Thursday 23rd, May 2019
canara news

ಮಾ.17: ಕನ್ನಡ ವೆಲ್ಫೇರ್ ಸೊಸೈಟಿ ಘಾಟ್‍ಕೋಪರ್‍ನ ಸಭಾಗೃಹದಲ್ಲಿ

Published On : 14 Mar 2019   |  Reported By : Rons Bantwal


ಮಯೂರವರ್ಮ ಸಾಂಸ್ಕøತಿಕ ಪ್ರತಿಷ್ಠಾನದಿಂದ `ಅಡುಗುಲಜ್ಜಿಯ ಕಥಾ ಕಮ್ಮಟ'

ಮುಂಬಯಿ, ಮಾ.11: ಮಯೂರವರ್ಮ ಸಾಂಸ್ಕøತಿಕ ಪ್ರತಿಷ್ಠಾನವು ಕನ್ನಡ ವೆಲ್ಫೇರ್ ಸೊಸೈಟಿ ಘಾಟ್‍ಕೋಪರ್ ಇವರ ಸಹಕಾರದೊಂದಿಗೆ ಇದೇ ಮಾ.17ರ ರವಿವಾರ ಪೂರ್ವಹ್ನ 10.30 ಗಂಟೆಗೆ ಘಾಟ್‍ಕೋಪರ್ ಪಂತ್‍ನಗರದಲ್ಲಿನ ಕನ್ನಡ ವೆಲ್ಫೇರ್ ಸೊಸೈಟಿಯ ಘಾಟ್‍ಕೋಪರ್ ಬಾಬಾ'ಸ್ ಮಹೇಶ್ ಎಸ್.ಶೆಟ್ಟಿ ಸಭಾಗೃಹದಲ್ಲಿ `ಅಡುಗುಲಜ್ಜಿಯ ಕಥಾ ಕಮ್ಮಟ' ಹಮ್ಮಿಕೊಂಡಿದೆ.

    

Sunita M Shetty                            Suresh S. Bhandary                             Vishwanath Dodmane

ಪ್ರತಿಷ್ಠಾನದ ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಡಾ| ಸುನೀತಾ ಎಂ.ಶೆಟ್ಟಿ, ವಿ.ಆರ್ ಭಟ್, ಪೆÇ್ರ| ವೆಂಕಟೇಶ ಪೈ ಡೊಂಬಿವಿಲಿ, ಡಾ| ಕರುಣಾಕರ ಶೆಟ್ಟಿ, ನಾರಾಯಣ ಶೆಟ್ಟಿ ನಂದಳಿಕೆ, ಸುಜಾತ ಶೆಟ್ಟಿ, ರಾಜೇಶ್ ಗೌಡ, ವಿಶ್ವನಾಥ ಶೆಟ್ಟಿ ಪೇತ್ರಿ, ಶಾರದಾ ಅಂಬೆಸಂಗೆ, ಸುಮಿತ್ರಾ ಭಟ್, ಗೀತಾ ಹೆಗಡೆ, ಸೋಮಶೇಖರ ಮಸೋಳಿ, ಲತಾ ಸಂತೋಷ್ ಶೆಟ್ಟಿ, ಶಾಂತಿಲಕ್ಷ್ಮೀ ಉಡುಪ, ಪ್ರಭಾಕರ ನಾಯಕ್ ಪಾಲ್ಗೊಂಡು ಅಡುಗುಲಜ್ಜಿಯ ಕಥೆಗಳನ್ನು ಸಾದರ ಪಡಿಸಲಿರುವರು.

ಯಾವುದೇ ಇಲೆಕ್ಟ್ರಾನಿಕ್ ಮಾಧ್ಯಮ ಇಲ್ಲದ ಹಿಂದಿನ ಕಾಲದ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಾಯಕವಾಗಿದ್ದ ಅಡುಗುಲಜ್ಜಿಯ ಕಥೆಗಳು ಮಕ್ಕಳನ್ನು ಮಲಗಿಸುವ ಸಾಧನವೂ ಆಗಿದ್ದವು. ಅಷ್ಟಕ್ಕೇ ಸೀಮಿತವಾಗದೆ ಒಬ್ಬರ ಬಾಯಿಂದ ಇನ್ನೊಬ್ಬರನ್ನು ತಲುಪುತ್ತಿದ್ದ ಈ ಕಥೆಗಳು ಜೀವನ ಮೌಲ್ಯಗಳನ್ನು ಪ್ರತಿಪಾದಿಸುವಲ್ಲಿ ಸಹಕಾರಿಯಾಗಿದ್ದವು. ಎಂತಹ ಹಟ ಮಾಡುವ ಮಕ್ಕಳನ್ನಾದರೂ ಅಜ್ಜ-ಅಜ್ಜಿಯಂದಿರು ಕಥೆ ಹೇಳುತ್ತೇನೆಂದು ಸಮಾಧಾನ ಪಡಿಸುತ್ತಿದ್ದ ಆ ದಿನಗಳು ಜಾನಪದರ ದಿನಗಳಾಗಿದ್ದವು ಎನ್ನಬಹುದು.

ಯಾವುದೇ ಫಲಾಪೇಕ್ಷೆ, ಪ್ರಚಾರದ ಗೊಡವೆಗಳಿಲ್ಲದೆ ಸಾಗುತ್ತಿದ್ದ ಅಂದಿನ ದಿನಗಳಲ್ಲಿ ಈ ಅಡುಗುಲಜ್ಜಿಯ ಕಥೆಗಳು ಒಂದು ಕಾಲದ ಸಂಸ್ಕøತಿಯನ್ನು ಮತ್ತೊಂದು ಕಾಲದಲ್ಲಿ ಪರಿಚಯಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದವು. ಇಂತಹ ಜಾನಪದ ಅಡುಗುಲಜ್ಜಿಯ ಕಥೆಗಳಿಂದ ಅಂದಿನ ಕಾಲಮಾನದ ಸ್ಥಿತಿಗತಿ ಹೇಗಿತ್ತೆಂಬುದರ ಮಾಹಿತಿಯನ್ನು ತಿಳಿಸುತ್ತವೆ.

ಅಂದಿನ ದಿನದಲ್ಲಿ ವ್ಯಾಪಾರ-ವ್ಯವಹಾರ, ಕೃಷಿ-ಚಟುವಟಿಕೆ, ಧಾರ್ಮಿಕತೆ, ಕಲೆ - ಸಾಹಿತ್ಯ ಸೇರಿದಂತೆ ಒಂದು ಕಾಲದ ಜನಜೀವನವನ್ನು ತಕ್ಕಮಟ್ಟಿಗೆ ಪರಿಚಯಿಸುವ ಈ ಕಥೆಗಳು ಮಕ್ಕಳಿಗೆ ಆನಂದವನ್ನು ನೀಡುವ ಪ್ರಮುಖ ಮಾಧ್ಯಮವಾಗಿತ್ತು. ಈ ಕಥಾ ಕಮ್ಮಟಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕಾಗಿ ಸಾಂಸ್ಕೃತಿಕ ಪ್ರತಿಷ್ಠಾನದ ಗೌ| ಪ್ರ| ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಈ ಮೂಲಕ ವಿನಂತಿದ್ದಾರೆ.

 
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here