Friday 29th, March 2024
canara news

ಮಾ.04: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವ

Published On : 16 Feb 2019   |  Reported By : Rons Bantwal


ಮುಂಬಯಿ, ಫೆ.14: ಉಡುಪಿ ಜಿಲ್ಲೆಯ ಬಾರಕೂರು ಇಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವವನ್ನು ಇದೇ ಬರುವ ಮಾ.04ನೇ ಸೋಮವಾರ ವಿಜೃಂಭಣೆಯಿಂದ ಆಚರಿಸಲಾ ಗುವುದು. ಈ ವರ್ಷ ಶಿವರಾತ್ರಿ ಸೋಮವಾರವೇ ಬಂದಿರುವುದು ವಿಶೇಷ. ಇಂತಹ ಪವಿತ್ರ ದಿನದಲ್ಲಿ ಶಿವನ ಆರಾಧನೆ,ಜಾಗರಣೆ, ಪೂಜೆ ಮಾಡಿದ್ದಲ್ಲಿ ಹನ್ನೆರಡು ಜನ್ಮದ ಪಾಪ ಪರಿಹಾರ ಆಗುವುದೆಂದು ದೈವಜ್ಞರು ಹೇಳುತ್ತಾರೆ.

ಶಿವರಾತ್ರಿಯಂದು ಮಧ್ಯಾಹ್ನ ನಡೆಯುವ ಶತ ರುದ್ರಾಭಿಷೇಕ ಮತ್ತು ಮಹಾ ಅನ್ನ ಸಂತರ್ಪಣೆ ಅಲ್ಲದೆ ಶಿವರಾತ್ರಿ ದಿನ ಬೆಳಿಗ್ಗೆ 6.00 ಗಂಟೆಯಿಂದ ಪ್ರಾರಂಭವಾಗುವ ಭಜನೆ ಅಹೋ ದಿನ-ರಾತ್ರಿ ನಡೆದು ಮಾರನೆಯ ದಿನ ಪ್ರಾತ ಕಾಲದವರೆಗೆ ನಡೆದು ಮಂಗಲ ಭಜನೆ ಯೊಂದಿಗೆ ಮುಕ್ತಾಯವಾಗಲಿದೆ. ಭಜನೆ ಮಧ್ಯದಲ್ಲಿ ರಾತ್ರಿ 8.30 ರಿಂದ 10.30 ಗಂಟೆಯವರೆಗೆ ಪ್ರಖ್ಯಾತ ಹರಿಕತೆ ದಾಸರಿಂದ ಹರಿಕಥೆ ನಡೆಯಲಿದೆ.

ಶಿವರಾತ್ರಿಯಂದು ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮಹಾ ಪ್ರಾಸಾದ,ಸಂಜೆ ಲಘು ಉಪಹಾರ ಕಾಫಿ, ಚಾ ಮತ್ತು ರಾತ್ರಿ 7.00 ರ ನಂತರ ನಿರಂತರ ಫಲಹಾರ, ಲಘು ಉಪಹಾರ, ಪಾನಕ , ಟೀ, ಮತ್ತು ಕಾಫಿ ವ್ಯವಸ್ಥೆ ಮಾಡಲಾಗುವುದು. ಬೆಳಿಗ್ಗೆ ಮಂಗಲ ಭಜನೆಯೊಂದಿಗೆ ಶ್ರೀ ದೇವರಿಗೆ ವಿಶೇಷ ಪೂಜೆಯ ನಂತರ ಗಂಧ-ಪ್ರಸಾದ ವಿತರಿಸಲಾಗುವುದು. ಬೆಳಗ್ಗಿನ ಉಪಹಾರ ಸ್ವೀಕರಿಸಿ ಹಿಂತಿರುಗಬಹುದು.

ಆದುದರಿಂದ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆ ಯಲ್ಲಿ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಬಂದು ಶ್ರೀ ದೇವರ ಆರಾಧನೆ, ಭಜನೆ, ಜಾಗರಣೆ ಮತ್ತು ಪೂಜೆಯಲ್ಲಿ ಬಾಗವಹಿಸಿ ದೇವರ ಗಂಧ- ಪ್ರಸಾದ ಸ್ವೀಕರಿಸಿ ಶ್ರೀ ನಾಗೇಶ್ವರ ದೇವರ ಕೃಪೆಗೆ ಪಾತ್ರರಾಗಲು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರಕೂರು ಇದರ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಪ್ರದಾನ ಕಾರ್ಯದರ್ಶಿ ಸೋಮಶೇಖರ ಎಸ್.ಭಂಡಾರಿ ಹಾಗೂ ಭಂಡಾರಿ ಮಹಾ ಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಪ್ರಧಾನ ಕಾರ್ಯದರ್ಶಿ ಯು.ಸತೀಶ್ ಭಂಡಾರಿ ಮತ್ತು ಉಭಯ ಸಂಸ್ಥೆಗಳ ಪದಾಧಿಕಾರಿಗಳು ಈ ಮೂಲಕ ವಿನಂತಿಸಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here