Monday 12th, May 2025
canara news

ತೆಂಗಿನಕಾಯಿ ವ್ಯಾಪಾರ ಕಾರ್ಕಳದ ರೈತರಿಗೆ ಸಹಕಾರಿಯಾಗಲಿದೆ

Published On : 11 Mar 2019   |  Reported By : Rons Bantwal


ತೋಟಗಾರಿಕಾ ರೈತರ ಕಂಪೆನಿಯ ಷೇರು ವಿತರಿಸಿ ಶಾಸಕ ಸುನೀಲ್ ಕುಮಾರ್

ಮುಂಬಯಿ, ಮಾ.05: ಕಾರ್ಕಳ ತೋಟಗಾರಿಕೆ ಉತ್ಪಾದಕ ಕಂಪೆನಿ ನಿಯಮಿತ ಸಂಸ್ಥೆಯ ವತಿಯಿಂದ ಸದಸ್ಯರಿಗೆ ಷೇರು ವಿತರಣಾ ಸಭಾಕಾರ್ಯಕ್ರಮವು ಇಂದಿಲ್ಲಿ ಕಾರ್ಕಳ ನಲ್ಲೂರು ಇಲ್ಲಿನ ಶ್ರೀ ಗಣಪತಿ ಭಜನ ಮಂದಿರದ ಸಭಾಗೃಹದಲ್ಲಿ ಜರಗಿತು. ಕಾರ್ಕಳ ಕ್ಷೇತ್ರದ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಷೇರು ವಿತರಿಸಿದರು.

ರೈತರಿಂದ ರೈತರಿಗಾಗಿ ಮೂರು ವರ್ಷಗಳ ಹಿಂದೆ ಹುಟ್ಟಿರುವ ಈ ಕಂಪೆನಿಯು ರೈತರ ಕೃಷಿ ಹಾಗೂ ತೋಟಗಾರಿಕೆಗಾಗಿ ಬೇಕಾಗುವ ರಸಗೊಬ್ಬರ, ಬಾಡಿಗೆ ಆಧಾರಿತ ಯಂತ್ರೋಪಕರಣ ಅಂತೆಯೇ ಮಾಹಿತಿ ಶಿಬಿರಗಳು, ಇತ್ತೀಚೆಗೆ ಆರಂಭಗೊಂಡ ತೆಂಗಿನಕಾಯಿ ವ್ಯಾಪಾರ ಕಾರ್ಕಳದ ರೈತರಿಗೆ ಸಹಕಾರಿಯಾಗಲಿದೆ ಎಂದು ತಮ್ಮ ಮುಖ್ಯ ಅಥಿüತಿ ಭಾಷಣದಲ್ಲಿ ಹೇಳಿದರು. ನಂತರ ಆಗಮಿಸಿರುವ ಮೂರು ಗುಚ್ಚಗಳ ರೈತ ಸದಸ್ಯರಿಗೆ ಷೇರು ವಿತರಿಸಿ ಶುಭ ಹಾರೈಸಿದರು.

ಕಂಪೆನಿಯ ಅಧ್ಯಕ್ಷ ಅಂತೋನಿ ಡಿಸೋಜಾ ನಕ್ರೆ ಮಾತನಾಡಿ ಎಲ್ಲಾ ಸದಸ್ಯರ ಸಹಕಾರ ಕಂಪೆನಿಯ ಬೆಳವಣಿಗೆಗೆ ಪೂರಕವಾಗಲಿದೆ ಎಂದರು.

ಉಪಾಧ್ಯಕ್ಷ ಹರೀಶ್ಚಂದ್ರ ತೆಂಡುಲ್ಕರ್ ಸ್ವಾಗತಿಸಿದರು. ಕಂಪೆನಿಯ ಮುಖ್ಯ ನಿರ್ವಹಣಾ ಅಧಿಕಾರಿ ಗಂಗಾಧರ್ ಆರ್.ಪಣಿಯೂರು ಪ್ರಸ್ತಾವನೆ ಗೈದರು. ನಿರ್ದೇಶಕಿ ವೀಣಾ ನಾಯಕ್ ಪ್ರಾರ್ಥನೆಯನ್ನಾಡಿದರು. ನಿರ್ದೇಶಕರಾದ ಧರಣೇಂದ್ರ ಕಾರ್ಯಕ್ರಮ ನಿರೂಪಿಸಿದ್ದು, ನಿರ್ದೇಶಕ ಅನಿಲ್ ಪೂಜಾರಿ ಧನ್ಯವದಿಸಿದÀರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here