Saturday 25th, January 2020
canara news

ಫೆ.17: ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ 9ನೇ ವಾರ್ಷಿಕ ಸಮಾವೇಶ

Published On : 11 Feb 2019   |  Reported By : Rons Bantwal


ಗೋರೆಗಾಂವ್ ಕರ್ನಾಟಕ ಸಂಘಕ್ಕೆ-ಚಕ್ರಧಾರಿ ಪ್ರಶಸ್ತಿ ; ಶೇಖರ್ ಅಜೆಕಾರ್‍ಗೆ ಕೃಷಿ ಬಂಧು ಪುರಸ್ಕಾರ ಪ್ರದಾನ

ಮುಂಬಯಿ, ಫೆ.08: ಸಾಮಾಜಿಕ, ಸಾಹಿತಿಕ ಮತ್ತು ಕೃಷಿ ಇತ್ಯಾದಿ ಸೇವಎಗಳಲ್ಲಿ ತೊಡಗಿಸಿ ಕೊಂಡು, ಮುಂಬಯಿನ ಕನ್ನಡಿಗರ ದೇವಾಲಯಗಳ ಮಾಹಿತಿ ಕೋಶ, ಕನ್ನಡ ಶಾಲೆಯ ಸವಿ ನೆನಪುಗಳ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸಿದ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಐತಿಹಾಸಿಕ ಕಾರ್ಯದಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸಿದ್ದು, ಈ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ತನ್ನ 9ನೇ ವಾರ್ಷಿಕ ಸಮಾವೇಶವನ್ನು ಇದೇ ಫೆ.17ರ ಭಾನುವಾರ ಘಾಟ್ಕೋಪರ್ ಪಶ್ಚಿಮದ ಎನ್‍ಎಸ್‍ಎಸ್ ರಸ್ತೆಯ ಅಸಲ್ಫಾದ ಶ್ರೀ ಕ್ಷೇತ್ರದ ಶ್ರೀ ಗೀತಾಂಬಿಕಾ ಸಭಾಗೃಹದಲ್ಲಿ ಸಂಜೆ 3.00 ಗಂಟೆಗೆ ಆಯೋಜಿಸಿದೆ.

  

Vishwanath Dodmane              Devalkunda Bhaskar Shetty

   

Shekar Ajekar                Suresh S. Bhandary

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ ಎಸ್.ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜೆರಿಮೆರಿಯಲ್ಲಿನ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದ ಪ್ರಧಾನ ಆರ್ಚಕ ಶ್ರೀನಿವಾಸ ಎನ್.ಉಡುಪ, ಶ್ರೀ ಮೂಕಾಂಬಿಕಾ ಮಂದಿರ ಘನ್ಸೋಲಿ ಇದರ ಪ್ರಧಾನ ಆರ್ಚಕ ಗುರುಪ್ರಸಾದ್ ಭಟ್, ವಿ.ಎನ್ ಹೆಗಡೆ ಕಲ್ವಾ, ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ ಡೊಂಬಿವಿಲಿ ಸಂಚಾಲಕ ಪೆÇ್ರ| ವೆಂಕಟೇಶ ಪೈ, ಬಿ.ಬಿ ರಾವ್, ವಿಶ್ವನಾಥ್ ಶೆಟ್ಟಿ ಪೇತ್ರಿ ಅತಿಥಿüಗಳಾಗಿ ಆಗಮಿಸಲಿದ್ದಾರೆ.

ಸಮಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರ ಉಪಸ್ಥಿತಿಯಲ್ಲಿ ವಜ್ರಮಹೋತ್ಸವ ಸಂಭ್ರದಲ್ಲಿನ ಮುಂಬಯಿನ ಪ್ರತಿಷ್ಠಿತ ಕನ್ನಡಿಗರ ಕ್ರೀಯಶೀಲ ಸಂಸ್ಥೆಯಲ್ಲಿ ಒಂದಾದ ಗೋರೆಗಾಂವ್ ಕರ್ನಾಟಕ ಸಂಘಕ್ಕೆ `ಚಕ್ರಧಾರಿ ಪ್ರಶಸ್ತಿ' ಮತ್ತು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಧ್ಯಕ್ಷ ಶೇಖರ ಅಜೆಕಾರು ಇವರಿಗೆ ಪ್ರತಿಷ್ಠಾನದ ವಾರ್ಷಿಕ `ಕೃಷಿಬಂಧು' ಪುರಸ್ಕಾರ ಪ್ರದಾನಿಸಲಾಗುವುದು. ಹಾಗೂ ಇದೇ ಶುಭವಸರದಲ್ಲಿ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದ್ದು ಕಳೆದ ಐವತ್ತು ವರ್ಷಗಳಿಂದ ಪತ್ರಿಕಾ ವಿತರಣಾ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡ ಶ್ರೀಮತಿ ಲೀಲಾ ಸದಾನಂದ ಭಂಡಾರಿ ದಂಪತಿಗೆ, ಅತಿ ಚಿಕ್ಕ ವಯಸ್ಸಿನಲ್ಲಿ ವೇದಾಧ್ಯಯನದಲ್ಲಿ ಸಾಧನೆಗೈದ ವಿಘ್ನೇಶ ರಾಮಸ್ವಾಮಿ ಅವರನ್ನು ಗೌರವಿಸಲಾಗುವುದು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ದುರ್ಗಾಪ್ರಸಾದ್ ಖಾರ್‍ಘರ್ ಬಳಗದವರಿಂದ `ಚತುರ್ವೇದ ಪಾರಾಯಣ' ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮವಾಗಿ ಫ್ರೆಂಡ್ಸ್ ಸ್ವಾವಲಂಬನಾ ಕೇಂದ್ರ ಡೊಂಬಿವಲಿ ಇದರ ವಿದ್ಯಾಥಿರ್üಗಳಿಂದ ಭಜನಾ ಸಂಧ್ಯಾ ಕಾರ್ಯಕ್ರಮ, ವಿಷ್ಣು ಭಟ್ ಹೊಸ್ಮನೆ ಅತ್ರಾಡಿ ಬರೆದ ಕಥೆಯನ್ನಾಧರಿತ ವಿಶ್ವನಾಥ ದೊಡ್ಮನೆ ರಚಿಸಿರುವ `ಸೂರ್ಯಪ್ರಭೆ' ಪೌರಾಣಿಕ ನಾಟಕವನ್ನು ರಂಗ ಕಲಾವಿದ ಅಶೋಕ್ ಕುಮಾರ್ ಕೊಡ್ಯಡ್ಕ ಕಲಾವಿದರು ಪ್ರದರ್ಶಿಸಲಿದ್ದಾರೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಹಾನಗರದ ಎಲ್ಲಾ ಸಾಹಿತ್ಯ, ಕೃಷಿ, ಕಲಾಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಈ ಮೂಲಕ ವಿನಂತಿಸ್ಸಿದ್ದಾರೆ.

ಮಯೂರ ವರ್ಮ ಸಾಂಸ್ಕøತಿಕ ಪ್ರತಿಷ್ಠಾನ:
ಸುರೇಶ್ ಭಂಡಾರಿ ಕಡಂದಲೆ¬¬ ಅವರ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಷ್ಠಾನವು ಸಾಹಿತ್ಯಿಕ ಹಾಗೂ ಐತಿಹಾಸಿಕ ಕಾರ್ಯದಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸುವಲ್ಲಿ ಶ್ರಮಿಸಿದೆ. ಸಮಾಜ ಸೇವಾ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ವ್ಯಕ್ತಿ ಅಥವಾ ಸಂಸ್ಥೆಗೆ ಪ್ರತೀವರ್ಷ `ಚಕ್ರಧಾರಿ' ಪ್ರಶಸ್ತಿ ನೀಡುತ್ತ ಬಂದಿದೆ. ಈ ಹಿಂದೆ ಸಾವಯವ ಕೃಷಿಕ ಶಂಕರ ನಾರಾಯಣ ಹೆಗಡೆ, ವಿವೇಕಾನಂದ ಶಿಕ್ಷಣ ಸಂಸ್ಥೆ ಬನ್ನೂರ, ಶ್ರೀಮದ್ಭಾರತ ಮಂಡಳಿ, ಅಂಧೇರಿ, ನಾಗರಹಳ್ಳಿ ಪ್ರಹ್ಲಾದಾಚಾರ್ಯರ ಹಿರಿತನದ ಆನಂದ ವಿದ್ಯಾಲಯ ವಿರಾರ್, ಸಂಕಲ್ಪ ಸೇವಾ ಸಂಸ್ಥೆ ಯಲ್ಲಾಪುರ, ವಸಂತ ಕುಂಜಾರ ಅವರ ಸೇವಾ ಕೈಂಕರ್ಯದಿಂದ ಸ್ಥಾಪಿತವಾಗಿ ಅವರ ಆಡಳಿತದಲ್ಲಿರುವ ಗಿರಿಜಾ ಬಾಲಗ್ರಹ ಖಾರ್‍ಘರ್, ವೆಂಕಟೇಶ್ ಪೈ ಸ್ಥಾಪಿಸಿ ಅವರ ಸಂಚಾಲಕತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ, ಡೊಂಬಿವಲಿ ಇವರಿಗೆ ಈ ಹಿಂದಿನ ವರ್ಷಗಳಲ್ಲಿ ಚಕ್ರಧಾರಿ ಪ್ರಶಸ್ತಿ ನೀಡಿ ಗೌರವಿಸಿದೆ. ಅದೇ ರೀತಿ ಹಾಲು ನಾಯ್ಕ, ರಾಮಚಂದ್ರ ಹರಿಜನ, ಎಡ್ವರ್ಡ್ ರೆವೆಲ್ಲೋ, ತಾಕೋಡೆ, ಡಾ. ತಾಳ್ತಜೆ ವಸಂತ ಕುಮಾರ್ ಅವರಿಗೆ `ಕೃಷಿ ಬಂಧು' ಪುರಸ್ಕಾರ ಪ್ರದಾನಿಸಿ ಕೃಷಿ ಕಾಯಕದಲ್ಲಿ ತೊಡಗಿಸಿ ಕೊಂಡವರನ್ನು ಪೆÇ್ರೀತ್ಸಾಹಿಸಿದೆ.

ಗೋರೆಗಾಂವ್ ಕರ್ನಾಟಕ ಸಂಘ:
ಪ್ರಸಕ್ತ ಮುಂಬಯಿ ಹಾಗೂ ಉಪನಗರಗಳಲ್ಲಿನ ಅತ್ಯಂತ ಕ್ರಿಯಾಶೀಲ ಕನ್ನಡಿಗರ ಸಂಸ್ಥೆಗಳಲ್ಲೊಂದಾದ ಗೋರೆಗಾಂವ್ ಕರ್ನಾಟಕ ಸಂಘ ವಜ್ರ ಮಹೋತ್ಸವದ ಶುಭವಸರದಲ್ಲಿದೆ. ಸಂಘದ ಸಾಂಸ್ಕøತಿಕ, ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ ಚಟುವಟಿಕೆಗಳನ್ನು ಪ್ರಧಾನವಾಗಿರಿಸಿಕೊಂಡು 1958ರಲ್ಲಿ ಗೋರೆಗಾಂವ್ ಪರಿಸರದ ಪ್ರಾಮಾಣಿಕ ನಿಸ್ವಾರ್ಥ ಮನೋಭಾವವುಳ್ಳ ಕನ್ನಡಾಭಿಮಾನಿಗಳ ಪ್ರಯತ್ನದ ಫಲದಿಂದ ಮೂರೂರು ಸಂಜೀವ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಾಪನೆಯಾದ ಸಂಸ್ಥೆ ಗೋರೆಗಾಂವ್ ಕರ್ನಾಟಕ ಸಂಗ. ಗೋರೆಗಾಂವ್ ಕರ್ನಾಟಕ ಸಂಘದ ಅರುವತ್ತು ವರ್ಷಗಳ ಸಾಧನೆಯನ್ನು ಮನ್ನಿಸಿ ನಮ್ಮ ಪ್ರತಿಷ್ಠಾನವು ವಾರ್ಷಿಕ ಕೊಡ ಮಾಡುವ `ಚಕ್ರಧಾರಿ' ಪ್ರಶಸ್ತಿಗೆ ಆಯ್ಕೆ ನಡೆಸಿದೆ.

ಪತ್ರಕರ್ತ ಶೇಖರ್ ಅಜೆಕಾರ್:
ಪತ್ರಕರ್ತರಾಗಿ, ಸಂಘಟಕರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಲ್ಲದೆ ಪೆÇವಾೈ ಕನ್ನಡ ಸಂಘದ ಸ್ಥಾಪಕ ಸದಸ್ಯರಲ್ಲಿ ಓರ್ವರಾದ ಶ್ರೀಯುತರು ಪೆÇವಾೈ ಕನ್ನಡ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಸಾಹಿತ್ಯ ಪತ್ರಿಕೋದ್ಯಮ ಐತಿಹ್ಯ ಕೃತಿ ರಚನೆ ಎಂದೆಲ್ಲ ತನ್ನದೇ ಆದ ವಿಚಾರಧಾರೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಶೇಖರ್ ಅಜೆಕಾರ್ ಮಹಾನಗರದ ಎಲ್ಲ ಆಕರ್ಷಣೆಗಳಿಗೆ ಶುಭ ವಿದಾಯ ಹೇಳಿ ಹಿರಿಯರಿಂದ ಬಂದ ತನ್ನ ಅಲ್ಪ ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಯುವ ಸಮಾಜಕ್ಕೊಂದು ಆದರ್ಶ. ಶ್ರೀಯುತರ ಕೃಷಿ ಪ್ರೇಮ, ಕೃಷಿಯಲ್ಲಿನ ಆಸಕ್ತಿ ಹಾಗೂ ಅವರ ಗ್ರಾಮೀಣ ಸಂಸ್ಕøತಿಯ ಕಾಯಕವನ್ನು ಮನ್ನಿಸಿ ಪ್ರತಿಷ್ಠಾನ ವಾರ್ಷಿಕ ಕೊಡಮಾಡುವ `ಕೃಷಿಬಂಧು' ಪುರಸ್ಕಾರವನ್ನಿತ್ತು ಗೌರವಿಸುತ್ತಿದೆ.

 
More News

 ಹಿರಿಯ ಛಾಯಾಗ್ರಾಹಕ ಕಲಾವಿದ  ಪದ್ಮನಾಭ ರಾವ್ ಅವರು ಛಾಯಾಗ್ರಾಹಣದ ಬದುಕಿಗೆ ವಿರಾಮ.
ಹಿರಿಯ ಛಾಯಾಗ್ರಾಹಕ ಕಲಾವಿದ ಪದ್ಮನಾಭ ರಾವ್ ಅವರು ಛಾಯಾಗ್ರಾಹಣದ ಬದುಕಿಗೆ ವಿರಾಮ.
ಮುಂಬಯಿ ಪೆÇಯಿಸರ್‍ನ ಸಪ್ತಾಹ ಮೈದಾನದಲ್ಲಿ ರಂಗೇರಿದ ವಿಶ್ವ ತುಳು ಸಮ್ಮೇಳನ
ಮುಂಬಯಿ ಪೆÇಯಿಸರ್‍ನ ಸಪ್ತಾಹ ಮೈದಾನದಲ್ಲಿ ರಂಗೇರಿದ ವಿಶ್ವ ತುಳು ಸಮ್ಮೇಳನ
ಕುಮಾರ ಕ್ಷತ್ರಿಯ ಸಂಘ ಮುಂಬಯಿ ಸಂಸ್ಥ್ಥೆಯ ವಾರ್ಷಿಕ ಸ್ನೇಹಮಿಲನ
ಕುಮಾರ ಕ್ಷತ್ರಿಯ ಸಂಘ ಮುಂಬಯಿ ಸಂಸ್ಥ್ಥೆಯ ವಾರ್ಷಿಕ ಸ್ನೇಹಮಿಲನ

Comment Here