Wednesday 20th, February 2019
canara news

ನಟನಾ ಪ್ರತಿಭಾನ್ವೇಷಣೆಗೆ ರಂಗಭೂಮಿಯೇ ಶಕ್ತಿವರ್ಧಕ-ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ

Published On : 10 Feb 2019   |  Reported By : Rons Bantwal


ಭವಾನಿ ಫೌಂಡೇಶನ್ ಪೆÇ್ರೀತ್ಸಹದ ಎಸ್‍ಎನ್‍ಎಸ್ ಕಾಲೇಜು ನವೀಕೃತ ವೇದಿಕೆ ಉದ್ಘಾಟನೆ

ಮುಂಬಯಿ, ಫೆ.05: ಕಲಾ ಪ್ರತಿಭೆಗಳ ಅನಾವರಣ ಮತ್ತು ನಟನಾ ಪ್ರತಿಭಾನ್ವೇಷಣೆಗೆ ಸೂಕ್ತವಾದ ರಂಗಮಂಟಪಗಳ ಅಗತ್ಯವಾಗಿವೆ. ಅನುಕೂಲಕರ ಮತ್ತು ಸುಸಜ್ಜಿತ ರಂಗವೇದಿಕೆಗಳಿದ್ದರೆ ಕಲಾವಿದರ ಕಲಾ ಪ್ರದರ್ಶನಕ್ಕೆ ಪ್ರೇರಕವಾಗಿವೆ. ಅತ್ಯಾಧುನಿಕ ವ್ಯವಸ್ಥೆಗಳುಳ್ಳ ವೇದಿಕೆಗಳಿಂದ ಕಲಾವಿದರ ಉಮೇದು ಇಮ್ಮಡಿಗೊಳ್ಳುವುದು. ಸೂಕ್ತ ವೇದಿಕೆಗಳಿಂದ ರಂಗಕ್ರಿಯೆಗಳು ಸರಾಗವಾಗಿ ನೆರವೇರಲು ಹಾಗೂ ಪ್ರತಿಭೆ ಅಭಿವ್ಯಕ್ತಗೊಳ್ಳಲು ಸಾಧ್ಯ ಎಂದು ಸಮಾಜ ಸೇವಕ ಮತ್ತು ಭವಾನಿ ಫೌಂಡೇಶನ್ ಮುಂಬಯಿ ಇದರ ಆಡಳಿತ ಮಂಡಳಿ ವಿಶ್ವಸ್ಥ ಸದಸ್ಯ ಚೆಲ್ಲಡ್ಕ ರಾಧಾಕೃಷ್ಣ ಡಿ.ಶೆಟ್ಟಿ ಎಂದು ತಿಳಿಸಿದರು.

ಬಜ್ಪೆ ಸುಂಕದಕಟ್ಟೆಯ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ಇದರ ರಜತ ಸಂಭ್ರಮದ ನೆನಪಿಗಾಗಿ ಕಾಲೇಜು ಮಂಡಳಿಯ ಬಿನ್ನಹ ಮೇರೆಗೆ ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ದೇರಣ್ಣ ಶೆಟ್ಟಿ ಮತ್ತು ವಿಶ್ವಸ್ಥ ಮಂಡಳಿಯ ಸುಮಾರು 1.35 ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್‍ನಿರ್ಮಿಸಿದ ನವೀಕೃತ ವೇದಿಕೆಯನ್ನು ಕಲಾಮಾತೆಗೆ ಸಮರ್ಪಿಸಿ ಎಸ್‍ಎನ್‍ಎಸ್ ಕಾಲೇಜು ಆಯೋಜಿಸಿದ್ದ ಮಂಗಳೂರು ವಿಶ್ವ ವಿದ್ಯಾಲಯ ಮಟ್ಟದ ಅಂತರ್‍ಕಾಲೇಜು ವೈವಿಧ್ಯಮಯ ಸ್ಪರ್ಧೆ `ಸಮೃದ್ಧಿ 2019'ರ ಉದ್ಘಾಟಿಸಿ ರಾಧಾಕೃಷ್ಣ ಶೆಟ್ಟಿ ಮಾತನಾಡಿದರು.

ಭವಾನಿ ಫೌಂಡೇಶನ್ ನಮ್ಮ ಸಂಸ್ಥೆಗಳಿಗೆ, ಕ್ಷೇತ್ರಕ್ಕೆ ಸಮರ್ಪಿಸಿರುವುದು ಶ್ಲಾಘನೀಯ. ಇದು ಭವಿಷ್ಯತ್ತಿನ ಸರ್ವ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ವರವಾಗಲಿ ಎಂದು ಕಾಲೇಜ್‍ನ ಅಭಿವೃದ್ಧಿ ಸಮಿತಿ ಖಜಾಂಚಿ ಹಾಗೂ ವೇದಿಕೆ ನಿರ್ಮಾಣದ ಸಮನ್ವಯಕರೂ, ಭವಾನಿ ಫೌಂಡೇಶನ್‍ನ ಆಡಳಿತ ಮಂಡಳಿ ಸದಸ್ಯ ಗೋಪಾಲಕೃಷ್ಣ ಕುಂದರ್ ಬಜ್ಪೆ ತಿಳಿದರು.

ಎಸ್‍ಎನ್‍ಎಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಎನ್.ಪೂಜಾರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲ್, ಕಾಲೇಜು ಅಭಿವೃದ್ಧಿ ಸಮಿತಿ ನಿಕಟ ಪೂರ್ವ ಖಜಾಂಚಿ ಹರೀಶ್ ಪೈ, ಹಳೆ ವಿದ್ಯಾಥಿರ್ü ಸಂಘದ ಅಧ್ಯಕ್ಷ ರಾಜೇಶ್ ಭಟ್, ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು, ಯುವವಾಹಿನಿ ಬಜ್ಪೆ ಘಟಕದ ನಿಕಟಪೂರ್ವ ಅಧ್ಯಕ್ಷ ದೇವರಾಜ ಅಮೀನ್, ಉಪಪ್ರಾಂಶುಪಾಲ ಗಣೇಶ್ ಬಿ.ಎಂ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಂಥಪಾಲಕ ವಿಶ್ವನಾಥ ಪೂಜಾರಿ ರೆಂಜಾಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜ್‍ನ ಪ್ರಾಂಶುಪಾಲೆ ಡಾ| ಲತಾ.ಕೆ ಕೃತಜ್ಞತಾಭಾವ ಸಲ್ಲಿಸಿದರು.
More News

  ಚಾರ್‍ಕೋಪ್ ಕನ್ನಡಿಗರ ಬಳಗದ ಕಾರಂತೋತ್ಸವ-ಸದಾನಂದ ಸುವರ್ಣ ದತ್ತಿ ಕಾರ್ಯಕ್ರಮ
ಚಾರ್‍ಕೋಪ್ ಕನ್ನಡಿಗರ ಬಳಗದ ಕಾರಂತೋತ್ಸವ-ಸದಾನಂದ ಸುವರ್ಣ ದತ್ತಿ ಕಾರ್ಯಕ್ರಮ
ಹವ್ಯಕ ವೆಲ್ಫೇರ್ ಟ್ರಸ್ಟ್‍ನಿಂದ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2019' ಪ್ರದಾನ
ಹವ್ಯಕ ವೆಲ್ಫೇರ್ ಟ್ರಸ್ಟ್‍ನಿಂದ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2019' ಪ್ರದಾನ
ಬಿಎಸ್‍ಕೆಬಿಎ ಸಂಸ್ಥೆಯಿಂದ ರಂಗೇರಿದ ಶಂಕರ್ ಮಹಾದೇವನ್ ಸಂಗೀತ ರಸಮಂಜರಿ
ಬಿಎಸ್‍ಕೆಬಿಎ ಸಂಸ್ಥೆಯಿಂದ ರಂಗೇರಿದ ಶಂಕರ್ ಮಹಾದೇವನ್ ಸಂಗೀತ ರಸಮಂಜರಿ

Comment Here