Friday 19th, April 2024
canara news

ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮ ಕಲಶೋತ್ಸವ

Published On : 15 Feb 2019   |  Reported By : Rons Bantwal


ಮುಂಡ್ಕೂರು ದೇವಿಗೆ ದುರ್ಗತಿನಾಶಿನಿ ಎಂಬ ನಾಮವಿದೆ: ಪೇಜಾವರಶ್ರೀ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಫೆ.13: ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಳೆದ ಸೋಮವಾರ (ಫೆ.11) ಸಾವಿರಾರು ಸದ್ಭಕ್ತರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಷ್ಠಬಂಧ ಬ್ರಹ್ಮಕಲಶೋತ್ಸವ ಆಚರಿಸಲಾಯಿತು.

ಉಡುಪಿ ಪೇಜಾವರಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಪುತ್ತಿಗೆಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಾಣಿಯೂರುಶ್ರೀ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಇವರುಗಳ ದಿವ್ಯೋಪಸ್ಥಿತಿಯಲ್ಲಿ ಜರುಗಿಸಲ್ಪಟ್ಟ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಎಂಆರ್‍ಜಿ ಗ್ರೂಫ್ ಬೆಂಗಳೂರು ಕಾರ್ಯಾಧ್ಯಕ್ಷ ಮತ್ತು ಮುಂಬಯಿ ಉದ್ಯಮಿ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ, ವೇ| ಮೂ| ಅನಂತ ಕೃಷ್ಣ ಆಚಾರ್ಯ ಮುಂಡ್ಕೂರು, ಮುಂಡ್ಕೂರು ದೊಡ್ಡಮನೆ ಸೀತಾರಾಮ ಶೆಟ್ಟಿ, ಮುಂಡ್ಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಾಂತ್ರಾಲಗುತ್ತು ಎಂ.ವಾದಿರಾಜ ಶೆಟ್ಟಿ, ಬ್ರಹ್ಮ ಕಲಶೋತ್ಸವ ಸಮಿತಿ ಮುಂಬಯಿ ಇದರ ಗೌರವ ಅಧ್ಯಕ್ಷ ಎಂ.ಜಿ ಕರ್ಕೇರ, ನಿವೃತ್ತ ಕಸ್ಟಮ್ಸ್ ಅಧಿಕಾರಿ ಎರ್ಮಾಳ್ ರೋಹಿತ್ ಹೆಗ್ಡೆ, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮುಂಡ್ಕೂರು ವಿದ್ಯಾವರ್ಧಕ ಹಳೆ ವಿದ್ಯಾಥಿರ್s ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಳೆಪಾಡಿ, ಮುಂಡ್ಕೂರು ಎಜ್ಯುಕೇಶನ್ ಆ್ಯಂಡ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್‍ನ ಅಧ್ಯಕ್ಷ ಪ್ರಸಾದ್ ಎಂ.ಶೆಟ್ಟಿ ಅಂಗಡಿಗುತ್ತು, ಆ್ಯಡ್‍ರೋಹಿಟ್ ಕೋರೊಗ್ರೇಟರ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ರಾಜೇಂದ್ರ ಶೆಟ್ಟಿ, ಸಮಾಜ ಸೇವಕ ಮುನಿಯಲು ಉದಯಕುಮಾರ್ ಶೆಟ್ಟಿ ಮತ್ತು ಮುಂಬಯಿ ಸಮಿತಿ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿs ಗಣ್ಯರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಬ್ರಹ್ಮ ಕಲಶೋತ್ಸವಕ್ಕೆ ಸಹಕರಿಸಿದ ದಾನಿಗಳನ್ನು ಸ್ಮರಣಿಕೆ, ಪುಷ್ಪಗುಚ್ಛ ನೀಡಿ ಗೌರವಿಸಿದರು.

ಈ ಕ್ಷೇತ್ರಕ್ಕೆ ನಾನು ಅನೇಕ ಬಾರಿ ಆಗಮಿಸಿದ್ದೇನೆ. ಈ ಕ್ಷೇತ್ರದ ಮಹಿಮೆ ಆಗಾಧವಾದುದು. ಈ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಮುಂಡ್ಕೂರು ದೇವಿಗೆ ದುರ್ಗತಿ ನಾಶಿನಿ ಎಂದೂ ಕರೆಯುತ್ತಾರೆ. ಈ ದುರ್ಗಾ ದೇವಿಯ ಅನುಗ್ರುಅಹ ಸದಾ ನಿಮ್ಮೊಡನೆ ಇರಲಿ ಮತ್ತು ದೇವಿ ಆರಾದಕರಿಗೆ ಶ್ರೀರಕ್ಷೆ ನೀಡಲಿ ಎಂದು ವಿಶ್ವೇಶ ತೀರ್ಥರು ಆಶೀರ್ವಚನ ನೀಡಿದರು.

ವಿದ್ಯಾವಲ್ಲಭ ತೀರ್ಥರು ಅನುಗ್ರಹಿಸಿ ತುಳುನಾಡಿನ ಯಾವುದೇ ದೇವಸ್ಥಾನಗಳಿಗೆ ಬಂಟ ಸಮುದಾಯದ ಕೊಡಿಗೆ ಅಪಾರವಿದೆ. ಅದ್ದರಿಂದಲೇ ನಮ್ಮ ತುಳುನಾಡಿನಲ್ಲಿ ಅಲ್ಲಲ್ಲಿ ದೇವಸ್ಥಾನಗಳು ರಾರಾಜಿಸುತ್ತಿವೆ. ದೇವರನ್ನು ದೃಢವಾಗಿ ನಂಬಿದವರಿಗೆ ಎಂದೂ ಕಷ್ಟಕಾರ್ಪಣ್ಯಗಳು ಬರುವುದಿಲ್ಲ. ದೇವರು ಮತ್ತು ದುರ್ಗಾ ಮಾತೆ ತಮ್ಮೆಲ್ಲರನ್ನು ಸದಾ ಶ್ರದ್ಧಾಭಕ್ತಿಯಿಂದ ಮುನ್ನಡೆಸಿ ಎಲ್ಲರ ಬಾಳನ್ನು ಮಂಗಲದಾಯಕ ಆಗಿಸಲಿ ಎಂದರು.

ನಮ್ಮ ತುಳುನಾಡಿನಲ್ಲಿ ತ್ಯಾಗಮಯಿಯಾದ ತಾಯಿಗೆ ವಿಶೇಷ ಮಹತ್ವವಿದೆ. ಮಗುವಿಗೆ ತಂದೆ ಯಾರೆಂದು ತಿಳಿಸುವವಳು ತಾಯಿ. ನಾಡಿನ ಎಲ್ಲಾ ನದಿಗಳಿಗೂ ಸ್ತ್ರೀಯರ ಹೆಸರುಗಳಿಂದ ಕರೆಸಲ್ಪಡುತ್ತವೆÉ. ರಾಷ್ಟ್ರಗೀತೆಯಲ್ಲೂ ವಂದೇ ಮಾತರಂ ಮತ್ತು ಭಾರತ ಮಾತಾ ಕೀ ಜೈ ಎಂದು ಹೇಳುತ್ತೇವೆ. ಧರ್ಮೋ ರಕ್ಷಿತಿ: ರಕ್ಷಿತ: ಎಂಬಂತೆ ನಾವೂ ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಸ್ತ್ರೀ ಪ್ರಧಾನ ದುರ್ಗೆಯ ಕೃಪೆ ಎಲ್ಲರಿಗೂ ಇರಲಿ ಎಂದು ಡಾ| ಪ್ರಭಾಕರ ಭಟ್ ಆಶಯ ವ್ಯಕ್ತಪಡಿಸಿದರು.

ಪ್ರಕಾಶ್ ಶೆಟ್ಟಿ ಮಾತನಾಡಿ ಬಾಲ್ಯದಲ್ಲಿ ನಾವು ಮುಂಬಯಿಗೆ ಹೋಗುವಾಗ ನಿಮಗೆ ದೇವರ ಅನುಗ್ರಹ ಸದಾ ಇರಲಿ ಎಂದು ಮಾತಾಪಿತರು, ಮನೆಮಂದಿಯರು ನಮಗೆ ಹರಸಿ ಕಳುಹಿಸುತ್ತಾರೆ. ಅದರಂತೆ ನಾವೂ ಒಳ್ಳೆಯದಾಗಿ ಗಳಿಕೆಯ ಕೆಲವಂಶವನ್ನು ನಮ್ಮ ನಾಡಿಗೆ ನೀಡಿದಾಗಲೇ ನಮ್ಮ ಜನ್ಮ ಸಾರ್ಥಕವಾಗುತ್ತದೆ. ಪ್ರತೀಯೋರ್ವರಿಗೂ ತಾವು ಹುಟ್ಟಿದ ಮಣ್ಣಿನ ಋಣ ಇದೆ. ಅದನ್ನು ತೀರಿಸುವ ಕರ್ತವ್ಯ ನಮ್ಮದು. ದೇವಿಯ ಪ್ರೇರಣೆ, ಕೃಪಾಶೀರ್ವಾದದಿಂದ ಸನ್ಮಾರ್ಗ, ಸನ್ನಡತೆ, ಸತ್‍ಕೀರ್ತಿಯನ್ನು ನಾವೂ ಪಡೆದಿದ್ದೇವೆ. ತಂದೆ ತಾಯಿಯನ್ನು ಮತ್ತು ದೇವರನ್ನು ಪೂಜಿಸಿದವರು ಎಂದು ಹಾಳಾಗಿಲ್ಲ ಎಂದು ನುಡಿದರು.

ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಮಾತನಾಡಿ ಅನಿರೀಕ್ಷೀತವಾಗಿ ದೇವರ ಸೇವೆ ಮಾಡುವ ಭಾಗ್ಯ ನನ್ನ ಪಾಲಿಗೆ ಒದಗಿದೆ. ಇದನ್ನು ತಲೆಬಾಗಿಸಿ ಸ್ವೀಕರಿಸಿ ನನ್ನಿಂದಾದಷ್ಟು ಉತ್ತಮ ರೀತಿಯಲ್ಲಿ ನಿಭಾಯಿಸಿದ ತೃಪ್ತಿ ನನಗಿದೆ. ಅಷ್ಠಬಂಧ ಬ್ರಹ್ಮ ಕಲಶೋತ್ಸವದ ಪುಣ್ಯಪ್ರದ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಮುಂಬಯಿ ಸಮಿತಿ ಚಿರಋಣಿಯಾಗಿದೆ. ದುರ್ಗಾ ಪರಮೇಶ್ವರಿ ದೇವಿಯ ಕೃಪಾಕಟಾಕ್ಷ ಎಲ್ಲರಿಗಿರಲಿ ಎಂದರು.

ಬ್ರಹ್ಮಕಲಶೋತ್ಸವದ ಪ್ರಧಾನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು ಮುಂಬಯಿ ಸಮಿತಿ ಗೌರವಾಧ್ಯಕ್ಷ ಎಂ.ಜಿ ಕರ್ಕೇರ ಸ್ವಾಗತಿಸಿ ದರು. ಬಾಲಕೃಷ್ಣ ಶೆಟ್ಟಿ ಪ್ರಸ್ತಾವಿಕ ಭಾಷಣಗೈದರು. ಸಾಯಿನಾಥ್ ಶೆಟ್ಟಿ ಮತ್ತು ಅರುಣ್ ಕುಮಾರ್ ಭಟ್ ಸಭಾ ಕಾರ್ಯಕ್ರಮ ನಿರೂಪಿಸಿದರು. ಮುಂಬಯಿ ಸಮಿತಿ ಕಾರ್ಯದರ್ಶಿ ಸದಾಶಿವ ತಾಡ್ಯಾರು ವಂದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here