Monday 12th, May 2025
canara news

ಬಿಎಸ್‍ಕೆಬಿಎ ಸಂಸ್ಥೆಯಿಂದ ರಂಗೇರಿದ ಶಂಕರ್ ಮಹಾದೇವನ್ ಸಂಗೀತ ರಸಮಂಜರಿ

Published On : 18 Feb 2019   |  Reported By : Rons Bantwal


ಗೋಕುಲ ನಿಜಾರ್ಥದ ಧರ್ಮಸ್ಥಾನವಾಗಿದೆ: ಸುಧೀರ್ ವಿ.ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.16: ಗೋಕಲವು ನಿಜಾರ್ಥದ ಧರ್ಮಸ್ಥಾನ ಆಗಿದೆ. ಇಲ್ಲಿನ ಪದಾಧಿಕಾರಿಗಳ ಪ್ರಾಮಾಣಿಕತೆ, ವಿಶ್ವಾಸವೇ ಇದಕ್ಕೆ ಕಾರಣವಾಗಿದೆ. ನನ್ನ ಮಾತಾಪಿತರ ಕ್ರಿಯೆಗಳೂ ಇಲ್ಲಿ ನೇರವೇರಿಸಿದ್ದು, ಗೋಕುಲ ನನ್ನ ಪರಿವಾರಕ್ಕೆ ಅತ್ಮೀಯವಾದುದು. ಗೋಕಲದ ಆಶಯದ ಯೋಜನೆಗಳು ಶೀಘ್ರವೇ ಪೂರೈಸಲಿ ಎಂದÀು ಚರೀಶ್ಮಾ ಬಿಲ್ಡರ್ಸ್‍ನ ಆಡಳಿತ ನಿರ್ದೇಶಕ ಮೂಲ್ಕಿ ಪಡುಮನೆ ಸುಧೀರ್ ವಿ.ಶೆಟ್ಟಿ, ನುಡಿದರು.

ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಸಾಯನ್ ತನ್ನ `ಗೋಕುಲ ಯೋಜನೆಗಳ ವಿಷನ್ 2020' ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಗೋಕುಲ ಕಟ್ಟಡ ಹಾಗೂ ಶ್ರೀ ಕೃಷ್ಣ ಮಂದಿರದ ಸಹಾಯಾರ್ಥ ಇಂದಿಲ್ಲಿ ಶನಿವಾರ ಸಂಜೆ ಕಿಂಗ್ಸ್ ಸರ್ಕಲ್‍ನ ಷಣ್ಮುಖಾನಂದ ಸಭಾಗೃಹದಲ್ಲಿ ಆಯೋಜಿಸಿದ್ದ ಶಂಕರ್ ಮಹಾದೇವನ್ ಬಳಗದ `ಸಂಗೀತ ರಸಮಂಜರಿ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಸಭಾ ಕಾರ್ಯಕ್ರಮ ಉದ್ದೇಶಿಸಿ ಸುಧೀರ್ ವಿ.ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರುಗಳಾಗಿ ವಧಾ ಬಿಲ್ಡರ್ಸ್‍ನ ವಿಜಯ್ ವಧಾ, ನಮನ್ ಬಿಲ್ಡರ್ಸ್‍ನ ಜಯೇಶ್ ಶ್ಹಾ, ಹೆಚ್‍ಡಿಎಫ್‍ಸಿ ಪ್ರಾಪರ್ಟಿ ವೆಂಚರ್ಸ್‍ನ ಕೆ.ಜಿ ಕೃಷ್ಣಮೂರ್ತಿ ಅತಿಥಿü ಅಭ್ಯಾಗತರುಗಳಾಗಿ ವೇದಿಕೆಯಲ್ಲಿದ್ದು, ಶಂಕರ್ ಮಹಾದೇವನ್ ದೀಪ ಪ್ರಜ್ವಲಿಸಿ ಪಿಂಗಾರ ಅರಳಿಸಿ ಸಂಪ್ರದಾಯಕವಾಗಿ ಕಾರ್ಯಕ್ರಮಕ್ಕೆ ಚಾಲನೆನೀಡಿ ಶುಭಾರೈಸಿದರು. ಕಾರ್ಯಕ್ರಮದ ಪ್ರಾಯೋಜಕ ಸಂಸ್ಥೆಗಳ ಎಸ್.ಬಾಲಮುರ್ಗನ್ (ಎಸ್‍ಟಿಎಫ್‍ಸಿ), ಪಿ.ಪ್ರದೀಪ್ ಕುಮಾರ್ (ಎಸ್‍ಬಿಐ), ಸದಾಶಿವ ರಾವ್ (ಐಡಿಎಫ್‍ಸಿ) ಉಪಸ್ಥಿತರಿದ್ದು ಗೋಕುಲ ಸ್ಮರಣಸಂಚಿಕೆ ಬಿಡುಗಡೆ ಗೊಳಿಸಿದರು.

ಬಿಎಸ್‍ಕೆಬಿಎ ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳ ಮತ್ತು ಶೈಲಿನಿ ರಾವ್, ಕೋಶಾಧಿಕಾರಿ ಹರಿದಾಸ್ ಭಟ್, ಜೊತೆ ಕಾರ್ಯದರ್ಶಿ ಪಿ.ಸಿ.ಎನ್ ರಾವ್, ಚಿತ್ರಾ ಮೇಲ್ಮನೆ, ಜೊತೆ ಕೋಶಾಧಿಕಾರಿ ಕುಸುಮ್ ಶ್ರೀನಿವಾಸ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಮಂಡಳಿಯ ಬಿ.ರಮಾನಂದ, ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್ ಸೇರಿದಂತೆ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥರು, ಬಿಎಸ್‍ಕೆಬಿ ಅಸೋಸಿಯೇಶನ್‍ನ ಇತರ ಪದಾಧಿಕಾರಿ, ಸದಸ್ಯರನೇಕರು, ನೂರಾರು ಸಂಗೀತಾಭಿಮಾನಿಗಳು ಉಪಸ್ಥಿತರಿದ್ದು, ವಿಡಿಯೋ ಕ್ಲಿಪ್ಪಿಂಗ್ ಮೂಲಕ ಆಶ್ರಯ, ಗೋಕುಲ ಯೋಜನೆ, ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಬಿತ್ತರಿಸಲಾಯಿತು.

ಶೈಲಿನಿ ರಾವ್ ಮತ್ತು ಡಾ| ಸಹನಾ ಎ.ಪೆÇೀತಿ ಪ್ರಾರ್ಥನೆಯನ್ನಾಡಿದರು. ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಪ್ರಸ್ತಾವಿಕ ನುಡಿಗಳನ್ನಾಡಿ ಗೋಕುಲ ಯೋಜನೆಗಳ ವಿಷನ್ 2020 ಬಗ್ಗೆ ಸ್ಥೂಲವಾಗಿ ಮಾಹಿತಿಯನ್ನಿತ್ತರು. ಜಯಲಕ್ಷ್ಮೀ ಹೊಳ್ಳ ಬಿಎಸ್‍ಕೆಬಿ ಬಗ್ಗೆ ಮಾಹಿತಿ ನೀಡಿದರು. ಎಂ.ಹೆಚ್ ಮುರಳೀಧರ ಅತಿಥಿüಗಳನ್ನು ಹಾಗೂ ಸನ್ಮಾನಿತರನ್ನು ಪರಿಚಯಿಸಿದರು. ವಿಜಯಲಕ್ಷ್ಮೀ ಎಸ್.ರಾವ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ವಂದನಾರ್ಪಣೆಗೈದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here