Monday 24th, June 2019
canara news

ಫೆ.16: ಬಿಎಸ್‍ಕೆಬಿಎ (ಗೋಕುಲ)ದಿಂದ ಷಣ್ಮುಖಾನಂದ ಸಭಾಗೃಹದಲ್ಲಿ

Published On : 09 Feb 2019   |  Reported By : Rons Bantwal


ಶಂಕರ್ ಮಹಾದೇವನ್ ಸಂಗೀತ ರಸಮಂಜರಿ ಕಾರ್ಯಕ್ರಮ

ಮುಂಬಯಿ, ಫೆ.05: ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಸಾಯನ್ ಇದರ `ಗೋಕುಲ ಯೋಜನೆಗಳು ವಿಷನ್ 2020' ಯೋಜನೆಯಡಿ ಸದ್ಯ ನಿರ್ಮಾಣ ಹಂತದಲ್ಲಿರುವ ಗೋಕುಲ ಕಟ್ಟಡ ಹಾಗೂ ಶ್ರೀ ಕೃಷ್ಣ ಮಂದಿರದ ಸಹಾಯಾರ್ಥ ದಿನಾಂಕ ಫೆ.16ನೇ ಶನಿವಾರ ಸಂಜೆ 6.00 ಗಂಟೆಯಿಂದ ಷಣ್ಮುಖಾನಂದ ಸಭಾಗೃಹ, ಕಿಂಗ್ಸ್ ಸರ್ಕಲ್ ಸಯಾನ್ ಇಲ್ಲಿ ನಾಡಿನ ಪ್ರಸಿದ್ಧ ಹಿನ್ನೆಲೆ ಗಾಯಕ ಶಂಕರ್ ಮಹಾದೇವನ್ ಬಳಗದ `ಸಂಗೀತ ರಸಮಂಜರಿ' ಕಾರ್ಯಕ್ರಮ ಹಮ್ಮಿಕೊಂಡಿದೆ.

 ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿಯ ವಿಜೇತ ಶಂಕರ್ ಮಹಾದೇವನ್ ಒರ್ವ ಅತ್ಯುತ್ತಮ ಭಾರತೀಯ ಸಂಗೀತ ಹಿನ್ನೆಲೆ ಗಾಯಕ ಮತ್ತು ಸಂಯೋಜಕನಾಗಿ ಮೂರು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕ ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ ಗೌರವಕ್ಕೆ ಪಾತ್ರರಾದ ಬ್ರೆಥ್ ಲೆಸ್ ಗಾಯಕನೆಂದೇ ಪ್ರಸಿದ್ಧಿ ಪಡೆದ ಶಂಕರ್ ಮಹಾದೇವನ್, ಸುಮಾರು ಮೂರು ಗಂಟೆಗಳ ಕಾಲ, ತನ್ನ ಸುಮಧುರ ಕಂಠದಿಂದ ಶಾಸ್ತ್ರೀಯ ಸಂಗೀತ ಹಾಗೂ ಜನಪ್ರಿಯ ಹಿಂದಿ ಚಲನ ಚಿತ್ರಗೀತೆಗಳೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ಧ ಗೊಳಿಸಲಿದ್ದಾರೆ.

ಗೋಕುಲ ಕಟ್ಟಡ ನಿರ್ಮಾಣದ ಸಹಾಯಾರ್ಥವಾಗಿ ಜರಗಲಿರುವ ಈ ಕಾರ್ಯಕ್ರಮಕ್ಕೆ ಮಹಾನಗರದಲ್ಲಿನ ಸರ್ವ ಸಂಗೀತಾಭಿಮಾನಿಗಳು ಹಾಗೂ ಶ್ರೀ ಕೃಷ್ಣ ಭಕ್ತದಿಗಳು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಬಿಎಸ್‍ಕೆಬಿಎ ಪದಾಧಿಕಾರಿಗಳು ಈ ಮೂಲಕ ವಿನಂತಿಸಿದ್ದಾರೆ.

ಪ್ರವೇಶಪತ್ರ ಪಡೆಯಲಿಪ್ಛಿಸುವವರು ಗೋಕುಲ (24099516) ಅಥವಾ ನವಿಮುಂಬಯಿ ನೆರೂಲ್‍ನಲ್ಲಿನ ಆಶ್ರಯ (27700805) ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಸಂಸ್ಥೆಯ ವಕ್ತಾರರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

 
More News

ಪತ್ರಕರ್ತ ಮುಹಮ್ಮದ್ ಆರಿಫ್ ಅವರಿಗೆ ಬ್ರ್ಯಾಂಡ್  ಮಂಗಳೂರು ಪ್ರಶಸ್ತಿ
ಪತ್ರಕರ್ತ ಮುಹಮ್ಮದ್ ಆರಿಫ್ ಅವರಿಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ
 ಗಡಿನಾಡು ಕಾಸರಗೋಡಿನ ಸಾಹಿತ್ತಿಕ, ಸಾಂಸ್ಕøತಿಕ ಶ್ರೀಮಂತಿಕೆ ಕನ್ನಡ ನಾಡಿಗೆ ಹೆಮ್ಮೆ ತಂದಿದೆ- ಕೋಟ ಶ್ರೀನಿವಾಸ ಪೂಜಾರಿ
ಗಡಿನಾಡು ಕಾಸರಗೋಡಿನ ಸಾಹಿತ್ತಿಕ, ಸಾಂಸ್ಕøತಿಕ ಶ್ರೀಮಂತಿಕೆ ಕನ್ನಡ ನಾಡಿಗೆ ಹೆಮ್ಮೆ ತಂದಿದೆ- ಕೋಟ ಶ್ರೀನಿವಾಸ ಪೂಜಾರಿ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ- ಕೆಎಸ್‍ಸಿಸಿ ವತಿಯಿಂದ ದುಬೈಯಲ್ಲಿ ಸಂಪನ್ನಗೊಂಡ ಯಶಸ್ವೀ ರಕ್ತದಾನ ಶಿಬಿರ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ- ಕೆಎಸ್‍ಸಿಸಿ ವತಿಯಿಂದ ದುಬೈಯಲ್ಲಿ ಸಂಪನ್ನಗೊಂಡ ಯಶಸ್ವೀ ರಕ್ತದಾನ ಶಿಬಿರ

Comment Here