Monday 7th, July 2025
canara news

52ನೇ ವಾರ್ಷಿಕ ಉತ್ಸವ ಸಂಭ್ರಮಿಸಿದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಖಾರ್

Published On : 07 Feb 2019   |  Reported By : Rons Bantwal


ಸಂಕಟಮುಕ್ತತೆಗೆ ಶನಿದೇವರೇ ವಾರಿಸುದಾರ : ಧನಂಜಯ ಶಾಂತಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.03: ಶನೈಶ್ವರನ ನಾಮ ಕೇಳಿ ಭಯಬೀಳುವ, ಅವಶ್ಯಕತೆಯಿಲ್ಲ. ಕಾರಣ ಶನೈಶ್ವರನು ಜಾತಕದಲ್ಲಿರುವ ಸ್ಥಾನಗಳ ಪ್ರಕಾರ ಜನ್ಮಶನಿ, ದ್ವಾದಶ ಶನಿ, ಅಂತಹ ಸ್ಥಾನಗಳ ಪ್ರಕಾರ ಸ್ವಲ್ಪ ಕಷ್ಟನಷ್ಟಗಳನ್ನು ಪ್ರಾಪ್ತಿಸಿದರೂ ಆತನಿಗೆ ಶ್ರದ್ಧಾಭÀಕ್ತಿಯಿಂದ ಪೂಜಿಸಿದರೆ ಶನೈಶ್ವರನು ನಮ್ಮೆಲ್ಲಾ ಇಷ್ಟರ್ಥಗಳನ್ನು ಪೂರೈಸಿ ನೆಮ್ಮದಿಯ ಜೀವನಪ್ರಾಪ್ತಿಸುವನು. ಸಪ್ತಮ ಶನಿ ಮತ್ತು ಅಷ್ಟಮಿ ಶನಿ, ಅರ್ಧಾಷ್ಟಮ ಶನಿ ಕೇಳಿಕೊಂಡಗಲೇ ಭಯಪಟ್ಟು ಮೈ ಕಂಪಿಸುವುದಕ್ಕಿಂತ ಅಸಲಿಗೆ ಶನೀಶ್ವರನನ್ನು ಆರಾಧಿಸಿ ಪುಣ್ಯಧಿಗಳನ್ನು ಪ್ರಾಪ್ತಿಸಿಕೊಳ್ಳಬೇಕು. ಈಶ್ವರ ಎಂಬ ಶಬ್ದ ಎಲ್ಲಿ ಇರುತ್ತದೆಯೋ ಅಲ್ಲಿ ಐಶ್ವರ್ಯ ಭೋಳಾತತ್ವ ಇರುತ್ತದೆ. ಆದ್ದರಿಂದ ಶನೈಶ್ವರಸ್ವಾಮಿಯನ್ನು ಶನಿ ಎಂದು ಕರೆಯದೆ ಶನೈಶ್ವರನ ನಾಮದಿಂದ ಸ್ತುತಿಸಿರಿ. ಕಾರಣ ಸಂಕಟಮುಕ್ತಕ್ಕೆ ಶನಿದೇವರೇ ವಾರಿಸುದಾರನು ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್ (ಶಾಂತಿ) ತಿಳಿಸಿದರು.

ಉಪನಗರ ಖಾರ್ ಪೂರ್ವದ ಸಾಯಿಬಾಬಾ ರಸ್ತೆಯಲ್ಲಿನ ಜವಹಾರ್‍ನಗರ್‍ನ ಪಹೇಲ್ವಾನ್ ಚಾಳ್‍ನಲ್ಲಿನ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ತನ್ನ 52ನೇ ವಾರ್ಷಿಕ ಉತ್ಸವವನ್ನು ಇಂದಿಲ್ಲಿ ಭಾನುವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಸಭಾಗೃಹದಲ್ಲಿ ಸಂಭ್ರಮಿಸಿದ್ದು ಧನಂಜಯ ಶಾಂತಿ ಸಮಾರಂಭ ಉದ್ಘಾಟಿಸಿ ತಿಳಿಸಿದರು.
ಸೇವಾ ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕ್‍ನ ನಿರ್ದೇಶಕ ಪ್ರೇಮನಾಥ್ ಪಿ.ಕೋಟ್ಯಾನ್, ಸಮಾಜ ಸೇವಕಿ ವಾರಿಜ ಎಸ್. ಕರ್ಕೇರ ಅತಿಥಿüಗಳಾಗಿ ಹಾಗೂ ಸೇವಾ ಸಮಿತಿ ಗೌರವ ಅಧ್ಯಕ್ಷ ಶ್ರೀಧರ್ ಜೆ.ಪೂಜಾರಿ, ಉಪಾಧ್ಯಕ್ಷ ದೇವೆಂದ್ರ ವಿ. ಬಂಗೇರ, ಕಾರ್ಯಧ್ಯಕ್ಷ ಆರ್.ಡಿ ಕೋಟ್ಯಾನ್, ಜೊತೆ ಕಾರ್ಯದರ್ಶಿಗಳಾದ ಜನಾರ್ದನ ಎನ್.ಸಾಲ್ಯಾನ್, ಹರೀಶ್ ಕೋಟ್ಯಾನ್ ಕಾಪು, ಗೌ| ಪ್ರ| ಕೋಶಾಧಿಕಾರಿ ನಾಗೇಶ್ ಜಿ.ಸುವರ್ಣ, ಮಹಿಳಾ ಸಮಿತಿ ಮುಖ್ಯಸ್ಥರುಗಳಾದ ಕೇಸರಿ ಬಿ.ಅಮೀನ್, ಶೋಭ ವಿ.ಕೋಟ್ಯಾನ್, ಲೀಲಾವತಿ ವೈ ಹೆಜ್ಮಾಡಿ ಮತ್ತು ಶಾರದಾ ಎಸ್.ಪೂಜಾರಿ ಯುವ ವಿಭಾಗದ ಕಾರ್ಯಧ್ಯಕ್ಷ ವಿಜಯ್ ಎನ್.ಸಾಲ್ಯಾನ್, ವಿಶ್ವಸ್ಥ ಸದಸ್ಯರು ಹಾಗೂ ಇತರ ಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು.

ಶನಿದೇವರನ್ನು ಪ್ರಸನ್ನಗೊಳಿಸುವ ವಾರವೇ ಶನಿವಾರ. ಆ ದಿನ ಶನಿದೋಷವುಳ್ಳವರು ಶನಿ ಪೂಜೆ ಮಾಡುವುದು ವಾಡಿಕೆ. ದುಃಖ ಹಾಗೂ ದೌರ್ಭಾಗ್ಯವನ್ನು ದೂರ ಮಾಡಲು ಶನಿವಾರ ನೀಲಿ ಬಣ್ಣದ ಪುಷ್ಫ ಜೊತೆಗಿರಿಸುವ, ಎಳ್ಳನ್ನು ದಾನ ಮಾಡುವ ವಾಡಿಕೆಯಿದೆ. ಶನಿದೇವರು ಕೊಡುವ ಕಷ್ಟಗಳಿಕ್ಕಿಂತಲೂ ನೀಡುವ ವರಗಳ ಬಗ್ಗೆ ತಿಳಿಯುವ ಅಗತ್ಯವಿದೆ. ಇದನ್ನೆಲ್ಲಾ ತಿಳಿದ ಪೂರ್ವಜರು ಇಂತಹ ಧಾರ್ಮಿಕ ಶಕ್ತಿ ತುಂಬುವ ಸಂಸ್ಥೆಗಳನ್ನು ಹುಟ್ಟುಕಾಕಿ ನಮಗೆಲ್ಲಾ ದಾರಿದೀಪವಾಗಿದ್ದಾರೆ ಎಂದು ಶಂಕರ್ ಸುವರ್ಣ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಅತಿಥಿüಗಳು ಸಮಿತಿ ಉಪ ಕಾರ್ಯಧ್ಯಕ್ಷ ಜಯರಾಮ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ವಾಸು ಎಸ್.ಕೋ ಟ್ಯಾನ್, ಭೋಜಾ ಸಿ.ಪೂಜಾರಿ, ಕಾರ್ಯಕ್ರಮ ಸಮಿತಿ ಕಾರ್ಯದರ್ಶಿ ಹರೀಶ್ಚಂದ್ರ ಶೆಟ್ಟಿ ಇವರಿಗೆ ಸಾಧಕ ಸನ್ಮಾನ ಪ್ರದಾನಿಸಿ ಗೌರವಿಸಿದರು ಹಾಗೂ ಸುಮಾರು 21 ಮಹಿಳಾ ಕಾರ್ಯಕರ್ತೆಯರಿಗೆ ಸತ್ಕರಿಸಿ ಅಭಿನಂದಿಸಿದರು.

ಸಮಿತಿ ಸದಸ್ಯರು ಮತ್ತು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ, ಕಿರು ನಾಟಕ, ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಇದರ ಖಾರ್ ವಿಭಾಗದ ಕಲಾವಿದರು `ಭಸ್ಮಾಸುರ ಮೋಹಿನಿ' ಯಕ್ಷಗಾನ ನೃತ್ಯರೂಪಕ ಪ್ರದರ್ಶಿಸಿದರು. ಹರೀಶ್ಚಂದ್ರ ಶೆಟ್ಟಿ ಮತ್ತು ಸಚಿನ್ ಪೂಜಾರಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕು| ದೀಪ ಸಾಲ್ಯಾನ್ ಪ್ರಾರ್ಥನೆಯನ್ನಾಡಿದರು. ಸೇವಾ ಸಮಿತಿ ಗೌ| ಪ್ರ| ಕಾರ್ಯದರ್ಶಿ ಯೋಗೇಶ್ ಹೆಜ್ಮಾಡಿ ಸ್ವಾಗತಿಸಿ ಪ್ರಸ್ತಾವನೆಗೈದÀು ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಗೌರವ ಕೋಶಾಧಿಕಾರಿ, ಮಂದಿರದ ಆರ್ಚಕ ನಾಗೇಶ್ ಜಿ.ಸುವರ್ಣ ಅತಿಥಿüಗಳನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ರಮೇಶ್ ಎನ್.ಪೂಜಾರಿ ಅಭಾರ ಮನ್ನಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here