Monday 12th, May 2025
canara news

ಒಂಭತ್ತನೇ ವಾರ್ಷಿಕ ಮಹಾಸಭೆ ನಡೆಸಿದ ಒಕ್ಕಲಿಗರ ಸಂಘ ಮಹಾರಾಷ್ಟ್ರ

Published On : 01 Mar 2019   |  Reported By : Rons Bantwal


ಒಕ್ಕಲಿಗರ ಒಕ್ಕೂಟವೇ ನಮ್ಮ ಉದ್ದೇಶವಾಗಿದೆ : ಜಿತೇಂದ್ರ ಜೆ.ಗೌಡ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.24: ಸಮಾಜಸೇವೆಯಲ್ಲಿ ನಿಷ್ಠಾವಂತರಾಗಿ ಪ್ರಾಮಾಣಿಕವಾಗಿ ಸಂಘಟಿತರಾಗಿ ಸಮಾಜವನ್ನು ಮುನ್ನಡೆಸುವುದೇ ಈ ಸಂಘದ ಉದ್ದೇಶವಾಗಿದೆ. ಒಕ್ಕಲಿಗರ ರಕ್ಷಣೆ, ಸಮುದಾಯ ಮತ್ತು ಸ್ವಸಂಸ್ಕೃತಿಯ ಹಿತರಕ್ಷಣೆಗೆ ಈ ಸಂಘವು ಸದಾ ಬದ್ಧವಾಗಿದ್ದು ದಶವರ್ಷದತ್ತ ಮುನ್ನಡೆಯುತ್ತಿದೆ. ಒಕ್ಕಲಿಗರ ಒಗ್ಗಟ್ಟು ಮತ್ತು ಒಳಿತು ಬಯಸುತ್ತಾ ಒಕ್ಕಲಿಗರ ಒಕ್ಕೂಟವೇ ನಮ್ಮ ಉದ್ದೇಶ. ಸಮಾಜೋಭಿವೃದ್ಧಿಯ ಹಿತದೃಷ್ಟಿ ಸಂಘದಲ್ಲಿ ನಾವೆಲ್ಲರೂ ಸಕ್ರೀಯರಾಗಿದ್ದು ಇಲ್ಲಿನ ಒಕ್ಕಲಿಗರೆಲ್ಲರನ್ನೂ ಒಂದೇ ವೇದಿಕೆಯಡಿ ಒಗ್ಗೂಡಿಸಿ ಸ್ವಸಮುದಾಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇವೆ. ಐಕ್ಯತಾ ಮನೋಭಾವದಿಂದ ಮಾತ್ರ ನಮ್ಮ ಸಾಂಘಿಕತೆ ಸಿದ್ಧಿಗೊಳಿಸಲು ಸಾಧ್ಯ ಇದಕ್ಕೆಲ್ಲಾ ಸಮಾಜ ಭಾಂದವರ ಸಹಯೋಗ ಅಗತ್ಯವಾಗಿದೆ ಎಂದು ಒಕ್ಕಲಿಗರ ಸಂಘ ಮಹಾರಾಷ್ಟ್ರ (ರಿ.) ಇದರ ಅಧ್ಯಕ್ಷ ಜಿತೇಂದ್ರ ಜೆ.ಗೌಡ ತಿಳಿಸಿದರು.

ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ರಾಮ ಪಂಜ್ವನಿ ಚಾರಿಟೇಬಲ್ ಟ್ರಸ್ಟ್‍ನ ಸೀತಾ ಸಿಂಧು ಭವನದಲ್ಲಿ ಒಕ್ಕಲಿಗರ ಸಂಘದ ಒಂಭತ್ತನೇ ವಾರ್ಷಿಕ ಮಹಾಸಭೆ ನಡೆಸಲಾಗಿದ್ದು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆಯನ್ನೀಡಿ ಸಭೆಯ ಅಧ್ಯಕ್ಷತೆ ವಹಿಸಿ ಜಿತೇಂದ್ರ ಗೌಡ ಮಾತನಾಡಿದರು. ಪ್ರಧಾನ ಅಭ್ಯಾಗತರಾಗಿ ಒಕ್ಕಲಿಗರ ಸಂಘದ ನಿಕಟಪೂರ್ವ ಅಧ್ಯಕ್ಷ ರಂಗಪ್ಪ ಸಿ.ಗೌಡ ಹಾಗೂ ಗೌ| ಪ್ರ| ಕಾರ್ಯದರ್ಶಿ ಶ್ರೀಮತಿ ಶುಭಾ ಆರ್.ಮುಲಕಟ್ಟೆ, ಗೌ| ಪ್ರ| ಕೋಶಾಧಿಕಾರಿ ಬಿ.ಎನ್ ಶಿವರಾಮ ಗೌಡ, ಜೊತೆ ಕಾರ್ಯದರ್ಶಿ ಸಿಂಗಾರೆ ಕರಿಯಪ್ಪ ಗೌಡ, ಜೊತೆ ಕೋಶಾಧಿಕಾರಿ ಯೋಗೇಶ್ವರ ಸಿ.ಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಚೌಡಪ್ಪ ಗೌಡ, ರವಿ ಎನ್.ಗೌಡ, ರಮೇಶ್ ಎಸ್.ಗೌಡ ವೇದಿಕೆಯಲ್ಲಿ ಆಸೀನರಾಗಿದ್ದರು.

ರಂಗಪ್ಪ ಗೌಡ ಮಾತನಾಡಿ ನಮ್ಮ ಸಮಾಜದ ಶ್ರೀಮಂತ ಪರಂಪರೆ, ಸುದೀರ್ಘ ಇತಿಹಾಸ ಮುನ್ನಡೆಸಲು ಇಂತಹ ಸಂಸ್ಥೆಗಳೇ ಪೂರಕವಾಗುತ್ತದೆ. ಸಮಾಜದ ಒಗ್ಗಟ್ಟಿಗೆ ಅನ್ಯೋನ್ಯತಾ ಮನೋಭಾವ ಅಗತ್ಯವಿದ್ದು ಅವಾಗಲೇ ಸಂಸ್ಥೆಗಳು ಉನ್ನತಿಯತ್ತ ಸಾಗುವುದು. ಸಮಾಜದ ಋಣ ತೀರಿಸುವುದು ಪ್ರತೀಯೋರ್ವ ಸ್ವಜಾತೀಯ ಬಂಧುಗಳ ಕರ್ತವ್ಯವಾಗಿದೆ. ಇದಕ್ಕಾಗಿ ವಿಶ್ವಸನೀಯ ಸಂಘಟನೆಯ ಅಗತ್ಯವಿದೆ. ಒಕ್ಕಲಿಗರ ಉನ್ನತಿಗಾಗಿ ಅಸ್ತಿತ್ವಕ್ಕೆ ತರಲಾದ ಒಕ್ಕಲಿಗ ಸಂಘ ಮಹಾರಾಷ್ಟ್ರ ಸಂಸ್ಥೆಯು ಸ್ವಂತಿಕೆಯ ಒಕ್ಕಲಿಗ ಭವನ ಕಾಣಬೇಕಾಗಿದೆ ಎಂದರು.

ಮಾಜಿ ಗೌ| ಪ್ರ| ಕಾರ್ಯದರ್ಶಿ ಕೆ.ರಾಜೇ ಗೌಡ, ಮೋಹನ್‍ಕುಮಾರ್ ಜೆ.ಗೌಡ, ಸಿಎ| ಮಂಜುನಾಥ ಗೌಡ, ಕುಮಾರ್ ಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ನಟರಾಜ್ ಶಿವೇ ಗೌಡ, ಯೋಗೇಶ್ ಎಂ.ಗೌಡ ಮತ್ತಿತರರು ಉಪಸ್ಥಿತರಿದ್ದು, ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ ಸಲಹೆಗಳನ್ನಿತ್ತು ಸಂಘದ ಸರ್ವೋನ್ನತಿ ಬಯಸಿದರು.

ಯುಗಯೋಗಿ ಜಗದ್ಗುರು ದೈವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮಿಜಿ ಅವರ ಭಾವಚಿತ್ರಕ್ಕೆ ನಮಿಸಿ ಆರತಿಗೈದು ಗುರುಪೂಜೆ ನೆರವೇರಿಸಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಿದ್ಧ ಸಿಂಹಾಸನದ ಪೀಠಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಅನುಗ್ರಹ ಯಾಚಿಸಿ ಪದಾಧಿಕಾರಿಗಳನ್ನೊಳಗೊಂಡು ಅಧ್ಯಕ್ಷರು ಶ್ರೀಫಲ ಹೊಡೆದು ಮಹಾಸಭೆಗೆ ವಿಧ್ಯುಕ್ತವಾಗಿ ಚಾಲನೆಯನ್ನೀಡಿದರು. ಬಳಿಕ ಪುಲ್ವಾಮ ವಿಧ್ವಂಸಕ ದಾಳಿಗೆ ಬಲಿಯಾದ ರಾಷ್ಟ್ರದ ಸೈನಿಕರಿಗೆ ಅಂತೆಯೇ ಗತ ಸಾಲಿನಲ್ಲಿ ಸ್ವರ್ಗೀಯರಾದ ಸಿದ್ಧಗಂಗಾಶ್ರೀ ಡಾ| ಶಿವಕುಮಾರ ಸ್ವಾಮೀಜಿ, ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್, ಕರ್ನಾಟಕದ ಸಚಿವರಾಗಿದ್ದ ನಟ ಅಂಬರೀಶ್ ಸೇರಿದಂತೆ ಸಂಘದ ಸದಸ್ಯರು, ಹಿತೈಷಿಗಳಿಗೆ ಸಂತಾಪ ಸೂಚಿಸಲಾಯಿತು.

ವಿೂನಾಕ್ಷಿ ಎಸ್.ಗೌಡ ಪ್ರಾರ್ಥನೆಯನ್ನಾಡಿದರು. ಶುಭಾ ಆರ್.ಮುಲ್ಲಕಟ್ಟೆ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿ ಸಭಾ ಕಲಾಪ ನಡೆಸಿದರು. ಬಿ.ಎನ್ ಶಿವರಾಮ ಗೌಡ ಗತವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿ ಧನ್ಯವದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here