Friday 28th, February 2020
canara news

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ನವೇನ ಪ್ರಾರ್ಥನೆ ಆರಂಭ.

Published On : 07 Feb 2019   |  Reported By : Vincent Mascarenhas


ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ತಯಾರಿಯಾಗಿ ಒಂಬತ್ತು ದಿನಗಳ ನವೇನ ಪ್ರಾರ್ಥನೆ ವಾಹನಗಳ ಮೆರವಣಿಗೆ ಮತ್ತು ಧ್ವಜಾರೋಹಣೆಯೊಂದಿಗೆ ಪ್ರಾರಂಭಗೊಂಡಿತು. ಜೆಪ್ಪು ಸಂತ ಆಂತೋನಿ ಆಶ್ರಮದಿಂದ ಕಂಕನಾಡಿ, ಫಳ್ನೀರ್ ದಾರಿಯಾಗಿ ಮಿಲಾಗ್ರಿಸ್ ಚರ್ಚ ತನಕ ಶೃಂಗರಿಸಲಾದ ಸಂತ ಆಂತೋನಿಯವರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ತರಲಾಯ್ತು. ಫಾ. ಅನಿಷ್ ಜೆಪ್ಪು ಸಂತ ಅಂತೋನಿ ಜಾಕೊಬೈಟ್ ಸಿರಿಯನ್ ಮಹಾದೇವಲಯದ ಪ್ರಧಾನ ಗುರುಗಳು ವಾಹನ ಮೆರವಣಿಗೆಗೆ ಚಾಲನೆ ನೀಡಿದರು.


ವಂ. ಫಾ. ಪಾವ್ಲ್ ಮೆಲ್ವಿನ್ ಡಿ’ಸೋಜ ಬಿಜೈ ಸಂತ ಅನ್ನ ಮಠದ ಮುಖ್ಯಸ್ಥರು ಸಂತ ಆಂತೋನಿಯವರ ಧ್ವಜಾರೋಹಣ ಮಾಡಿ ಮೊದ¯ ದಿನದ ಬಲಿಪೂಜೆಯನ್ನು ಧಾರ್ಮಿಕರಿಗಾಗಿ ಅರ್ಪಿಸಿದರು. ಧಾರ್ಮಿಕರು ಯೇಸುಸ್ವಾಮಿಯ ಕರೆಗೆ ಓಗೊಟ್ಟು ಪ್ರಪಂಚದ ವಿವಿಧ ಕಡೆಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡು ದುಡಿಯುತ್ತಾರೆ. ಅವರಿಗಾಗಿ ದೇವರ ಆಶೀರ್ವಾದಗಳನ್ನು ಬಲಿಪೂಜೆಯ ಸಮಯದಲ್ಲಿ ಬೇಡಿಕೊಂಡರು. ಫಾ. ಒನಿಲ್ ಡಿ’ಸೋಜ ಪುಣ್ಯ ಕ್ಷೇತ್ರದ ನಿರ್ದೇಹಕರು ಮೊದಲ ದಿನದ ನವೇನ ಪ್ರಾರ್ಥನೆ ನಡೆಸಿಕೊಟ್ಟರು. ಫಾ. ತೃಶಾನ್ ಡಿ’ಸೋಜ್, ಶ್ರೀ ಜೋ ಗೊನ್ಸಾಲ್ವಿಸ್, ಶ್ರೀ ವಿನ್ಸೆಂಟ್ ಮಸ್ಕರೇನ್ಹಸ್, ಶ್ರೀ ಸ್ಟಾನ್ಲಿ ಡಿ’ಕುನ್ಹಾ ಹಾಗೂ ಸಾವಿರ ಮೇಲ್ಪಟ್ಟು ಭಕ್ತಾದಿಗಳು ಈ ದಿನದ ಭಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
More News

ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಕುಕ್ಕಾಜೆ-ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ರಕ್ತದಾನ ಶಿಬಿರ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಮಾ.8: ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ
ಶ್ರೀ ಪುರಂದರದಾಸರ 456ನೇ ಆರಾಧನಾ ಮಹೋತ್ಸವಗೈದ ಮುಂಬಯಿ ಕನ್ನಡ ಸಂಘ

Comment Here