Thursday 18th, April 2024
canara news

ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ದತ್ತಿ ಉಪನ್ಯಾಸ- ಕೃತಿ ಬಿಡುಗಡೆ

Published On : 18 Feb 2019   |  Reported By : Rons Bantwal


ಭಾರವಾದ ಭಾವನೆಗಳಿಂದ ಹೊರ ಬರಲು ಕಥೆಗಳ ಪಾತ್ರ ಮುಖ್ಯ : ನಾಗತಿಹಳ್ಳಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.16: ಮುಂಬಯಿಗೆ ನನ್ನ ನಂಟು ಬಹಳ ಹಳೆಯದು. ಮುಂಬಯಿಯ ಜೊತೆಗೆ ಸ್ಥಾಯಾಗಿ ಇಟ್ಟು ಕೊಂಡಿದ್ದೇನೆ. ಸಣ್ಣ ಕಥೆಗಳು ನನ್ನ ವ್ಯಕ್ತಿತ್ವವನ್ನು ರೂಪಿಸಿದೆ. ಬದುಕನ್ನು ಭಿನ್ನವಾಗಿ ನೋಡಲು ಕಲಿಸಿದೆ. ಒಬ್ಬ ಮನುಷ್ಯನ ಅಂತಕರಣವನ್ನು ಸೂಕ್ಷ್ಮಗೊಳಿಸಲು ಕಥೆಗಳು ತುಂಬಾ ಸಹಾಯಕವೆನಿಸುತ್ತದೆ. ನಮ್ಮ ಭಾರವಾದ ಭಾವನೆಗಳಿಂದ ಹೊರ ಬರಲು ಕಥೆಗಳು ನಮಗೆ ಮುಖ್ಯವಾಗಿ ಕಾಣುತ್ತೀವೆ ಯಾವ ಧರ್ಮಗಳು ಹೇಳಿಕೊಡದಂತಹ ನೀತಿ ಪಾಠಗಳನ್ನು ಸಾಹಿತ್ಯ ನಮಗೆ ಹೇಳಿಕೊಡುತ್ತದೆ. ಸೃಜನಶೀಲ ಮನಸ್ಸು ಹೊಂದಿದ ಕಲಾವಿದ ಯಾವ ಕ್ಷೇತ್ರವನ್ನು ಆಯ್ದುಕೊಂಡರು ತಾವೂ ಆಯ್ದುಕೊಂಡ ಕ್ಷೇತ್ರದ ಆಳವಾದ ಅಧ್ಯಯನ ಮಾಡಬೇಕು. ಭಾರತದ ಆತ್ಮಗಳು ನಮ್ಮ ಹಳ್ಳಿಗಳು. ಇಂದು ಹಳ್ಳಿಗಳು ತುಂಬಾ ಗಾಯಗೊಂಡಿವೆ. ಎಲ್ಲಾ ಮಹಾನಗರಗಳು ವಿಸ್ತಾರಗೊಳ್ಳುತ್ತಿರುವುದು ನಮ್ಮ ಹಳ್ಳಿಗಳನ್ನು ನುಂಗಿದ್ದು ನಮ್ಮ ದೊಡ್ಡ ದುರಂತ ಎಂದು ಪ್ರಸಿದ್ಧ ಸಾಹಿತಿ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಮೈಸೂರು ಅಸೋಸಿಯೇಶನ್ ಮುಂಬಯಿ ಮತ್ತು ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗ ಜೊತೆಗೂಡಿ ವಾರ್ಷಿಕವಾಗಿ ನಡೆಸಲ್ಪಡುವ ಮೈಸೂರು ಅಸೋಸಿಯೇಶನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸದಲ್ಲಿ `ನಾನು, ನನ್ನ ಸಮಕಾಲೀನರು ಮತ್ತು ನನ್ನ ಸಾಹಿತ್ಯ' ವಿಷಯವಾಗಿಸಿ ನಾಗತಿಹಳ್ಳಿ ಮಾತನಾಡಿದರು.

ಮೈಸೂರು ಅಸೋಸಿಯೇಶನ್‍ನ ಅಧ್ಯಕ್ಷೆ ಕಮಲಾ ಕಾಂತರಾಜ್, ಕಾರ್ಯದರ್ಶಿ ಡಾ| ಗಣಪತಿ ಎಸ್.ಶಂಕರಲಿಂಗ, ಜಯ ಸಿ.ಸಾಲ್ಯಾನ್, ಕೆ.ಉಷಾಮೂರ್ತಿ ವೇದಿಕೆಯಲ್ಲಿದ್ದು ಡಾ| ಲೀಲಾ ಬಿ.ಜೋಯಿಸ್ ಸಂಪಾದಿತ ಅಭಿಜಿತ್ ಪ್ರಕಾಶನ ಮುಂಬಯಿ ಪ್ರಕಾಶಿತ `ಪತ್ರಿಕೋದ್ಯಮದ ಮೇರು ಪ್ರತಿಭೆ ಆರ್.ವಿ ಮೂರ್ತಿ' ಕೃತಿಯನ್ನು ನಾಗತಿಹಳ್ಳಿ ಬಿಡುಗಡೆ ಗೊಳಿಸಿದರು. ಹಿರಿಯ ನಾಟಕಕಾರ ಡಾ| ಬಿ.ಆರ್ ಮಂಜುನಾಥ್ ಕೃತಿ ಪರಿಚಯಿಸಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವಿಕ ನುಡಿಗಳನ್ನಾಡಿ ಯುವ ಕಲಾವಿದರನ್ನು ಪೆÇ್ರೀತ್ಸಾಹಿಸುವ ಕೆಲಸವನ್ನು ಕನ್ನಡ ವಿಭಾಗ ಮಾಡುತ್ತಿದೆ. ಇಂದು ಚಿತ್ರಕಲೆಯ ಪ್ರದರ್ಶನ ನೇರವೇರಿಸಿದ ಯುವ ಕಲಾವಿದ ಜಯ ಸಾಲ್ಯಾನ್ ಅವರು ತುಂಬಾ ಅದ್ಭುತ ಚಿತ್ರಗಳನ್ನು ನಮ್ಮ ಕ್ಯಾಂಪಸ್‍ನಲ್ಲಿ ಸುಂದರವಾಗಿ ಬಿಡಿಸಿದ್ದಾರೆ. ಅವರ ಬಣ್ಣ ಬಣ್ಣದ ಚಿತ್ರಗಳ ಚಿತ್ತಾರ ಕಣ್ಣಿಗೆ ಹಬ್ಬವುಂಟು ಮಾಡಿದೆ. ನಾಡಿನ ಬಹುಮುಖ ಪ್ರತಿಭೆವುಳ್ಳ ನಾಗತೀಹಳ್ಳಿ ಚಂದ್ರಶೇಖರ ಅವರು ಇಂದು ನಮ್ಮ ಕಾರ್ಯಕ್ರಮಕ್ಕೆ ಉಪನ್ಯಾಸ ನೀಡಲು ಬಂದಿರುವುದು ನಮ್ಮೆಲ್ಲರ ಭಾಗ್ಯ. ನಾಗತೀಹಳ್ಳಿ ಅವರ ನಡೆನುಡಿ ನಾಡಿಗೆ ಮಾದರಿ ಎಂದರು.

ಇದೇ ಶುಭಾವಸರದಲ್ಲಿ ಹೆಸರಾಂತ ಚಿತ್ರ ಕಲಾವಿದ ಜಯ ಸಿ.ಸಾಲ್ಯಾನ್ ಅವರ ಚಿತ್ರ ಪ್ರದರ್ಶನ ನಡೆದಿದ್ದು, ಕೆ. ಮಂಜುನಾಥಯ್ಯ ಉದ್ಘಾಟಿಸಿದರು.

ಡಾ| ಸುನೀತಾ ಎಂ.ಶೆಟ್ಟಿ, ಡಾ| ಭರತ್ ಕುಮಾರ್ ಪೆÇಲಿಪು, ಓಂದಾಸ್ ಕಣ್ಣಂಗಾರ್, ಡಾ| ಮಮತಾ ರಾವ್, ಸೋಮನಾಥ ಕರ್ಕೇರಾ, ದೇವದಾಸ್ ಶೆಟ್ಟಿ, ಜಿ.ಎನ್ ನಾಯಕ್, ಶ್ಯಾಮಲಾ ಮಾಧವ್, ಡಾ| ಈಶ್ವರ್ ಅಲೆವೂರು, ಹರೀಶ್ ಹೆಜ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆದಿಯಲ್ಲಿ ಪುಲ್ವಾಮ ವಿಧ್ವಂಸಕ ದಾಳಿಗೆ ಬಲಿಯಾದ ರಾಷ್ಟ್ರದ ಸೈನಿಕರಿಗೆ ಸಂತಾಪ ಸೂಚಿಸಲಾಯಿತು. ವಿಧುಷಿ ಶ್ಯಾಮಲಾ ಪ್ರಕಾಶ್ ಸ್ವಾಗತ ಗೀತೆಯನ್ನಾಡಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಡಾ| ಗಣಪತಿ ಎಸ್. ಶಂಕರಲಿಂಗ ವಂದನಾರ್ಪಣೆಗೈದರು.

ಇಂದು (ಫೆ.17) ಭಾನುವಾರ ಪೂರ್ವಾಹ್ನ 11.30 ಗಂಟೆಗೆ ಇದೇ ಸಭಾಗೃಹದಲ್ಲಿ ನಾಗತಿಹಳ್ಳಿ ಚಂದ್ರಶೇಖರ ಅವರು ಉಪನ್ಯಾಸದಲ್ಲಿ `ನಾನು ಮತ್ತು ನನ್ನ ಸಿನೆಮಾ' ವಿಷಯದಲ್ಲಿ ಉಪನ್ಯಾಸ ನೀಡಲಿದ್ದು ಮುಖ್ಯ ಅತಿಥಿüಯಾಗಿ ನಿವೃತ್ತ ವಿಜ್ಞಾನಿ, ಸಾಹಿತಿ ಡಾ| ವ್ಯಾಸರಾವ್ ನಿಂಜೂರು ಆಗಮಿಸಿ ಸಣ್ಣ ಕಥೆಗಳ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಿದ್ದು ಭಾಗವಹಿಸಲು ಸರ್ವರಿಗೂ ಮುಕ್ತ ಅವಕಾಶವಿದೆ ಎಂದು ಅಸೋಸಿಯೇಶನ್‍ನ ವ್ಯವಸ್ಥಾಪಕ ಬಿ.ಕೆ ಮಧುಸೂದನ್ ತಿಳಿಸಿದ್ದರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here