Thursday 25th, April 2024
canara news

ಚಾರ್‍ಕೋಪ್ ಕನ್ನಡಿಗರ ಬಳಗದ ಕಾರಂತೋತ್ಸವ-ಸದಾನಂದ ಸುವರ್ಣ ದತ್ತಿ ಕಾರ್ಯಕ್ರಮ

Published On : 19 Feb 2019   |  Reported By : Rons Bantwal


ಕಾರಂತರ ಸಮರಸ್ಯತ್ವ ಇಂದಿಗೂ ಜೀವಂತವಾಗಿದೆ : ಡಾ| ಮಮತಾ ರಾವ್

(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.17: ಮನುಷ್ಯ ಮನಸ್ಸು ಮಾಡಿದರೆ ಏನೂ ಸಾಧಿಸ ಬಹುದು ಅನ್ನುವುದಕ್ಕೆ ಕಾರಂತರು ಅದ್ವೀತಿಯ ಉದಾಹರಣೆ. ಪ್ರಸ್ತುತ ಕಾದಂಬರಿಯಲ್ಲಿ ಮಂಜುಳೆ ಎಂಬ ದೊರತಿ ಅಲ್ಲದವಳ ಬಾಳಿನ ಕಥೆಯನ್ನು ಕಟಿಕೊಪ್ಪ, ಗಂಡು ಹೆಣ್ಣಿನ ಮನಸ್ಸುಗಳ ಸಂಬಂಧದ ರಹಸ್ಯವನ್ನು ಓರ್ವ ಚಿಂತಕನ ನಿಲುವಿನಲ್ಲಿ ಶೋಧಿಸಲು ಯತ್ನಿಸಿದ್ದಾರೆ. ಕಾರಂತರು ವೈವಾಹಿಕ ಜೀವನದಲ್ಲಿ ಅಗತ್ಯವೆಂದು ಪ್ರತಿಪಾದಿಸುವ ಸಮರಸ್ಯತ್ವ ಜೀವಂತವಾಗಿದ್ದು ಇಂದಿಗೂ ಮರೀಚಿಕೆಯಾಗಿ ಉಳಿದಿದೆ. ಆದುದರಿಂದ ಕಾರಂತರ ಮೈಮನಗಳ ಸುಳಿಯಲ್ಲಿ ಕಾದಂಬರಿಯು ಇಂದಿಗೂ ಪ್ರಸ್ತುತವೆನಿಸುತ್ತದೆ ಎಂದು ಲೇಖಕಿ ಮತ್ತು ವಿಮರ್ಶಕಿ ಡಾ| ಮಮತಾ ರಾವ್ ತಿಳಿಸಿದರು.

ಚಾರ್‍ಕೋಪ್ ಕನ್ನಡಿಗರ ಬಳಗ ಕಾಂದಿವಿಲಿ (ರಿ.) ಸಂಸ್ಥೆಯು ಇಂದಿಲ್ಲಿ ಆದಿತ್ಯವಾರ ಸಂಜೆ ಕಾಂದಿವಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನದ ಸಭಾಗೃಹದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ| ಶಿವರಾಮ ಕಾರಂತ ಇವರ ಸಂಸ್ಮರಣೆ ಮತ್ತು ರಂಗತಜ್ಞ ಸದಾನಂದ ಸುವರ್ಣ ದತ್ತಿ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆಗಳನ್ನೊಳಗೊಂಡು `ಕಾರಂತೋತ್ಸವ' ಸಂಭ್ರಮ ಆಚರಿಸಿದ್ದು ಮಮತಾ ರಾವ್ ಕಾರಂತರ ಕುರಿತು ಉಪನ್ಯಾಸವನ್ನಿತ್ತು ದತ್ತಿ ನಿಧಿಯ ಪ್ರಾಯೋಜಿಸಿದ ಸದಾನಂದ ಸುವರ್ಣರ ಪೆÇ್ರೀತ್ಸಹ ಅಭಿನಂದನೀಯ ಎಂದರು.

ಬಳಗದ ಅಧ್ಯಕ್ಷ ಮುದ್ದು ಕೃಷ್ಣ ಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಾಮಾಜಿಕ ಧುರೀಣ ಡಾ| ಹರೀಶ್ ಬಿ.ಶೆಟ್ಟಿ ದಹಿಸರ್ ಮುಖ್ಯ ಅತಿಥಿüಯಾಗಿದ್ದು ದೀಪಹಚ್ಚಿ ಕಾರಂತರ ಭಾವಚಿತ್ರಕ್ಕೆ ಪುಷ್ಫವೃಷ್ಠಿ ಗೈದು ತ್ರಿವಳಿ ಸಡಗರಕ್ಕೆ ಚಾಲನೆ ನೀಡಿದರು. ಹಿರಿಯ ಸಾಹಿತಿ, ಸಂಶೋಧಕ ಬಾಬು ಶಿವ ಪೂಜಾರಿ ಉಪಸ್ಥಿತರಿದ್ದು ಚಿತ್ರಸ್ಪರ್ಧಾ ವಿಜೇತರಿಗೆ ಅತಿಥಿüಗಳು ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು.

ಹರೀಶ್ ಶೆಟ್ಟಿ ಮಾತನಾಡಿ ಯಕ್ಷಗಾನ, ಲೇಖನ, ಕಾದಂಬರಿ, ನಾಟಕ ಇತ್ಯಾದಿಗಳ ಮೂಲಕ ಅಂತರಾಷ್ಟ್ರೀ ಯ ಮಾನ್ಯತೆ ಗಳಿಸಿದ ಕಾರಂತರು ಎಂದು ವಿವಾದ್ಮಾಕ ವ್ಯಕ್ತಿಯಲ್ಲ. ಅವರೋರ್ವ ಮಾನವತವಾದಿ ಎಂದರು.

ಕಾರಂತರ ಮೈಮನಸ್ಸುಗಳ ಸುಳಿಯಲ್ಲಿ ಒಂದು ವಿಶಿಷ್ಟ ಕಾದಂಬರಿ. ಅದೊಂದು ಬರೀ ಕಾದಂಬರಿ ಅಲ್ಲ ಅದ್ವೀತಿಯ ಸಾಹಿತ್ಯ ಭಂಡರವೂ ಹೌದು. ಹೆಣ್ಣೊಬ್ಬಳ ಬಾಳನ್ನು ಸುಧಾರಿಸಲು ಯತ್ನಿಸಿದರಲ್ಲದೆ ಯಕ್ಷಗಾನಕ್ಕೆ ವಿಶ್ವರಂಗ ಮಂಟಪದಲ್ಲಿ ಅಪೂರ್ವವಾದ ಸ್ಥಾನ ದೊರಕಿಸಿ ಕೊಟ್ಟವರು ಕಾರಂತರು ಎಂದು ಬಾಬು ಶಿವ ಪೂಜಾರಿ ತಿಳಿಸಿದರು.

ಶಿವರಾಮ ಕಾರಂತರ ಬಗ್ಗೆ ನಾವು ಭವಿಷ್ಯತ್ತಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಸದಾನಂದ ಸುವರ್ಣ ಅವರು ನಮ್ಮ ಸಂಘದಲ್ಲಿ ದತ್ತಿನಿಧಿ ಸ್ಥಾಪಿಸಿಕೊಟ್ಟು ಇಂತಹ ಮಹತ್ವದ ಕಾರ್ಯ ಹಮ್ಮಿಕೊಳ್ಳುವಂತೆ ಮಾಡಿದ್ದಾರೆ. ಇಂದಿನ ಕಾರಂತರ ನೆನಪಿನಲ್ಲಿ ಚಿತ್ರ ಬಿಡಿಸುವ ಕಾರ್ಯದಲ್ಲಿ ಹೆಚ್ಚಿನ ಮಕ್ಕಳು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗಾಗಿ ಕಾರಣರಾಗಿದ್ದಾರೆ ಎಂದು ಅಧ್ಯಕ್ಷೀಯ ಭಾಷಣಗೈದು ಮುದ್ದುಕೃಷ್ಣ ಕಾರಂತರಿಗೆ ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಚಾರ್‍ಕೋಪ್ ಕನ್ನಡಿಗರ ಬಳಗದ ಟ್ರಸ್ಟಿ ಜಯ ಸಿ.ಶೆಟ್ಟಿ, , ಚಂದ್ರಶೇಖರ್ ಶೆಟ್ಟಿ, ಹರೀಶ್ ಶೆಟ್ಟಿ ಎರ್ಮಾಳ್, ಪಿ.ಎಸ್ ಕಾರಂತ ವಾಪಿ, ಸಾ.ದಯಾ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ರಜನಿ ಶೆಟ್ಟಿ, ಶುಭಾ ಸುವರ್ಣ, ಜಯಲಕ್ಷ್ಮೀ ಶೆಟ್ಟಿ ಪ್ರಾರ್ಥನೆ ಹಾಡಿದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಉಪ ಸಮಿತಿ ಸಂಚಾಲಕ ಭಾಸ್ಕರ್ ಸರಪಾಡಿ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ರಘುನಾಥ್ ಎನ್.ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಸಲಹೆಗಾರ ಗೋಪಾಲ ತ್ರಾಸಿ ಕಾರ್ಯಕ್ರಮ ನಿರೂಪಿಸಿದರು. ಲತಾ ಬಂಗೇರಾ ಮತ್ತು ಶಿವಯೋಗಿ ಸಂಗಮನಿ ಚಿತ್ರಕಲಾ ಸ್ಪರ್ಧೆ ನಡೆಸಿದ್ದು, ಜೊತೆ ಕಾರ್ಯದರ್ಶಿ ಆಶಾ ಶೆಟ್ಟಿ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here