Thursday 18th, April 2019
canara news

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‍ನಿಂದ 11ನೇ ವರ್ಷದ ಉಚಿತ ಸಾಮೂಹಿಕ ವಿವಾಹ

Published On : 07 Feb 2019   |  Reported By : Rons Bantwal


ಮುಂಬಯಿ (ಬಂಟ್ವಾಳ), ಫೆ.03: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಬರುವ ಭಾನುವಾರ (ಫೆ.10) ಆಯೋಜಿಸಿರುವ 11ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ ವಧು-ವರರ ನಿಶ್ಚಿತಾರ್ಥ ಕಾರ್ಯಕ್ರಮ ಇಂದಿಲ್ಲಿ ಭಾನುವಾರ ಪುಂಜಾಲಕಟ್ಟೆ ನಂದಗೋಕುಲ ಸಭಾಂಗಣದಲ್ಲಿ ಜರಗಿತು. ಪುಂಜಾಲಕಟ್ಟೆ ಅಟೊರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುಧಾಕರ ಶೆಣೈ ಖಂಡಿಗ ಕಾರ್ಯಕ್ರಮ ಉದ್ಘಾಟಿಸಿ ಶುಭಾರೈಸಿದರು.

ಹಾಪ್‍ಕಾಮ್ಸ್‍ನ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಕೆ.ಲಕ್ಷಿ ್ಮೀ ನಾರಾಯಣ ಉಡುಪ ಮುಖ್ಯ ಅತಿಥಿüಯಾಗಿದ್ದು ವಿವಾಹವೆನ್ನುವುದು ಆತ್ಮಗಳ ಸಮ್ಮಿಲನವಾಗಿದೆ. ವಿವಾಹ ಪದ್ಧತಿ ಕುಟುಂಬ ಜೀವನದ ಭದ್ರ ಬುನಾದಿಯಾಗಿದೆ. ಇದು ಕುಟುಂಬದ ಹಾಗೂ ಸಮಾಜದ ನೆಮ್ಮದಿಯ ಸುವ್ಯವಸ್ಥೆಯಾಗಿದೆ ಎಂದು ಹೇಳಿದರು.

ಬಂಟ್ವಾಳ ತಾ.ಪಂ. ಸದಸ್ಯ ರಮೇಶ್ ಪೂಜಾರಿ ಕುಡುಮೇರ್ ಅವರು ಅಧ್ಯಕ್ಷತೆ ವಹಿಸಿದ್ದು ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ವಾಮದಪದವು ವ್ಯ.ಸೇ.ಸ.ಬ್ಯಾಂಕ್ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಹಾಪ್‍ಕಾಮ್ಸ್ ನಿರ್ದೇಶಕ ವಿಜಯ ರೈ, ಕಾವಳಮೂಡೂರು ಗ್ರಾ.ಪಂ. ಸದಸ್ಯ ಮೋಹನ ಆಚಾ ರ್ಯ, ಉದ್ಯಮಿ ದಿನೇಶ್ ಶೆಟ್ಟಿ ದಂಬೆದಾರ್, ಗುತ್ತಿಗೆದಾರ ಪ್ರಶಾಂತ್‍ಶೆಟ್ಟಿ, ಮಡಂತ್ಯಾರು ಉಪಸ್ಥಿತರಿದ್ದು ಪಿಲಾತಬೆಟ್ಟು ವ್ಯ.ಸೇ.ಸ. ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ ಅತ್ತಾಜೆ ಮತ್ತು ಪ್ರಗತಿಪರ ಕೃಷಿಕ ಗಿರೀಶ್ ಸಾಲ್ಯಾನ್ ಹೆಗ್ಡೆ ಬೆಟ್ಟು ಅವರು ಗುರಿಕಾರರಾಗಿ ಭಾಗವಹಿಸಿ ನಿಶ್ಚಯ ತಾಂಬೂಲ ನೆರವೇರಿಸಿದರು.

ಈ ಬಾರಿ 13ಜೋಡಿ ವಧು-ವರರು ಹಸೆಮಣೆಯನ್ನೇರಲಿದ್ದು ವಧು ವರರಿಗೆ ಮಂಗಳ ವಸ್ತ್ರ ವಿತರಿಸಲಾಯಿತು. ಗುರಿಕಾರರು ತುಳುನಾಡಿನ ಸಂಪ್ರದಾಯ ಪ್ರಕಾರ ವೀಳ್ಯೆದೆಲೆ, ಅಡಿಕೆ, ಮಲ್ಲಿಗೆ ಹೂವು ಇರಿಸಿದ ಹರಿವಾಣವನ್ನು ಹಿಡಿದು ಮೂರು ಬಾರಿ ಪರಸ್ಪರ ಬದಲಾಯಿಸಿಕೊಂಡರು. ವಧು-ವರರು ಉಂಗುರ ವಿನಿಮಯ ಮಾಡಿಕೊಂಡರು.

ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಕಾರ್ಯದರ್ಶಿ ಜಯರಾಜ ಅತ್ತಾಜೆ, ಕೋಶಾಧಿಕಾರಿ ರಾಜೇಶ್ ಬಂಗೇರ ಪುಳಿಮಜಲು, ಮಾಜಿ ಅಧ್ಯಕ್ಷ ಮಾಧವ ಬಂಗೇರ ಮತ್ತಿತರ ಸದಸ್ಯರು, ವಧು-ವರರ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಾಸ್ತಾವನೆಗೈದರು. ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 
More News

ಬಿಲ್ಲವ ಭವನದಲ್ಲಿ ಗುರುವಾರದ ಶ್ರೀ ಗುರು ಅನ್ನ ಪ್ರಸಾದ ಅನ್ನದಾನಕ್ಕೆ ಚಾಲನೆ  ಬಿಲ್ಲವರು ಸರ್ವರನ್ನು ಗೌರವಿಸುವ ಸಂಸ್ಕಾರವುಳ್ಳವರು-ಯೋಗಿಶ್ ಶೆಟ್ಟಿ ಜೆಪ್ಪು
ಬಿಲ್ಲವ ಭವನದಲ್ಲಿ ಗುರುವಾರದ ಶ್ರೀ ಗುರು ಅನ್ನ ಪ್ರಸಾದ ಅನ್ನದಾನಕ್ಕೆ ಚಾಲನೆ ಬಿಲ್ಲವರು ಸರ್ವರನ್ನು ಗೌರವಿಸುವ ಸಂಸ್ಕಾರವುಳ್ಳವರು-ಯೋಗಿಶ್ ಶೆಟ್ಟಿ ಜೆಪ್ಪು
ಬಂಟರ ಸಂಘ ಬೆಂಗಳೂರು ಸಂಭ್ರಮಿಸಿದ `ಬಿಸು ಪರ್ಬ-2019'
ಬಂಟರ ಸಂಘ ಬೆಂಗಳೂರು ಸಂಭ್ರಮಿಸಿದ `ಬಿಸು ಪರ್ಬ-2019'
ಬಂಟರ ಸಂಘ ಮುಂಬಯಿ ಸಂಭ್ರಮಿಸಿದ ವಿಶ್ವ ಬಂಟರ ದಿನಾಚರಣೆ  ಬಿಸು ಪರ್ಬ-ವಾರ್ಷಿಕ ಸ್ನೇಹ ಸಮ್ಮೀಲನ-ಸರ್ವೋತ್ಕೃಷ್ಟ ಬಂಟ ಸಾಧಕ ಪುರಸ್ಕಾರ ಪ್ರದಾನ
ಬಂಟರ ಸಂಘ ಮುಂಬಯಿ ಸಂಭ್ರಮಿಸಿದ ವಿಶ್ವ ಬಂಟರ ದಿನಾಚರಣೆ ಬಿಸು ಪರ್ಬ-ವಾರ್ಷಿಕ ಸ್ನೇಹ ಸಮ್ಮೀಲನ-ಸರ್ವೋತ್ಕೃಷ್ಟ ಬಂಟ ಸಾಧಕ ಪುರಸ್ಕಾರ ಪ್ರದಾನ

Comment Here