Sunday 11th, May 2025
canara news

ದೇಶದ ಕೆಚ್ಚೆದೆಯ ವೀರ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ

Published On : 03 Mar 2019   |  Reported By : media release


ಯನ್ ಜಿ ನಯನ್ ಚಾರೀಟೇಬಲ್ ಟ್ರಸ್ಟ್ (ರಿ) ನಯನಾಡು ( NG NAYAN TRUST ) ಹಾಗೂ ಶ್ರೀ ರಾಮ ಯುವಕ ಸಂಘ ನಯನಾಡು ಮತ್ತು ಭಾರತೀಯ ಕಥೋಲಿಕ್ ಯುವ ಸಂಚಾಲನ ನಯನಾಡು ಘಟಕ ಇವರ ಸಹಯೋಗದಲ್ಲಿ ಫೆಬ್ರುವರಿ 14 ರಂದು ಕಾಶ್ಮೀರ ದ ಪುಲ್ವಾಮದ ಅವಂತಿಪೋರ ದಲ್ಲಿ ಭಯೋತ್ಪಾದಕರ ಅತ್ಮಾಹುತಿ ದಾಳಿಗೆ ಹುತಾತ್ಮ ರಾದ ನಮ್ಮ ದೇಶದ ಕೆಚ್ಚೆದೆಯ ವೀರ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಯನ್ನು ನಯನಾಡಿನ ಕೇಂದ್ರ ಭಾಗದಲ್ಲಿ ಮುಸ್ಸಂಜೆ ವೇಳೆಗೆ ನೂರಾರು ದೇಶಭಕ್ತ ಜನರು ಸೇರಿಕೊಂಡು ಸಮರ್ಪಿಸಿದರು. ಹುತಾತ್ಮ ಯೋಧರ ಭಾವಚಿತ್ರದ ಫ್ಲೆಕ್ಸ್ ನ ಮುಂಭಾಗದಲ್ಲಿ ತಾಯಿ ಭಾರತಾಂಬೆಯ ಭಾವಚಿತ್ರವಿರಿಸಿ ದೀಪ ಪ್ರಜ್ವಲನೆ ಮಾಡಿ ಹಣತೆ ಹಾಗೂ ಕ್ಯಾಂಡಲ್ ದೀಪಗಳನ್ನು ಉರಿಸಿ ಹುತಾತ್ಮ ಯೋಧರ ಅತ್ಮಶಾಂತಿಗಾಗಿ, ಹಾಗೂ ಇನ್ಮುಂದಕ್ಕೆ ದೇಶಕ್ಕಾಗಿ ಹೋರಾಡಲು ನಿಂತಿರುವ ಯೋಧರಿಗಾಗಿ ಪ್ರಾರ್ಥನೆ ಮಾಡಲಾಯಿತು.

ನಿವೃತ್ತ ಸೈನಿಕ ಅನೀಸ್ ಸ್ನೇಹಗಿರಿ, ನಯನಾಡಿನ ಉದ್ಯಮಿ ಪಿಂಟೋ ಬೇಕರಿ ಮಾಲಕ ಸಿಲ್ವೆಸ್ಟರ್ ಪಿಂಟೋ, ಹಿರಿಯರಾದ ಸುಂದರ ಪೂಜಾರಿ ಹಾಗೂ ಕೃಷ್ಣಪ್ಪ ಪೂಜಾರಿ ಯವರು ದೀಪವನ್ನುರಿಸುವ ಮುಖೇನಾ ಶ್ರದ್ಧಾಂಜಲಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ನಿವೃತ್ತ ಸೈನಿಕರಾದ ಅನೀಸ್ ಸ್ನೇಹಗಿರಿ ಯವರು ಮಾತನಾಡುತ್ತಾ ಸೇನೆಯ ಬಗ್ಗೆ ಸೈನಿಕರ ಬಗ್ಗೆ ಊರ ಜನತೆಗಿರುವ ಪ್ರೀತಿ ಅಭಿಮಾನ ಗೌರವ ವನ್ನು ಕಂಡು ಹೆಮ್ಮೆಯೆನಿಸಿದೆಯೆಂದರು. ಸೈನಿಕರಿಗಾಗಿ ಸೈನಿಕರ ಕುಟುಂಬ ಕ್ಕಾಗಿ ಪ್ರಾರ್ಥನೆ ಮಾಡೋಣ. ಸೇನೆ ಭಯೋತ್ಪಾದಕರಿಗೆ ತಕ್ಕ ಪಾಠ ವನ್ನು ಕಳಿಸಲು ಕಾಯುತ್ತಿದೆಯೆಂದರು.

ಸಿಲ್ವೆಸ್ಟರ್ ಪಿಂಟೋ ರವರು ಹುತಾತ್ಮ ರಿಗೆ ಶ್ರದ್ಧಾಂಜಲಿ ಸಲ್ಲಿಸಿ ಜಮ್ಮು ಕಾಶ್ಮೀರ ಭಾಗಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಈ ಕೂಡಲೇ ರದ್ದುಗೊಳಿಸಬೇಕು. ಈ ಬಗ್ಗೆ ಪ್ರಧಾನಿ ಯವರಿಗೆ ಯುವಜನತೆ ಟ್ವೀಟ್ ಗಳನ್ನ ಕಳಿಸಬೇಕಾಗಿ ವಿನಂತಿಸಿಕೊಂಡರು. ಸುಂದರ ಪೂಜಾರಿ ಯವರು ಮಾತನಾಡುತ್ತಾ ಯುವ ಜನತೆಯಲ್ಲಿ ದೇಶಾಭಿಮಾನ ಉಂಟು ಮಾಡಿ ಸಾಮರಸ್ಯದ ಬದುಕನ್ನು ಯುವ ಜನತೆ ಕಟ್ಟಿಕೊಳ್ಳಬೇಕೆಂದರು.

ತಾಯಂದಿರು ಸಹೋದರಿಯರು ಸಜ್ಜನ ಬಂಧುಗಳ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ತರುಣರು ಭಾಗವಹಿಸಿದ್ದರು. ದೇಶಕ್ಕಾಗಿ ಸಮರ್ಪಣೆಯಾದ ಯೋಧರಿಗಾಗಿ ದುಃಖ ವೇದನೆಯೊಂದಿಗೆ ದೇವರಲ್ಲಿ ಬೇಡಿಕೊಳ್ಳಲಾಯಿತು.

founder and president Nelvister Pinto, founder and vice-president Naveen Galbao's NG NAYAN Charitable Trust, Nainad ICYM President Alen, Sri Rama yuvaka sanga President Dayanad were present




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here