Sunday 11th, May 2025
canara news

ಮಾ.10: ವಿಕ್ರೋಲಿ ಪೂರ್ವದಲ್ಲಿ ಹಾಗೂ ಮಾ.20: ಪನ್ವೇಲ್‍ನಲ್ಲಿ

Published On : 09 Mar 2019   |  Reported By : Rons Bantwal


ಮೊಡೇಲ್ ಬ್ಯಾಂಕ್ ಲಿಮಿಟೆಡ್‍ನ ಎರಡು ಶಾಖೆಗಳು ಉದ್ಘಾಟನೆ

ಮುಂಬಯಿ, ಮಾ.06: ದಿ.ಮಹಾರಾಷ್ಟ್ರ ಸ್ಟೇಟ್ ಕೋ.ಅಪರೇಟಿವ್ ಬ್ಯಾಂಕ್'ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಯಿಂದ `ಉತ್ಕೃಷ್ಟ ಬ್ಯಾಂಕ್' ಪುರಸ್ಕೃತ ಹಾಗೂ ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್'ಸ್‍ನಿಂದ `ಶ್ರೇಷ್ಠ ಬ್ಯಾಂಕ್' ಪ್ರಶಸ್ತಿ ಪುರಸ್ಕೃತ ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ 22ನೇ ನೂತನ ಶಾಖೆಯನ್ನು ಇದೇ ಮಾ.10ನೇ ಆದಿತ್ಯವಾರ ಪೂರ್ವಾಹ್ನ 11.00 ಗಂಟೆಗೆ ವಿಕ್ರೋಲಿ ಪೂರ್ವದ ರೈಲ್ವೇ ನಿಲ್ದಾಣದ ಸನಿಹÀದ ಜೆ.ಕೆ ಟವರ್‍ನ ಕೆಳ ಮಹಡಿಯಲ್ಲಿ ಮತ್ತು 23ನೇ ನೂತನ ಶಾಖೆಯನ್ನು ಮಾ.20ನೇ ಬುಧವಾರ ಪೂರ್ವಾಹ್ನ 11.00 ಗಂಟೆಗೆ ರಾಯಗಾಢ ಜಿಲ್ಲೆಯ ನ್ಯೂಪನ್ವೇಲ್ ಅಲ್ಲಿನ ಪ್ಲಾಟ್ ಸಂಖ್ಯೆ 5ರಲ್ಲಿನ ಮಾಥೇರನ್ ರಸ್ತೆಯ ಸೆಕ್ಟರ್ 19ರ ಕ್ರಿಸ್ಟಲ್ ಅಪಾರ್ಟ್‍ಮೆಂಟ್‍ನಲ್ಲಿ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ. ಡಿಸೋಜಾ ಅಧ್ಯಕ್ಷತೆಯಲ್ಲಿ ಸೇವಾರ್ಪಣೆ ಗೊಳಿಸಲಾಗುವುದು.

  

Albert W.DSouza                       William Sequeira

 

William L.DSouza

ಉದ್ಘಾಟನಾ ಸಮಾರಂಭದಲ್ಲಿ ಗಣ್ಯ ಮಹಾನೀಯರು ಅತಿಥಿü ಅಭ್ಯಾಗತರಾಗಿ, ಬ್ಯಾಂಕ್‍ನ ಸಂಸ್ಥಾಪಕಾಧ್ಯಕ್ಷ ಜೋನ್ ಡಿ'ಸಿಲ್ವಾ, ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ ಮತ್ತು ನಿರ್ದೇಶಕರು ಆಗಮಿಸಲಿದ್ದು, ಸ್ಥನೀಯ ಚರ್ಚ್‍ನ ಪ್ರಧಾನ ಧರ್ಮಗುರುಗಳು ಶಾಖೆಗಳನ್ನು ಆಶೀರ್ವಚಿಸಿ ಹರಸಲಿದ್ದಾರೆ. ಆದುದರಿಂದ ಸೇವಾರ್ಪಣೆಗೊಳ್ಳುವ ಎರಡೂ ನೂತನ ಶಾಖೆಗಳ ಉದ್ಘಾಟನಾ ಸಮಾರಂಭದಲ್ಲಿ ಬ್ಯಾಂಕ್‍ನ ಗ್ರಾಹಕರು, ಶೇರುದಾರರು ಮತ್ತು ಹಿತೈಷಿಗಳು ಆಗಮಿಸಿ ಶಾಖೆಯ ಸರ್ವೋನ್ನತಿಗೆ ಶುಭ ಹಾರೈಸುವಂತೆ ಬ್ಯಾಂಕ್‍ನ ಮಹಾ ಪ್ರಬಂಧಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ವಿಲಿಯಂ ಎಲ್.ಡಿ'ಸೋಜಾ ಹಾಗೂ ಶಾಖಾ ಪ್ರಬಂಧಕ ಮೆರ್ವಿನ್ ಲೊಬೋ ವಿನಂತಿಸಿದ್ದಾರೆ.

 

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here