Thursday 30th, March 2023
canara news

ಹವ್ಯಕ ವೆಲ್ಫೇರ್ ಟ್ರಸ್ಟ್‍ನಿಂದ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ-2019' ಪ್ರದಾನ

Published On : 18 Feb 2019   |  Reported By : Rons Bantwal


ಪುರಸ್ಕಾರಗಳು ವ್ಯಕ್ತಿಯನ್ನು ವಿನೀತಗೊಳಿಸುತ್ತವೆ : ಜಯಂತ್ ಕಾಯ್ಕಿಣಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.18: ಗೋಕರ್ಣವು ಹಾಗೂ ಅಲ್ಲಿನ ಹವ್ಯಕ ಪರಿಸರವೇ ನನ್ನನ್ನು ಬೆಳೆಸಿದರು. ಗೋಕರ್ಣ ಪರಿಸರ ಅಂದರೆ ಹವ್ಯಕ ಪರಿಸರ. ಅದು ಜಾತ್ಯಾತೀತ ಪರಿಸರ. ಆದರೆ ನಿಜವಾಗಿಯೂ ನಮ್ಮೊಳಗಿನ ಸಂವೇದನೆಯನ್ನು ಬೆಳೆಸಿದ ಪರಿಸರ ಮುಂಬಯಿ ಮಹಾನಗರಿ ಆಗಿದೆ. ಪ್ರಶಸ್ತಿ ಯಾವೋತ್ತೂ ವ್ಯಕ್ತಿಯನ್ನು ವಿನೀತಗೊಳಿಸುವಂತದ್ದು. ಆದರೆ ಇತ್ತೀಚಿಗಿನ ಹೊಸ ಲೇಖಕರಲ್ಲಿ ಪ್ರಶಸ್ತಿ-ಪುರಸ್ಕಾರಗಳು ತಮ್ಮ ಜೀವನದ, ಕÀಲೋಪಾಸನೆಯ ಗುರಿ ಎನ್ನುವಂತದ್ದಗಿದೆ. ಕಲೆ ಇರುವುದೇ ಜನರನ್ನು ಒಗ್ಗೂಡಿಸಿ ಬೆಳೆಸುವುದಕ್ಕೆ. ಆದುದರಿಂದ ಕಲಾತ್ಮಕ ಬದುಕೇ ಸರ್ವಶೇಷ್ಠವಾದುದು ಎಂದು ನಾಡಿನ ಹೆಸರಾಂತ ಸಾಹಿತಿ, ಪ್ರಸಿದ್ಧ ಕವಿ ಡಾ| ಜಯಂತ್ ಕಾಯ್ಕಿಣಿ ನುಡಿದರು.

ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ಇಂದಿಲ್ಲಿ ಭಾನುವಾರ ಪೂರ್ವಾಹ್ನ ಘಾಟ್ಕೋಪರ್ ಪಶ್ಚಿಮದಲ್ಲಿನ ಹವ್ಯಾಕರ ಸಭಾಗೃಹದಲ್ಲಿ ಪ್ರದಾನಿಸಿದ ವಾರ್ಷಿಕ `ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ 2019' ಸ್ವೀಕರಿಸಿ ಡಾ| ಕಾಯ್ಕಿಣಿ ನುಡಿದರು.

ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಹಯೋಗದೊಂದಿಗೆ ಮತ್ತು ಹವ್ಯಕ ವೆಲ್ಫೇರ್ ಟ್ರಸ್ಟ್‍ನ ಅಧ್ಯಕ್ಷ ಶಿವಕುಮಾರ್ ಪಿ.ಭಾಗ್ವತ್ ಸಭಾಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ನಾನಾವತಿ ಆಸ್ಪತ್ರೆಯ ಪ್ರಸಿದ್ಧ ಕ್ಯಾನ್ಸರ್ ತಜ್ಞ ಡಾ| ನಾಗರಾಜ್ ಹುಯಿಲಗೋಳ ಮುಖ್ಯ ಅತಿಥಿüಯಾಗಿದ್ದು ದೀಪಹಚ್ಚಿ ಸಮಾರಂಭಕ್ಕೆ ಚಾಲನೆಯನ್ನಿತ್ತರು. ಗೌರವ ಅತಿಥಿüಗಳಾಗಿ ಕರ್ನಾಟಕ ಮಲ್ಲ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಉಪಸ್ಥಿತ್ರಿದ್ದು ಸ್ಮೀತಾ ಜೆ.ಕಾಯ್ಕಿಣಿ (ಪತ್ನಿ) ಮತ್ತು ಮಾ| ಪ್ರಥ್ವಿಕ್ ಜೆ.ಕಾಯ್ಕಿಣಿ (ಸುಪುತ್ರ) ಅವರನ್ನೊಳಗೊಂಡು ಕಾಯ್ಕಿಣಿ ಅವರಿಗೆ ಪ್ರಶಸ್ತಿ ಪ್ರದಾನಿಸಿ ಶುಭಾರೈಸಿದರು.

ಇಂತಹ ಸಂಸ್ಥೆ ಕಾಯ್ಕಿಣಿ ಅಂತವರ ಪ್ರತಿಭೆಯನ್ನು ಗುರುತಿಸಿರುವುದು ಅಭಿಮಾನದ ಸಂಗತಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಇತ್ತೀಚಿಗೆ ಪ್ರಶಸ್ತಿ ದೊರೆತು ಗುರುತಿಸುವಂತಾದದರು. ಜಯಂತ್ ಅವರ ಕೃತಿಗಳು ಯಾವತ್ತು ಅಂತರಾಷ್ಟ್ರೀಯ ಗುಣಮಟ್ಟದೇ ಆಗಿದ್ದು ಅವರು ಮುಂಬಯಿಯನ್ನು ನೋಡುವ ದೃಷ್ಟೀಯೆ ಅತ್ಯಾದ್ಭುತವಾದುದು. ಗೀತೆಗಳನ್ನು ಬರೆಯುವುದು ಸಾಹಿತ್ಯ ರಚನೆಗಿಂತ ಭಿನ್ನವಲ್ಲ. ಅದು ಸಾಹಿತ್ಯ ಎಂದು ಎಂಬುವುದನ್ನು ಜಯಂತ್ ಅವರು ಸಾಬಿತುಪಡಿಸಿದ್ದಾರೆ ಎಂದು ಡಾ| ನಾಗರಾಜ್ ಎಂದು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿದರು.

ಕಾಯ್ಕಿಣಿ ಅವರಿಗೆ ಈ ಪ್ರಶಸ್ತಿ ಪ್ರದಾನಿಸಿದ್ದರಿಂದ ಈ ಪ್ರಶಸ್ತಿಯ ಗೌರವ ಇನ್ನಷ್ಟು ಹೆಚ್ಚಿದೆ. ಪ್ರಶಸ್ತಿಯ ಜೊತೆ ಕರ್ನಾಟಕ ಮಲ್ಲದ ಹೆಸರು ಜೋಡಿಸುರುವುದು ಅಭಿಮಾನದ ಸಂಗತಿ. ಮುಂಬಯಿ ಸಾಹಿತಿಗಳ, ಉದ್ಯಮಿಗಳ, ಸಾಧಕರ ಬಗ್ಗೆ ಒಳನಾಡು ಗುರುತಿಸುವುದು ಕಡಿಮೆ. ಆದರೆ ಕಾಯ್ಕಿಣಿ ಬೆಂಗಳೂರಿಗೆ ಹೋಗಿರುವುದರಿಂದ ಇಂದು ಅವರಿಗೆ ಸಲ್ಲಬೇಕಾಂದಂಹ ಗೌರವ ಸಲ್ಲುತ್ತಿದೆ ಇದು ಅಭಿಮಾನದ ಸಂಗತಿ ಎಂದÀು ಪಾಲೆತ್ತಾಡಿ ಹರ್ಷ ವ್ಯಕ್ತಪಡಿಸಿದÀರು.

ಜಯಂತ್ ಅವರ ಕಥೆಗಳು ಇಂಗ್ಲೀಷ್‍ಗೆ ಭಾಷಾಂತರಗೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವುದು ನಮ್ಮ ಹಿರಿಮೆಯಾಗಿದೆ. ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿಸಿ ಕೊಂಡಿರುವ ಹವ್ಯಕ ವೆಲ್ಫೇರ್ ಟ್ರಸ್ಟ್ ಸಮಾಜದ ಪ್ರತಿಭೆಗಳನ್ನು ಗುರುತಿಸುವಲ್ಲಿ ಕಟುಬದ್ಧವಾಗಿದೆ ಇದಕ್ಕೆ ಈ ಪ್ರಶಸ್ತಿ ಪ್ರದಾನವೇ ಸಾಕ್ಷಿ ಎಂದÀು ಅಧ್ಯಕ್ಷೀಯ ಭಾಷಣದಲ್ಲಿ ಶಿವಕುಮಾರ್ ತಿಳಿಸಿದರು.

ಕಲಾ ಭಾಗ್ವತ್ ಸನ್ಮಾನಪತ್ರ ವಾಚಿಸಿದರು. ಟ್ರಸ್ಟ್‍ನ ಮುಖವಾಣಿ `ಹವ್ಯಕ ಸಂದೇಶ' ಮಾಸಿಕದ ಸಂಪಾದಕಿ ನ್ಯಾಯವಾದಿ ಅಮಿತಾ ಎಸ್.ಭಾಗ್ವತ್ ಪುರಸ್ಕೃತರಿಗೆ ಅಭಿನಂದಿಸಿದರು. ಗೌ| ಪ್ರ| ಕಾರ್ಯದರ್ಶಿ ನಾರಾಯಣ ಆರ್.ಅಕದಾಸ ಶುಭ ಸಂದೇಶÀಗಳನ್ನು ವಾಚಿಸಿದರು.

ಇತ್ತೀಚೆಗೆ ಪುಲ್ವಾಮಾದ ಭಯೋತ್ಪಾದಕರ ವಿಧ್ವಂಸಕ ದಾಳಿಗೆ ಮಡಿದ ರಾಷ್ಟ್ರದ ಸಿಆರ್‍ಪಿಎಫ್ ಯೋಧರಿಗೆ ನುಡಿನಮನ ಸಲ್ಲಿಸಿ ಸದ್ಗತಿ ಕೋರಲಾಯಿತು. ಕಾವ್ಯಾ ಭಾಗ್ವತ್ ಪ್ರಾರ್ಥನೆಯನ್ನಾಡಿದರು. ಪ್ರಶಸ್ತಿ ಸಮಿತಿ ಸಂಚಾಲಕಿ ತನುಜಾ ಹೆಗಡೆ ಸ್ವಾಗತಿಸಿದರು. ಕರ್ನಾಟಕ ಮಲ್ಲದ ಉಪ ಸಂಪಾದಕ ಶ್ರೀನಿವಾಸ ಜೋಕಟ್ಟೆ ಪ್ರಸ್ತಾವನೆಗೈದÀರು. ಪೂರ್ಣಿಮಾ ಅಕದಾಸ ಅತಿಥಿüಗಳನ್ನು ಪರಿಚಯಿಸಿದರು. ಟ್ರಸ್ಟ್‍ನ ಉಪಾಧ್ಯಕ್ಷ ಸಂಜಯ ಭಟ್ ಅತಿಥಿüಗಳಿಗೆ ಗೌರವಿಸಿದರು. ಗೌ| ಕೋಶಾಧಿಕಾರಿ ಎ.ಜಿ ಭಟ್ ಅವರನ್ನೊಳಗೊಂಡು, ಹವ್ಯಕ ಸಂದೇಶ ಮಂಡಳಿ ಸದಸ್ಯೆ ಶಶಿಕಲಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ವಾರ್ಷಿಕ ಕಾರ್ಯಕ್ರಮ ಪ್ರಯುಕ್ತ ರಾಷ್ಟ್ರೀಯ ಪುರಸ್ಕೃತ ಪವಿತ್ರಾ ಭಟ್ ತನ್ನ ಸಂಗಡಿಗರೊಂದಿಗೆ ನೃತ್ಯರೂಪಕವನ್ನು ಹಾಗೂ ರೇಖಾ ಭಟ್ ಕೋಟೆಮನೆ ಗಾಯನ ಕಛೇರಿಯನ್ನು ಪ್ರಸ್ತುತ ಪಡಿಸಿದ್ದು ಸಿ.ಎಂ ಜೋಶಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಚಿದಾನಂದ ಭಾಗ್ವತ್ ಧನ್ಯವದಿಸಿದರು.
More News

ಸಂಸದ ಗೋಪಾಲ್ ಶೆಟ್ಟಿ ಅವರಿಗೆ ಸಂಸದ್ ರತ್ನ ಪ್ರಶಸ್ತಿ 2023 ಪ್ರದಾನ
ಸಂಸದ ಗೋಪಾಲ್ ಶೆಟ್ಟಿ ಅವರಿಗೆ ಸಂಸದ್ ರತ್ನ ಪ್ರಶಸ್ತಿ 2023 ಪ್ರದಾನ
ಪತ್ರಕರ್ತ ರವೀಂದ್ರ ಶೆಟ್ಟಿ ಅವರ ನಮ್ಮ ಉಡುಪಿ ಕೃತಿ ಬಿಡುಗಡೆ
ಪತ್ರಕರ್ತ ರವೀಂದ್ರ ಶೆಟ್ಟಿ ಅವರ ನಮ್ಮ ಉಡುಪಿ ಕೃತಿ ಬಿಡುಗಡೆ
ಮಂಗಳೂರು ವಿವಿ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್
ಮಂಗಳೂರು ವಿವಿ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್

Comment Here