Monday 12th, May 2025
canara news

ಸೈಂಟ್ ಕ್ಸೇವಿಯರ್ಸ್ ಕಾಲೇಜ್ ಸಭಾಗೃಹದಲ್ಲಿ ಐಐಟಿಸಿ ಸಂಸ್ಥೆಯ ಪ್ರವಾಸೋದ್ಯಮ ವಿದ್ಯಾಥಿರ್ಗಳ ಘಟಿಕೋತ್ಸವ-ಪ್ರಮಾಣಪತ್ರ ಪ್ರದಾನ

Published On : 12 Feb 2019   |  Reported By : Rons Bantwal


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಫೆ.09: ವೃತ್ತಿಪರ ಶಿಕ್ಷಣ ಕ್ಷೇತ್ರದ ತುಳು-ಕನ್ನಡಿಗರ ರಾಷ್ಟ್ರದ ಪ್ರಸಿದ್ಧ ಸಂಸ್ಥೆ ಇಂಟರ್‍ನೇಶನಲ್ ಇನ್‍ಸ್ಟಿಟ್ಯೂಟ್ ಟ್ರೈನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ಪರ್ಯಾಟನೆ (ಟ್ರಾ ್ಯವೆಲ್), ಪ್ರವಾಸ (ಟೂರಿಸಂ) ಮತ್ತು ಸರಕು ಸಾಗಣಿಕೆ (ಕಾರ್ಗೊ) ವಿಭಾಗದ (ಐಎಟಿಎ-ಅಯಟಾ) ವಿದ್ಯಾಥಿರ್üಗಳ ಘಟಿಕೋತ್ಸವ ಸಮಾರಂಭ ಇಂದಿಲ್ಲಿ ಶನಿವಾರ ಮಹಾನಗರದ ಪೆÇೀರ್ಟ್ (ವಿಟಿ) ಅಲ್ಲಿನ ಸೈಂಟ್ ಕ್ಸೇವಿಯರ್ಸ್ ಕಾಲೇಜು ಸಭಾಗೃಹದಲ್ಲಿ ನೇರವೇರಿತು.

ಭವ್ಯವಾದ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಉಪಸ್ಥಿತರಿದ್ದ ಸೌತ್ ಏಷಿಯಾ ಐಎಟಿಎ (ಅಯಟಾ) ಪ್ರಾದೇಶಿಕ ತರಬೇತಿ ಅಭಿವೃದಿ ವಿಭಾಗದ ವ್ಯವಸ್ಥಾಪಕ ಲೊಕೇಶ್ ಮಟ್ಟ ಉಪಸ್ಥಿತರಿದ್ದರು. ಇದೇ ಶುಭಾವಸರದಲ್ಲಿ ಅಯಟಾ ವಿಭಾಗದ ಐಐಟಿಸಿ ಸಂಸ್ಥೆಯ ರಾಷ್ಟ್ರದಾದ್ಯಂತ ಶಾಖೆಗಳಿಂದ ಉತ್ತೀರ್ಣರಾದ ಒಟ್ಟು 280 ವಿದ್ಯಾಥಿರ್üಗಳಿಗೆ ಪ್ರಮಾಣಪತ್ರ (ಸರ್ಟಿಫಿಕೇಟ್) ಪ್ರದಾನಿಸಿ ಗೌರವಿಸಿದರು. ಆ ಪಯ್ಕಿ ಅತ್ಯುತ್ತಮ (ಡಿಸ್ಟಿಂಕ್‍ಶನ್) ಅಂಕಗಳೊಂದಿಗೆ ತೇರ್ಗಡೆಯಾದ 45 ವಿದ್ಯಾಥಿರ್üಗಳನ್ನು ವಿಶೇಷವಾಗಿ ಗೌರವಿಸಿ ಅಭಿನಂದಿಸಿದರು.

ತುಳು-ಕನ್ನಡಿಗ ಕರ್ನಾಟಾಕ ಕರಾವಳಿಯ ಬೆಳ್ತಂಗಡಿ ಮೂಲದ ಸಂಸ್ಥಾಪಕ ಎಸ್.ಕೆ ಉರ್ವಾಲ್ ಅವರ ದೂರದೃಷ್ಠಿತ್ವದ ಸಂಸ್ಥೆ ಐಐಟಿಸಿ ಗ್ಲೋಬಲ್ ಕರಿಯರ್ಸ್ ಪ್ರತಿಸಿದ್ಧಿಯ ಐಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಲ್ ಪ್ರಸ್ತಾವನೆಗೈದÀು ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ಪ್ರಾಧ್ಯಾಪಕರಾದ ಗುರ್ಜಿತ್ ಸಿಂಗ್, ಉರ್ಮಿ ಪಾಟೇಲ್, ಪ್ರಿಯಾಂಕ ಡಿಸೋಜಾ, ವಂದನ ಜೈನ್, ದಿವ್ಯ ಲಕುರ್, ಅಮೃತ ಕವಡೆ, ವಿಜಯ ಮೆನನ್, ಗಂಗಾಧರ್ ಪೂಜಾರಿ, ಸಂಜಯ್ ಮಿಸ್ತ್ರಿ ಉಪಸ್ಥಿತರಿದ್ದು ಫಾಲ್ಗುಣಿ ಮಿರಾಣಿ ಧನ್ಯವದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here