Friday 19th, April 2024
canara news

ಸೇವ್ ಸುವರ್ಣ ತ್ರಿಭುಜ ನಾಪತ್ತೆಯಾದ ಮೀನುಗಾರರ ಪತ್ತೆಗೆ ಉಳ್ಳಾಲ ಪತ್ರಕರ್ತರ ಜಾಗೃತಿ

Published On : 16 Feb 2019   |  Reported By : Rons Bantwal


ಉಳ್ಳಾಲ: ಮಲ್ಪೆ ಬಂದರಿನಿಂದ ಹೊರಟು 64 ದಿನಗಳಾದರೂ ಪತ್ತೆಯಾಗದ ಏಳು ಮಂದಿ ಮೀನುಗಾರರು ಇದ್ದ ಸುವರ್ಣ ತ್ರಿಭುಜ ಬೋಟಿನ ನಿಖರತೆಯನ್ನು ತನಿಖೆ ಕೈಗೆತ್ತಿಕೊಂಡಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ಅಧೀನದ ತಂಡಗಳು ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ನೀಡುವಂತೆ ಕಡಲತೀರ ಉಳ್ಳಾಲದ ಪತ್ರಕರ್ತರ ತಂಡ ಪಣಂಬೂರು ಸಮುದ್ರ ತೀರದಲ್ಲಿ ದೋಣಿ ಮತ್ತು ಮತ್ಸ್ಯದ ಮರಳು ಕಲಾಕೃತಿ ರಚಿಸುವ ಮೂಲಕ ಜಾಗೃತಿ ಮೂಡಿಸಿದರು.

`ಸೇವ್ ಸುವರ್ಣ ತ್ರಿಭುಜ' ಅನ್ನುವ ಸಂದೇಶದ ಜೊತೆಗೆ ಎರಡು ಮತ್ಸ್ಯದ ಆಕಾರಗಳ ಒಳಗೆ ಇಬ್ಬರು ಮಲಗಿರುವ ಸ್ಥಿತಿಯಲ್ಲಿ ಮರಳು ಶಿಲ್ಪವನ್ನು ರಚಿಸಲಾಗಿತ್ತು. ಘಟನೆ ನಡೆದ ಸಂದರ್ಭದಲ್ಲಿ ಪ್ರಕರಣವನ್ನು ಸರಕಾರಗಳು ಲಘುವಾಗಿ ಪಡೆದುಕೊಂಡಿತ್ತು. ಬಳಿಕ ಮೀನುಗಾರರ ಬೃಹತ್ ಹೋರಾಟದ ಪರಿಣಾಮವಾಗಿ ಸರಕಾರ ಜಾಗೃತವಾಗಿ ತನಿಖಾ ತಂಡಗಳನ್ನು ರಚಿಸಿ ಮೀನುಗಾರರ ಮತ್ತು ಬೋಟಿನ ಶೋಧ ಕಾರ್ಯ ನಡೆಸಲು ಆರಂಭಿಸಿತ್ತು. ಕೇಂದ್ರ ಸರಕಾರವೂ ಇತ್ತೀಚೆಗೆ ಆಧುನಿಕ ತಂತ್ರಜ್ಞಾನವುಳ್ಳ ನೌಕಾಸೇನೆಯ ಹಡಗಿನ ಮೂಲಕ ಶೋಧ ಕಾರ್ಯ ಆರಂಭಿಸಿದೆ. ಈ ನಡುವೆ ಮಹಾರಾಷ್ಟ್ರ ರತ್ನಗಿರಿ ಸಹಿತ ವಿವಿದೆಡೆ ಪತ್ತೆಯಾಗಿದೆ ಅನ್ನುವ ಸುದ್ಧಿಗಳು ವ್ಯಾಪಕವಾಗಿ ಹರಡಿತ್ತು. ಇದರಿಂದ ಮೀನುಗಾರರ ಕುಟುಂಬದವರು ಗೊಂದಲ ಮತ್ತು ಹೆಚ್ಚು ಆತಂಕಕ್ಕೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಿಟ್ಟಿನಲ್ಲಿ ಅತಿಶೀಘ್ರವಾಗಿ ತನಿಖಾ ತಂಡಗಳು ಬೋಟು ಮತ್ತು ಮೀನುಗಾರರು ಸುರಕ್ಷಿತವಾಗಿ ಪತ್ತೆಹಚ್ಚುವಂತೆಯೂ, ಗೊಂದಲಗಳಿಗೆ ತೆರೆ ಎಳೆಯುವಂತೆ ಉಳ್ಳಾಲದ ಪತ್ರಕರ್ತರ ಆರು ಜನರ ತಂಡ ಮರಳು ಕಲಾಕೃತಿ ರಚಿಸುವ ಮೂಲಕ ಜಾಗೃತಿ ಮೂಡಿಸಿತು.

ತಂಡದಲ್ಲಿ ವರದಿಗಾರರುಗಳಾದ ವಿಜಯಕರ್ನಾಟಕದ ಸತೀಶ್ ಪುಂಡಿಕಾಯಿ, ವಿ4 ನ ಆರೀಫ್ ಕಲ್ಕಟ್ಟ, ಪ್ರಜಾವಾಣಿ, ದಾಯ್ಜಿವಲ್ರ್ಡ್‍ನ ಮೋಹನ್ ಕುತ್ತಾರ್, ಸ್ಪಂಧನ ದ ಅಶ್ವಿನ್ ಕುತ್ತಾರ್, ಅಬ್ಬಕ್ಕ ಛಾನೆಲ್‍ನ ತೇಜೇಶ್ ಗಟ್ಟಿ , ಪೊಸಕುರಲ್‍ನ ಶಿವಶಂಕರ್ ಇದ್ದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here