Thursday 18th, April 2024
canara news

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ವಾರ್ಷಿಕ ಸಮಾವೇಶ - ಗ್ರಂಥ ಬಿಡುಗಡೆ

Published On : 21 Feb 2019   |  Reported By : Rons Bantwal


ಗೋರೆಗಾಂವ್ ಕರ್ನಾಟಕ ಸಂಘಕ್ಕೆ-ಚಕ್ರಧಾರಿ ಪ್ರಶಸ್ತಿ ; ಶೇಖರ್ ಅಜೆಕಾರ್‍ಗೆ ಕೃಷಿ ಬಂಧು ಪುರಸ್ಕಾರ ಪ್ರದಾನ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.17: ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನವು ನಡೆಸಿದ ವಾರ್ಷಿಕ ಸಮಾವೇಶವು ಇಂದಿಲ್ಲಿ ರವಿವಾರ ಸಂಜೆ ಘಾಟ್ಕೋಪರ್ ಅಸಲ್ಫಾದ ಶ್ರೀ ಕ್ಷೇತ್ರದ ಶ್ರೀ ಗೀತಾಂಬಿಕಾ ಸಭಾಗೃಹದಲ್ಲಿ ಕನ್ನಡ ಕಲಾ ಕೇಂದ್ರ ಅಧ್ಯಕ್ಷ ಬೈಲೂರು ಬಾಲಚಂದ್ರ ರಾವ್ ಅಧ್ಯಕ್ಷತೆಯಲ್ಲಿ ನೇರವೇರಿತು.

ಸಮಾರಂಭದಲ್ಲಿ ಶ್ರೀ ಮೂಕಾಂಬಿಕಾ ಮಂದಿರ ಘನ್ಸೋಲಿ ಇದರ ಪ್ರಧಾನ ಆರ್ಚಕ ಗುರುಪ್ರಸಾದ್ ಭಟ್, ಫ್ರೆಂಡ್ಸ್ ಸ್ವಾವಲಂಬನ ಕೇಂದ್ರ ಡೊಂಬಿವಿಲಿ ಸಂಚಾಲಕ ಪೆÇ್ರ| ವೆಂಕಟೇಶ ಪೈ, ವಿಶ್ವನಾಥ್ ಶೆಟ್ಟಿ ಪೇತ್ರಿ ಅತಿಥಿüಗಳಾಗಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಅತಿಥಿsಗಳು ಗೋರೆಗಾಂವ್ ಕರ್ನಾಟಕ ಸಂಘ ಸಂಸ್ಥೆಗೆ ಚಕ್ರಧಾರಿ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ದೇವಲ್ಕುಂದ ಶೆಟ್ಟಿ ಮತ್ತು ಪದಾಧಿಕಾರಿಗಳನೊಳಗೊಂಡು ಪ್ರದಾನಿಸಿದರು. ಹಾಗೂ ಕೃಷಿಬಂಧು ಪುರಸ್ಕಾರವನ್ನು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಅಧ್ಯಕ್ಷ ಶೇಖರ ಅಜೆಕಾರು ಇವರಿಗೆ ಪ್ರದಾನಿಸಿದರು. ಅಂತೆಯೇ ಸದಾನಂದ ಭಂಡಾರಿ ದಂಪತಿ, ವಿಘ್ನೇಶ ರಾಮಸ್ವಾಮಿ ದಂಪತಿ ಮತ್ತು ಗುರುಪ್ರಸಾದ್ ಭಟ್ ದಂಪತಿಯನ್ನು ಗೌರವಿಸಲಾಯಿತು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಹಿರಿಯ ವಿದ್ವಾಂಸ ದುರ್ಗಾಪ್ರಸಾದ್ ಖಾರ್‍ಘರ್ ಬಳಗದವರಿಂದ `ಚತುರ್ವೇದ ಪಾರಾಯಣ' ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮವಾಗಿ ಫ್ರೆಂಡ್ಸ್ ಸ್ವಾವಲಂಬನಾ ಕೇಂದ್ರ ಡೊಂಬಿವಲಿ ಇದರ ವಿದ್ಯಾಥಿರ್üಗಳಿಂದ ಭಜನಾ ಸಂಧ್ಯಾ ಕಾರ್ಯಕ್ರಮ, ವಿಷ್ಣು ಭಟ್ ಹೊಸ್ಮನೆ ಅತ್ರಾಡಿ ಬರೆದ ಕಥೆಯನ್ನಾಧರಿತ ವಿಶ್ವನಾಥ ದೊಡ್ಮನೆ ರಚಿಸಿರುವ `ಸೂರ್ಯಪ್ರಭೆ' ಪೌರಾಣಿಕ ನಾಟಕವನ್ನು ರಂಗ ಕಲಾವಿದ ಅಶೋಕ್ ಕುಮಾರ್ ಕೊಡ್ಯಡ್ಕ ಕಲಾವಿದರು ಪ್ರದರ್ಶಿಸಿದರು.

ಶಾಂತಿ ಪ್ರಿಯ ಉಡುಪ ಪ್ರಾರ್ಥನೆಯನ್ನಾಡಿದರು. ಗುರುಮೂರ್ತಿ ಭುವನಗಿರಿ ಶ್ಲೋಕ ಪಠಣ ಮಾಡಿದರು. ವೀರ ಮರಣ ಅಪ್ಪಿದ ಸೈನಿಕರಿಗೆ ಮೌನಾಚಾರಣೆಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಾಂಸ್ಕೃತಿಕ ಪ್ರತಿಷ್ಠಾನದ ಗೌ| ಪ್ರ| ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಅತಿಥಿüಗಳಿಗೆ ಸ್ವಾಗತಿಸಿದರು ಜಿ.ಟಿ ಆಚಾರ್ಯ ಪ್ರಾಸ್ತಾವಿಕ ಭಾಷಣಗೈದು ಮಯೂರ ವರ್ಮದ ಬಗ್ಗೆ ತಿಳಿಸಿದರು. ಸುಪ್ರಿಯಾ ಉಡುಪ ಸನ್ಮಾನಿತರನ್ನು ಪರಿಚಯಿಸಿ, ಸನ್ಮಾನ ಪತ್ರ ವಾಚಿಸಿದರು. ತನುಜಾ ಎಂ.ಭಟ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರಾಜೇಶ್ ಪಿ.ಗೌಡ ವಂದನಾರ್ಪಣೆಗೈದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here