದ್ರಕುಮಾರ್ ಹೆಗ್ಡೆ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಮಕ್ಕಳಲ್ಲಿ ಜೀವನದ ಮೌಲ್ಯಗಳನ್ನು ರೂಪಿಸಿ ರಾಷ್ಟ್ರದ ಉತ್ತಮ ಪ್ರಜೆಗಳಾಗುವಲ್ಲಿ ಮತ್ತು ಆದರ್ಶ ನಾಗರಿಕರಾಗುವಂತೆ ಚಿಣ್ಣರಬಿಂಬ ಕಾರ್ಯನಿರತವಾಗಿದೆ. ಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ರೂಢಿಸುತ್ತಾ ಅವರಲ್ಲಿನ ಪ್ರತಿಭಾನ್ವಷಣೆಗೆ ಸೂಕ್ತ ವೇದಿಕೆ ಇದಾಗಿದೆ. ಆದುದರಿಂದಲೇ ನಮ್ಮ ಚಿಣ್ಣರು ಜಾಗತಿಕವಾಗಿ ಜನಮಾನಸದಲ್ಲಿ ಗುರುತಿಸಿಕೊಂಡಿದ್ದಾರೆ ಎಂದÀರು.

ಸಮಾರಂಭದಲ್ಲಿ ಕೇಂದ್ರ ಸಮಿತಿ ಸದಸ್ಯರುಗಳಾದ ಭಾಸ್ಕರ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ವಿಜಯ್ ಕೋಟ್ಯಾನ್, ರೂಪಾ ರೇಖಾ, ವಿನಯ ಶೆಟ್ಟಿ, ಸುಜತಾ ಶೆಟ್ಟಿ, ಸುಮಿತ್ರಾ ದೇವಾಡಿಗ, ಸರಳಾ ರಾಯ, ಮಂಜುಳಾ ಶೆಟ್ಟಿ, ತೋನ್ಸೆ ಸಂಜೀವ ಪೂಜಾರಿ, ರಮೇಶ್ ಡಿ.ರೈ ಕಯ್ಯಾರು ಸೇರಿದಂತೆ ಚಿಣ್ಣರ ಬಿಂಬದ ಸದಸ್ಯರು, ನೂರಾರು ಚಿಣ್ಣರು, ಪೆÇೀಷಕರು ಉಪಸ್ಥಿತರಿದ್ದರು. ನೈಶಾ ಶೆಟ್ಟಿ, ಹಾರ್ದಿಕ್ ಶೆಟ್ಟಿ, ದೃಶ್ಯಾ ಹೆಗ್ಡೆ, ವಿಶ್ವ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು.

ಚಿಣ್ಣರಿಂದ ವಂದನೆ ನಿನಗೆ ಗಣನಾಥ ಗೀತೆಯೊಂದಿಗೆ ಮೊಳಗಿದ ಕಾರ್ಯಕ್ರಮದಲ್ಲಿ ಶ್ಲೋಕ ಪಠಣದೊಂದಿಗೆ ಸಮಾರಂಭ ಆದಿಗೊಂಡಿತು. ಚಿಣ್ಣರು ಭಗವತ್ಗೀತೆಯ ಶ್ಲೋಕಗಳ ಸಂಕ್ಷೀಪ್ತ ಸಾರವನ್ನು ತಿಳಿಪಡಿಸಿದರು. ಅತಿಥಿüಗಳು ವಿವಿಧ ಶಿಬಿರಾಥಿರ್üಗಳಿಗೆ, ವಿಜೇತರಿಗೆ ಬಹುಮಾನ ಪ್ರದಾನಿಸಿ ಗೌರವಿಸಿದರು.ಪ್ರಖ್ಯಾತ್ ಶೆಟ್ಟಿ, ಜಾನವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ಪರ್ಧೆಗಳನ್ನು ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಪ್ರತಿಭಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿಸಲ್ಪಟ್ಟವು.

ಚಿಣ್ಣರೋತ್ಸವ ವೈಶಿಷ್ಟ ್ಯತೆ:
ಸುಪ್ರಭಾತಕ್ಕೆ ಶರಣು ಎನ್ನುತಾ ವೇದಿಕೆ ಅಲಂಕರಿಸಿದ ಚಿಣ್ಣರು ಸಮಯಪ್ರಜ್ಞೆಗೆ ಮಹತ್ವವಿತ್ತು ಕ್ಲಪ್ತಸಮಕ್ಕೆನೇ ಕಾರ್ಯಕ್ರಮ ಆರಂಭಿಸಿ ಅತಿಥಿüಗಳಲ್ಲಿ ಅಚ್ಚರಿ ಮೂಡಿಸಿದರು. ಶಿಸ್ತುಬದ್ದವಾಗಿ ಕುಳಿತ ಚಿಣ್ಣರು ಕರತಡಗಳೊಂದಿಗೆ ಜಾನಪದ ಗೀತೆಯೊಂದಿಗೆ ಹೆಜ್ಜೆಯನ್ನಿಕ್ಕುತಾ ಇಂಪಾಗಿ ಹಾಡಿದ ಚಿಣ್ಣರ ಕರೆಗೆ ಭಾಗ್ಯದ ಲಕ್ಷ್ಮೀಯ ಆಗಮನವಾಗುತ್ತಿದ್ದಂತೆಯೇ ಚಿಣ್ಣರೋತ್ಸವವ ವೈಭವ ಇಮ್ಮಡಿಗೊಂಡಿತು. ಬಳಿಕ ವೆಂಕಟರಮಣ ಗೋವಿಂದ ಎನ್ನುತ ಮುಂದೆ ಸಾಗಿದ ಚಿಣ್ಣರೋತ್ಸವ ನೆರೆದ ಸಭಿಕರಲ್ಲೂ ನಾಡು ನುಡಿಯ ಪರಿಚಯ ಮೆಲುಕು ಹಾಕುತ್ತಿದ್ದಂತೆಯೇ ಭಜನೆ, ಭಗವದ್ಗೀತೆ, ಸಂಸ್ಕಾರ-ಸಂಸ್ಕೃತಿಯ ಉತ್ಸವವನ್ನು ತುಂಬಿಸಿತು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here